ಗಂಡಸರು ಪ್ರತಿದಿನ ಅಂಜೂರ ತಿಂದರೆ ಅವರ ದೇಹದಲ್ಲಿ ಏನಾಗುತ್ತದೆ ಗೊತ್ತಾ?

Health & Fitness

ಅಂಜೂರ

ಅಂಜೂರವನ್ನು ಹತ್ತಿಹಣ್ಣು ಎಂದು ಸಹ ಕರೆಯಲಾಗುತ್ತದೆ.ಅಂಜೂರದ ಹಣ್ಣಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿರುತ್ತದೆ.ರಕ್ತ ಕಡಿಮೆ ಇರುವವರು ಅಂಜೂರದ ಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳಬಹುದಾಗಿದೆ.ಗರ್ಭಿಣಿ ಸ್ತ್ರೀಯರಿಗೆ , ಬಾಣಂತಿಯರಿಗೆ ಈ ಈ ಅಂಜೂರದ ಹಣ್ಣು ಬಹಳ ಉತ್ತಮ ಲಾಭ ನೀಡಬಲ್ಲದು.

ಈ ಅಂಜೂರದ ಹಣ್ಣನ್ನು ಎಲ್ಲರು ಸೇವಿಸಬಹುದಾಗಿದೆ.ಅದರಲ್ಲೂ ಋತುಮತಿ ಸ್ತ್ರೀಯರು , ಋತು ಸ್ರಾವ ಹೆಚ್ಚಾಗಿರುವವರು ,ಗ ರ್ಭಕ್ಕೆ ಸಂಬಂಧಪಟ್ಟ ತೊಂದರೆ ಇರುವವರು ಅಥವಾ ಈ ಮೇಲೆ ತಿಳಿಸಿದ ಯಾವುದೇ ರೋಗವು ನಿಮ್ಮ ಬಳಿ ಸುಳಿಯಬಾರದು ಎಂದಾದಲ್ಲಿ ಈ ಅಂಜೂರದ ಹಣ್ಣನ್ನು ತಪ್ಪದೆ ತಿನ್ನಲೆಬೆಕು.ಪ್ರತಿದಿನ ಅಂಜೂರದ ಹಣ್ಣನ್ನು ಸೇವಿಸಿದರೆ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ.

ಇನ್ನೂ ಅಂಜೂರದ ಹಣ್ಣನ್ನು ಹಾಗೆಯೇ ತಿನ್ನುವ ಬದಲು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದರ ಪೋಷಾಕಾಂಶ ನಮ್ಮ ದೇಹಕ್ಕೆ ಬಹುಬೇಗನೆ ಸಿಗುತ್ತದೆ.ಅಂಜೂರದ ಹಣ್ಣನ್ನು ರಕ್ತವರ್ಧಕ ಎಂದರೆ ತಪ್ಪಾಗಲಾರದು.ಅಂಜೂರದ ಹಣ್ಣನ್ನು ಔಷಧಿಯ ರೂಪದಲ್ಲಿ ತಿನ್ನುವುದಾದರೆ ಊಟವಾದ ನಂತರ ಸೇವಿಸಬಹುದು .ಟಾನಿಕ್ ರೂಪದಲ್ಲಿ ಸೇವಿಸುವುದಾದರೆ ಊಟಕ್ಕಿಂತ ಮುಂಚೆ ಸೇವಿಸಬೇಕು .

ಉದಾಹರಣೆಗೆ ನಿಮಗೆ ಹಿಮೋಗ್ಲೋಬಿನ್ ಅಂಶ ಕಡಿಮೆ ಇದ್ದಲ್ಲಿ ನೀವು ಊಟಕ್ಕೆ ಮುಂಚೆ ಟಾನಿಕ್ ರೂಪದಲ್ಲಿ ಅಂಜೂರದ ಹಣ್ಣನ್ನು ಸೇವಿಸಬೇಕು.ಹಾಗೂ ನಿಮಗೆ ಯಾವುದೇ ತೊಂದರೆ ಇಲ್ಲದಿದ್ದಲ್ಲಿ ಮುಂದೆ ರಕ್ತಕ್ಕೆ ಸಂಬಂಧಿಸಿದಂತೆ ಯಾವುದೇ ಕಾಯಿಲೆ ಬರಬಾರದು ಎಂಬ ಕಾಳಜಿ ವಹಿಸಿದಲ್ಲಿ ಆಗ ಅಂಜೂರದ ಹಣ್ಣನ್ನು ಊಟದ ಜೊತೆ ಅಥವಾ ಊಟದ ನಂತರ ಸೇವಿಸಿ.

ಹೀಗೆ ಈ ಅಂಜೂರದ ಹಣ್ಣನ್ನು ಸುಮಾರು 3 ತಿಂಗಳುಗಳವರೆಗೆ ಪ್ರತಿದಿನ 2ರಂತೆ ಸೇವಿಸುತ್ತ ಬಂದಲ್ಲಿ ನಿಮ್ಮ ರಕ್ತ ವೃದ್ಧಿಸಿಕೊಳ್ಳಬಹುದಾಗಿದೆ.

ಧನ್ಯವಾದಗಳು.

Leave a Reply

Your email address will not be published.