ಅನ್ನ ತೊಳೆದ ನೀರು ಗಂಜಿ ಕುಡಿದರೆ ಏನಾಗುತ್ತದೆ ಗೊತ್ತಾ?

Health & Fitness

ಅಕ್ಕಿಯ ಗಂಜಿ

ಅಕ್ಕಿ ಗಂಜಿಯು ಸಂಸ್ಕೃತದಲ್ಲಿ ಕಾಂಜಿ ಎಂದು ಕರೆಯಲ್ಪಡುತ್ತದೆ.ಇಂದಿನ ಕಾಲಮಾನದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕುಕ್ಕರ್ ಇರುವುದರಿಂದ ಗಂಜಿಯೂ ದೊರೆಯುವುದಿಲ್ಲ ಆದರೆ ಹಿಂದಿನ ಕಾಲದಲ್ಲಿ ಅನ್ನವನ್ನು ಬಸಿಯುತ್ತಿದ್ದರು ಅಂದರೆ ಅಕ್ಕಿಗೆ ನೀರನ್ನು ಹಾಕಿ ಸ್ವಲ್ಪ ಸಮಯದ ಬಳಿಕ ಅನ್ನದ ಗಂಜಿಯನ್ನು ಬಸಿಯಿತ್ತಿದ್ದರು.

ಈಗ ಪ್ರತಿಯೊಬ್ಬರ ಮನೆಯಲ್ಲಿಯೂ ಕುಕ್ಕರ್ ಇದೆ ಆದ್ದರಿಂದ ಬಹುತೇಕ ಎಲ್ಲರೂ ಕುಕ್ಕರ್ ನಲ್ಲಿಯೇ ಅನ್ನವನ್ನು ಮಾಡುತ್ತಾರೆ ಆದರೆ ಅನ್ನವನ್ನು ಸರಿಯಾಗಿ ಮಾಡುವ ವಿಧಾನ ಯಾವುದೆಂದರೆ ಅದು ಪಾತ್ರೆಯಲ್ಲಿ ಮಾಡುವುದು ಮತ್ತು ಗಂಜಿಯನ್ನು ತೆಗೆಯುವುದು.

ಇನ್ನು ಈ ರೀತಿ ಪಾತ್ರೆಯಲ್ಲಿ ಮಾಡುವಾಗ ಅನ್ನದ ಗಂಜಿಯನ್ನು ಈಗಿನ ಕಾಲದ ಅನೇಕರು ತಿಳಿಯದೆ ಚೆಲ್ಲುತ್ತಾರೆ ಆದರೆ ಇದನ್ನು ಸೇವಿಸುವುದರಿಂದ ನಮ್ಮ ದೇಹದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭಗಳಿವೆ ಎಂಬುದನ್ನು ತಿಳಿಯೋಣ ಬನ್ನಿ.

ಅನ್ನದ ಅಕ್ಕಿಯ ಗಂಜಿ ಯನ್ನು ಬಸಿದು ಕುಡಿಯಿರಿ.

ಈ ಅಕ್ಕಿಯ ಗಂಜಿಯಲ್ಲಿ ದೇಹವನ್ನು ದಪ್ಪ ಮಾಡುವ ಅಂಶವಿದೆ ಹಾಗೂ ಇದು ಬಹುಬೇಗ ಜೀರ್ಣವಾಗದೆ ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.ಇನ್ನೂ ಅನ್ನವನ್ನು ಮಾಡುವಾಗ ಈ ರೀತಿ ಅನ್ನದ ಗಂಜಿಯನ್ನು ಬಸಿಯುವುದರಿಂದ ಅನ್ನವು ನಮ್ಮ ಹೊಟ್ಟೆಯಲ್ಲಿ ಬೇಗ ಜೀರ್ಣಗೊಳ್ಳುತ್ತದೆ.

ಈ ರೀತಿ ಅಕ್ಕಿಯ ಗಂಜಿ ಯನ್ನು ಚಿಕ್ಕ ಮಕ್ಕಳಿಗೆ ಮತ್ತು ದಪ್ಪ ಆಗಲು ಬಯಸುವವರು ಹೆಚ್ಚಾಗಿ ಕುಡಿಸಿ.ಇನ್ನು ಈ ಅನ್ನದ ಗಂಜಿ ಗೆ ಸ್ವಲ್ಪ ಬೆಲ್ಲ ,ಏಲಕ್ಕಿ ಪುಡಿ ಬೆರೆಸಿ ಸೇವಿಸಿದರೆ ಇನ್ನೂ ಉತ್ತಮ.ಹೀಗೆ ಮಾಡುವುದರಿಂದ ಮಕ್ಕಳಿಗೆ ಉತ್ತಮ ಪೋಷಾಕಾಂಶ ದೊರೆಯಲಿದೆ.

ಮಕ್ಕಳು ಸದಾ ಕಾಲ ಆ್ಯಕ್ಟಿವ್ ಆಗಿರುವುದರಿಂದ ಅವರಿಗೆ ಬೇಗ ಜೀರ್ಣವಾಗುತ್ತದೆ ಆದರೆ ಹಿರಿಯರು ಅಷ್ಟಾಗಿ ಆ್ಯಕ್ಟಿವ್ ಇಲ್ಲದಿರುವ ಕಾರಣ ಅವರಿಗೆ ಜೀರ್ಣವಾಗದೆ ಅದು ಬೊಜ್ಜು ಪರಿವರ್ತನೆಗೊಳ್ಳುತ್ತದೆ.

ಇನ್ನು ರಾತ್ರಿ ಉಳಿದ ಅನ್ನದಿಂದ ಸಹ ಗಂಜಿಯನ್ನು ತಯಾರಿಸಬಹುದಾಗಿದೆ.ಇನ್ನು ರಾತ್ರಿ ಉಳಿದ ಅನ್ನವನ್ನು ಬೆಳಗ್ಗೆ ಗಂಜಿ ರೀತಿಯಲ್ಲಿ ಸೇವಿಸಿದರೆ ತುಂಬಾನೆ ಒಳ್ಳೆಯದು. ಇವಾಗಲೂ ಹಲವು ಕಡೆ ಬೆಳಗ್ಗೆ ಗಂಜಿ ಸೇವನೆ ಮಾಡುವ ಅಭ್ಯಾಸವಿದೆ ಏಕೆಂದರೆ ಗಂಜಿಯಲ್ಲಿ ದೇಹಕ್ಕೆ ಬೇಕಾಗಿರುವ ವಿಟಮಿನ್ಸ್ಗಳು ಇದೆ ಆದರೆ ನಾವೆಲ್ಲ ಗಂಜಿಯನ್ನು ಸೇವಿಸುವುದೇ ಇಲ್ಲ ಎಂದೇ ಹೇಳಬಹುದು.

ಗಂಜಿಯನ್ನು ತಯಾರಿಸುವುದು ಹೇಗೆ ?

ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ.ರಾತ್ರಿ ಉಳಿದಿದ್ದು ಮಡಿಕೆಯಲ್ಲಿ ಅಥವಾ ಪಾತ್ರೆಯಲ್ಲಿ ಹಾಕಿ ಅನ್ನ ಮುಳುಗುವವರೆಗೆ ಪಾತ್ರೆಗೆ ನೀರನ್ನು ಹಾಕಿ ಮುಚ್ಚಿಡಿ. ಮಾರನೇ ದಿನ ಆಹಾರದ ಬದಲಿಗೆ ಇದನ್ನು ಸೇವಿಸಿ.ಗಂಜಿಯನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಕಬ್ಬಿಣಾಂಶದ ಪ್ರಮಾಣ ಮತ್ತು ಕ್ಯಾಲ್ಷಿಯಂ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ನಮ್ಮ ದೇಹಕ್ಕೆ ಶಕ್ತಿ ಹಾಗೂ ದೇಹವನ್ನು ತಂಪಾಗಿರಿಸಲು ಕೂಡ ಸಹಾಯವಾಗುತ್ತದೆ.

ಇನ್ನು ಅನ್ನದಿಂದ ತಯಾರಿಸಿದ ಗಂಜಿಯನ್ನು ಸೇವಿಸುವುದರಿಂದ ದೇಹಕ್ಕೆ ಸಿಗುವ ಇತರ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ. ದೇಹದಲ್ಲಿ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ.ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಗಂಟು ನೋವು , ಚರ್ಮದ ಸುಕ್ಕನ್ನು ತಡೆಯುತ್ತದೆ, ದೇಹವು ಸದೃಢ ಮತ್ತು ಶಕ್ತಿಯುತವಾಗುತ್ತದೆ , ಮಲಬದ್ಧತೆ ಸಮಸ್ಯೆಯನ್ನು ತಡೆಗಟ್ಟುತ್ತದೆ ,ಅಲರ್ಜಿ ಅಲ್ಸರ್ ಗಳನ್ನು ತಡೆಗಟ್ಟುತ್ತದೆ ,ಬೇಗ ಹಸಿವು ಆಗುವುದಿಲ್ಲ , ಬೊಜ್ಜು ಬೆಳೆಯುವುದಿಲ್ಲ ,ಸಕ್ಕರೆ ಕಾಯಿಲೆ ಎಂಬುದು ಹತ್ತಿರವೂ ಸುಳಿಯುವುದಿಲ್ಲ .ಇಷ್ಟೆಲ್ಲ ಲಾಭ ನಿಮಗೆ ಉಪಾಹಾರ ಸೇವಿಸುವುದರಿಂದಲೂ ಸಿಗುವುದಿಲ್ಲ.ಗಂಜಿ ಎಂಬ ಕೀಳು ಭಾವನೆಯನ್ನು ಬಿಟ್ಟುಬಿಡಿ ಆರೋಗ್ಯ ಕಾಪಾಡಲು ಹಳೆಯ ಕಾಲದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿ.

ಧನ್ಯವಾದಗಳು.

Leave a Reply

Your email address will not be published.