ಕೆಲವರಿಗೆ ಗ್ಯಾಸ್ಟ್ರಿಕ್ ಆದಾಗ ವಾಂತಿ ಆಗುತ್ತೆ ಜೊತೆಗೆ ಹೊಟ್ಟೆ ಉರಿಯುತ್ತೆ , ಹೊಟ್ಟೆ ನೋವು ಸಹ ಆಗುತ್ತೆ.
ಆದ್ದರಿಂದ ಇಂದಿನ ನಮ್ಮ ಲೇಖನದಲ್ಲಿ ಹೊಟ್ಟೆ ನೋವು , ಹೊಟ್ಟೆ ಉರಿ , ವಾಂತಿ ಹಾಗೂ ಗ್ಯಾಸ್ಟ್ರಿಕ್ ಪ್ರಾಬ್ಲಂಗೆ ಒಂದು ಕಷಾಯವನ್ನು ಇಲ್ಲಿ ತಿಳಿಸಲಿದ್ದೇವೆ .
ನನ್ನಾರಿ ಅಥವಾ ಹಾಲು ಬಳ್ಳಿ ಬೇರು.ಈ ಸೊಗಡೆ ಬೇರು ಸೊಗಸಾದ ಬೇರಾಗಿದೆ.ಸೊಗಡೆ ಬೇರಿನ ಮೂಲಕ ನಮ್ಮ ಅಸಿಡಿಟಿಯನ್ನು ನಿಯಂತ್ರಣಕ್ಕೆ ತರಬಹುದಾಗಿದೆ ಅದರ ಜೊತೆಗೆ ದೇಹವನ್ನು ತಂಪು ಮಾಡಿಕೊಳ್ಳಬಹುದು ಹಾಗೂ ಇನ್ನಿತರ ಆರೋಗ್ಯ ಪ್ರಯೋಜನಗಳೂ ಸಹ ಇವೆ.
ಖಾರದ ಆಹಾರದಿಂದ ಅಥವಾ ಮಾನಸಿಕ ಒತ್ತಡದಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದಿಲ್ಲ
ಬದಲಾಗಿ ಕೆಲವು ಬ್ಯಾಕ್ಟೀರಿಯಾದಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ.ನನ್ನಾರಿ ಕಷಾಯವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ನಿಯಂತ್ರಣಕ್ಕೆ ಬರಬಹುದು.ಇದು ವೈಜ್ಞಾನಿಕವಾಗಿ ಸಾಬೀತಾಗಿದೆ.
ನನ್ನಾರಿ ಕಷಾಯ ಮಾಡುವ ವಿಧಾನ :ಮೊದಲಿಗೆ ನನ್ನಾರಿ ಪೌಡರನ್ನು ಗ್ರಂಧಿಗೆ ಅಂಗಡಿಗಳಲ್ಲಿ ತೆಗೆದಿಟ್ಟುಕೊಳ್ಳಬೇಕು.1 ಲೀಟರ್ ನೀರಿಗೆ 1 ಮುಷ್ಟಿ ನನ್ನಾರಿ ಪೌಡರ್ ಅಥವಾ ನನ್ನಾರಿ ಬೇರನ್ನು ಹಾಕಿ 10 ರಿಂದ 15 ನಿಮಿಷ ಕುದಿಸಿ 1 ಲೋಟದಲ್ಲಿ ಸೋಸಿಕೊಂಡು ಕುಡಿಯಿರಿ.ಆದಷ್ಟೂ ನೈಸರ್ಗಿಕವಾಗಿ ಬೇರನ್ನು ತಂದಿಟ್ಟು ಅದನ್ನು ಒಣಗಿಸಿ ಮನೆಯಲ್ಲಿಯೇ ಪೌಡರ್ ಮಾಡಿಕೊಳ್ಳುವುದು ಉತ್ತಮ.
ದಿನಕ್ಕೆ 1ಲೀಟರ್ ನಷ್ಟು ಈ ಕಷಾಯವನ್ನು ಸೇವಿಸುತ್ತಾ ಬಂದರೆ ನಿಮಗೆ ಇದರ ಲಾಭ ಕ್ರಮೇಣ ತಿಳಿಯುತ್ತದೆ.
ಧನ್ಯವಾದಗಳು.