ನಾಲಿಗೆ ಹೇಳುವ ನಿಮ್ಮ ಆರೋಗ್ಯದ ರಹಸ್ಯ!

Health & Fitness

ನಮ್ಮ ನಾಲಿಗೆಯ ಬಣ್ಣ ನೋಡಿಕೊಂಡರೆ ನಮಗೆ ಗೊತ್ತಾಗುತ್ತೆ ನಾವು ಆರೋಗ್ಯದಿಂದ ಇದ್ದೇವೋ ಅಥವಾ ಅನಾರೋಗ್ಯದಿಂದ ಇದ್ದೇವೋ ಅಂತ.ಹೇಗೆ ಅಂತ ಹೇಳ್ತೀವಿ ಮುಂದೆ ಓದಿ..!

ನಮ್ಮ ನಾಲಿಗೆ ಇರುವುದು ಬರೀ ಟೇಸ್ಟ್ ಅನ್ನು ಸವಿಯಲಿಕ್ಕೆ ಅಲ್ಲ ಬದಲಾಗಿ ಆ ನಾಲಿಗೆ ಬಣ್ಣದಿಂದ ಗೊತ್ತಾಗುತ್ತೆ ನಮಗೆ ಯಾವ ಕಾಯಿಲೆ ಇರಬಹುದು ಅಂತ .

ಸ್ನೇಹಿತರೆ ನೀವು ನೋಡಿರಬಹುದು ನಮಗೇನಾದರೂ ಆರೋಗ್ಯದ ಸಮಸ್ಯೆ ಇದೆ ಅಂದರೆ ನಾವು ಡಾಕ್ಟರ್ ಹತ್ರ ಹೋಗುತ್ತೇವೆ ,ಡಾಕ್ಟರ್ ಫಸ್ಟು ನಮ್ಮ ನಾಲಿಗೆಯನ್ನು ಟೆಸ್ಟ್ ಮಾಡ್ತಾರೆ ,ಆ ನಾಲಿಗೆ ಮುಖಾಂತರವೇ ಅವರು ತಿಳಿದುಕೊಳ್ಳುತ್ತಾರೆ ಯಾವ ಕಾಯಿಲೆ ಇರಬಹುದು ಅಂತ.ಹಾಗಾಗಿ ನಮ್ಮ ನಾಲಿಗೆಯ ಬಣ್ಣ ನೋಡುವ ಮೂಲಕ ನಮಗೆ ಗೊತ್ತಾಗುತ್ತೆ ಯಾವ ಕಾಯಿಲೆ ನಮಗೆ ಬರಬಹುದು ಅಂತ .ಸುಮಾರು 50% ಗಿಂತ ಹೆಚ್ಚು ಬ್ಯಾಕ್ಟೀರಿಯಾಸ್ ನಮ್ಮ ನಾಲಿಗೆ ಮೇಲೆ ಇರುತ್ತದೆ ಎಂದು ರಿಸರ್ಚ್ ತಿಳಿಸಿದೆ,
ಹಾಗಾಗಿ ನಮ್ಮ ನಾಲಿಗೆ ಎಷ್ಟು ಕ್ಲೀನಾಗಿ ಇರುತ್ತೋ ಅಷ್ಟು ಒಳ್ಳೆಯದು.

ನಮ್ಮ ನಾಲಿಗೆ ಬಣ್ಣ ಲೈಟ್ ಪಿಂಕ್ ಕಲರ್ ನಲ್ಲಿದ್ದಾರೆ ಅದು ನಾವು ಹೆಲ್ತಿ ಆಗಿರುವುದಕ್ಕೆ ಒಂದು ಸಾಕ್ಷಿ ,ಹಾಗಾಗಿ ನಾಲಿಗೆ ಬಣ್ಣ ಲೈಟ್ ಪಿಂಕ್ ಕಲರ್ ಇದ್ರೆ ಅದು ಹೆಲ್ತಿ ಯಾಗಿದಿರಿ ಅಂತ ಅರ್ಥ.

ನಾಲಿಗೆ ತುಂಬಾ ಬಿಳಿಯಾಗಿದ್ದರೆ ಅದರ ಅರ್ಥ ಆ ವ್ಯಕ್ತಿಯಲ್ಲಿ ರಕ್ತ ಕಡಿಮೆಯಿದೆ ಹಿಮೋಗ್ಲೋಬಿನ್ ಪ್ರಾಬ್ಲಮ್ ಇದೆ ಅಂತ ಅರ್ಥ.ಜೊತೆಗೆ ಇದು ಇನ್’ಡೈಜೆಶನ್ ಪ್ರಾಬ್ಲಂ ಮತ್ತು ಅಸಿಡಿಟಿ ಪ್ರಾಬ್ಲಮ್ ಗೆ ಕಾರಣವಾಗಿರುತ್ತದೆ.

ನಾಲಿಗೆ ತುಂಬಾ ಅರಿಶಿನ ಬಣ್ಣದಲ್ಲಿದೆ ಅಂದ್ರೆ ಅದಕ್ಕೆ ಕಾರಣ ನಮ್ಮಲ್ಲಿ ವೈರಲ್ ಇನ್ಫೆಕ್ಷನ್ ಇದೆ ಅಂತ ಅರ್ಥ.ಜೊತೆಗೆ ಬಾಡಿ ತುಂಬಾ ಹೀಟ್ ಆಗಿದೆ ಅಂತ ಅರ್ಥ,ಹಾಗೂ ಇದು ಇನ್’ಡೈಜೆಶನ್ ಪ್ರಾಬ್ಲಮ್ನ ಒಂದು ಲಕ್ಷಣ ಆಗಿರುತ್ತೆ.

ನಮ್ಮ ನಾಲಿಗೆ ತುಂಬಾ ಕೆಂಪು ಬಣ್ಣದಲ್ಲಿದ್ರೆ ಅದಕ್ಕೆ ಕಾರಣ ನಮ್ಮಲ್ಲಿ ಜ್ವರ ಇದೆಯಂತ , ಬಾಡಿ ತುಂಬಾ ಇನ್ಫೆಕ್ಟಡ್ ಆಗಿದೆ ಅಂತ ಅರ್ಥ.

ನಾಲಿಗೆ ತಿಳಿ ಅರಿಶಿನ ಬಣ್ಣದಲ್ಲಿದ್ರೆ ಅದು ಇನ್ಸೋಮ್ನಿಯಾ ಪ್ರಾಬ್ಲಮ್ನ ಒಂದು ಲಕ್ಷಣ ಆಗಿರುತ್ತೆ.ಇನ್ಸೊಮ್ನಿಯಾ ಅಂದ್ರೆ ನಿದ್ರೆ ಪ್ರಾಬ್ಲಮ್ ಇರುವಂತದ್ದು ಅಂದ್ರೆ ಸರಿಯಾಗಿ ನಿದ್ರೆ ಬರದೆಇರುವುದು.ಯಾರು ತುಂಬ ಸುಸ್ತಾಗಿರ್ತಾರೋ ಅವರ ನಾಲಿಗೆ ಕೂಡ ತಿಳಿ ಅರಿಶಿನ ಬಣ್ಣದ್ದಾಗಿರುತ್ತದೆ.ಕಡಿಮೆ ರಕ್ತ ಕೂಡ ಇದಕ್ಕೆ ಕಾರಣ ಆಗುತ್ತೆ.

ನಾಲಿಗೆಯ ಮುಂಭಾಗದಲ್ಲಿ ಕೆಂಪಾಗಿದ್ದರೆ ಅದರರ್ಥ ಆ ವ್ಯಕ್ತಿ ದಿನದಿಂದ ದಿನಕ್ಕೆ ವೀಕ್ ಆಗ್ತಾ ಇದಾರಂತ ಅರ್ಥ,ಜೊತೆಗೆ ಅದು ಅವರಲ್ಲಿ ಮಾನಸಿಕ ಕಿರಿಕಿರಿಗೆ ಕಾರಣ ಆಗಿರುತ್ತದೆ.ಇದು ಹೆಚ್ಚಾಗಿ ನಾವು ನೋಡುವಂಥದ್ದು ಮಹಿಳೆಯರಲ್ಲಿ ಅದರಲ್ಲೂ ಅವರು ಮ್ಯಾನೋಪೋಸ್ ಪೀರಿಯಡಿಗೆ ಬಂದಾಗಂತೂ ಈ ಸಮಸ್ಯೆ ಇದ್ದೇ ಇರುತ್ತದೆ.ಒಂದು ವೇಳೆ ನಾಲಿಗೆಯ ಮೇಲೆ ಬಿಳಿ ಕಲೆಗಳಿದ್ದರೆ ಅದು ನಮ್ಮ ಬಾಡಿ ಇನ್ಪೆಕ್ಟಡ್ ಆಗಿದೆ ಅಂತ ಅರ್ಥ .ನಮ್ಮ ದೇಹ ತುಂಬಾ ಟಾಕ್ಸಿಫೈಡ್ ಆಗಿದೆ ಎಂದು ಅರ್ಥ .

ನಾಲಿಗೆ ಏನಾದ್ರೂ ನೀಲಿ ಬಣ್ಣದಲ್ಲಿದ್ದರೆ ಅದರರ್ಥ ನಮ್ಮ ಬಾಡಿಯಲ್ಲಿ ಕೊಲೆಸ್ಟ್ರಾಲ್ ಜಾಸ್ತಿ ಆಗ್ತಾ ಇದೆ ಅಂತ,ಜೊತೆಗೆ ನಮ್ಮ ದೇಹದಲ್ಲಿ ಸರಿಯಾಗಿ ರಕ್ತ ಸಂಚಾರ ಆಗ್ತಾ ಇಲ್ಲ ಅಂತ ತಿಳಿಸುತ್ತೆ.

ಒಂದ್ವೇಳೆ ನಿಮ್ಮ ನಾಲಿಗೆ ಮೇಲೆ ಸಣ್ಣಸಣ್ಣ ಗುಳ್ಳೆಗಳಾಗಿದ್ರೆ ದಯವಿಟ್ಟು ನಿಮ್ಮ ಡಾಕ್ಟರ್ನ ಕನ್ಸಲ್ಟ್ ಮಾಡಿ ಯಾಕಂದ್ರೆ ಆ ಗುಳ್ಳೆಗಳು ನೆಕ್ಸ್ಟ್ ಅಲ್ಸರ್ ಪ್ರಾಬ್ಲಂಗೆ ಕಾರಣ ಆಗಬಹುದು. ಹಾಗಾಗಿ ಆದಷ್ಟು ಬೇಗ ನಿಮ್ಮ ಡಾಕ್ಟರ್ನ ಕನ್ಸಲ್ಟ್ ಮಾಡಿ ತಿಳ್ಕೊಳಿ .

ಇದೆಲ್ಲದಕ್ಕೂ ಕಂಪೇರ್ ಮಾಡಿದ್ರೆ ನಮಗೆ ನಮ್ಮ ನಾಲಿಗೆ ಯಾವಾಗಲೂ ಲೈಟ್ ಪಿಂಕ್ ಕಲರ್ ನಲ್ಲಿ ಇದ್ರೇನೇ ನಾವು ಹೆಲ್ತಿಯಾಗಿ ದ್ದೀವಿ ಅಂತ ತಿಳಿಸುತ್ತೆ .ಒಂದು ವೇಳೆ ಇಲ್ಲಾಂದ್ರೆ ಅನಿಮಿಯಾ , ಡಿ ಹೈಡ್ರೇಶನ್ ವಿಟಮಿನ್ ಡೆಫಿಸೆನ್ಸಿ ಅಂತಹ ಪ್ರಾಬ್ಲಂಗಳು ನಿಮಗೆ ಬರುವಂತಹ ಚಾನ್ಸಸ್ ಇರುತ್ತೆ.

ನಮ್ಮ ನಾಲಿಗೆ ಅನ್ ಹೆಲ್ತಿ ಆಗ್ಲಿಕ್ಕೆ , ಡರ್ಟಿ ಆಗ್ಲಿಕ್ಕೆ ಕಾರಣಾನೆ ನಾವು ಬಾಯಿಂದ ಉಸಿರಾಡುತ್ತಿರುವುದು ,
ಹಾಗಾಗಿ ಬಾಯಿಂದ ಉಸಿರಾಡಬೇಡಿ ಆದಷ್ಟು ಮೂಗಿಂದ ಉಸಿರಾಡಿ .

ಜೊತೆಗೆ ನಾವು ಡೈಲಿ ಹಲ್ಲಿನ ಬ್ರಶ್ ಮಾಡ್ತೀವಿ ಆದರೆ ನಾಲಿಗೆ ಕ್ಲೀನ್ ಮಾಡೋದನ್ನು ಮರೆತು ಬಿಡುತ್ತೇವೆ ,
ದಯವಿಟ್ಟು ನಾಲಿಗೆಯನ್ನು ಸಹ ಕ್ಲೀನ್ ಮಾಡಿ ನಾಲಿಗೆ ಮೇಲಿರುವಂತೆ ವೈಟ್ ಕೋಟಡ್ ರಿಮೂ ಮಾಡಿ ನಾಲಿಗೆ ಕ್ಲೀನ್ ಮಾಡಿಕೊಳ್ಳಿ.

ಧನ್ಯವಾದಗಳು.

Leave a Reply

Your email address will not be published.