ಬಳೆಗಳು ಧರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ ಮಾಡಿದರೆ ದುರಾದೃಷ್ಟ ಹಿಂಬಾಲಿಸುತ್ತದೆ!

Health & Fitness

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮಹಿಳೆಯರು ಕೈಗಳಿಗೆ ಬಳೆಗಳನ್ನು ಧರಿಸುತ್ತಾರೆ.ಇನ್ನು ಈ ಬಳೆಯನ್ನು ಧರಿಸುವುದರ ಹಿಂದೆ ಸಾಕಷ್ಟು ವೈಜ್ಞಾನಿಕ ಕಾರಣಗಳೂ ಮತ್ತು ಸಂಪ್ರದಾಯಗಳು ಇವೆ.

ಇನ್ನು ಮಹಿಳೆಯರು ಕೈಗಳಿಗೆ ಬಳೆಗಳನ್ನು ಯಾಕೆ ಧರಿಸಿ ತ್ತಾರೆ ಎಂದು ನೋಡುವುದಾದರೆ
ಬಳೆಗಳನ್ನು ಹೆಣ್ಣುಮಕ್ಕಳು ಧರಿಸುವುದರಿಂದ ಅವರಿಗೆ ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆಯಂತೆ.ಸಾಮಾನ್ಯವಾಗಿ ಮಹಿಳೆಯರು ಕೈಗಳಿಗೆ ಬಳೆಗಳನ್ನು ಧರಿಸುತ್ತಾರೆ ಅಂದರೆ ಮಣಿಕಟ್ಟು ಅತಿಹೆಚ್ಚು ಶಕ್ತಿ ಇರುವ ಜಾಗವಂತೆ ಅಲ್ಲಿ ಶಕ್ತಿ ಉತ್ಪನ್ನವಾಗುವುದರಿಂದ ದೇಹದ ಎಲ್ಲಾ ಭಾಗಕ್ಕೂ ಚೈತನ್ಯವನ್ನು ನೀಡಿ ಅದು ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆಯಂತೆ.

ಇನ್ನೂ ಬಳೆಗಳು ಮಣಿಕಟ್ಟಿಗೆ ಪದೇಪದೇ ತಾಗಿ ರಕ್ತ ಸಂಚಾರ ಸುಗಮಗೊಳ್ಳುತ್ತದೆ.ಇನ್ನು ಮೇಲೆ ತಿಳಿಸಿರುವ ಕಾರಣಗಳಿಂದಾಗಿ ಮಹಿಳೆಯರು ಬಳೆಗಳನ್ನು ಧರಿಸುತ್ತಾರೆ.ಇನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಮತ್ತೊಂದು ವಾಡಿಕೆಯಿದೆ ಅದೇ ಸೌಭಾಗ್ಯವತಿಯಾದ ಮಹಿಳೆಯರು ಬಳೆಗಳನ್ನು ಧರಿಸುವುದು ಅಂದರೆ ಮುತ್ತೈದೆಯರು ಹಸಿರು ಅಥವಾ ಕೆಂಪು ಬಳೆಗಳನ್ನು ಸಾಮಾನ್ಯವಾಗಿ ಧರಿಸುತ್ತಾರೆ.

ಕೈಗಳಿಗೆ ಬಳೆ , ಕಾಲುಗಳಿಗೆ ಗೆಜ್ಜೆ , ಕಾಲು ಬೆರಳಿಗೆ ಕಾಲುಂಗುರ , ಕಿವಿಗೆ ಓಲೆ , ಮೂಗಿಗೆ ನತ್ತು
ಇವೆಲ್ಲವನ್ನು ಧರಿಸುವುದರಿಂದ ಮಹಿಳೆಯು ಪರಿಪೂರ್ಣತೆ ಹೊಂದುತ್ತಾಳಂತೆ.ಇದು ಕೇವಲ ಸಂಪ್ರದಾಯದ ಸಂಸ್ಕೃತಿಗೆ ಸಂಬಂಧಪಟ್ಟ ವಿಷಯವಲ್ಲ ಇದರ ಹಿಂದೆ ಶಾರೀರಿಕ ಶಾಸ್ತ್ರ ಮತ್ತು ಮಾನಸಿಕ ಶಾಸ್ತ್ರ ಅಡಗಿದೆ ಆದ್ದರಿಂದಲೇ ಮಹಿಳೆಯರು ಅನಾದಿಕಾಲದಿಂದಲೂ ಬಳೆಗಳನ್ನು ಧರಿಸುತ್ತಿದ್ದಾರೆ.

ಇನ್ನು ಬಳೆಗಳಲ್ಲಿ ಸಾಕಷ್ಟು ವಿಧವಾದ ಬಣ್ಣಗಳನ್ನು ನಾವು ಕಾಣಬಹುದಾಗಿದೆ.
ಇವು ಪ್ರಾಚೀನ ಕಾಲದಿಂದಲೂ ಮಹಿಳೆಯರ ಸೌಂದರ್ಯವನ್ನು ದುಪ್ಪಟ್ಟು ಮಾಡಲು ಕಾರಣವಾಗಿದೆ.
ಬಳೆಗಳು ಕೇವಲ ಬಾಹ್ಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಶಾರೀರಿಕ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.ಆರೋಗ್ಯ ಅಭಿವೃದ್ದಿಗೆ ಈ ಬಳೆಗಳು ಸಹಾಯ ಮಾಡುತ್ತವೆ.

ಇನ್ನೂ ಮಹಿಳೆಯರಷ್ಟೇ ಅಲ್ಲದೇ ಪುರುಷರೂ ಸಹ ಖಡಗವನ್ನು ,ಬ್ರಾಸ್ ಲೆಟ್ ಗಳನ್ನು ಧರಿಸುತ್ತಾರೆ.ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರದ ನೋಡುವುದಾದರೆ ಬಳೆಗಳಿಗೆ ವಿಶಿಷ್ಟ ಸ್ಥಾನವನ್ನು ನೀಡಲಾಗಿದೆ.ಬಳೆಗಳು ಸಾಮಾನ್ಯವಾಗಿ ಗೋಲಾಕಾರದಲ್ಲಿರುತ್ತದೆ ಅಂದರೆ ಅವು ಚಂದ್ರನನ್ನು ಹೋಲುತ್ತದೆ ಅಂದರೆ ಬಳೆಗಳನ್ನು ಬುಧ ಮತ್ತು ಚಂದ್ರನಿಗೆ ಹೋಲಿಸಲಾಗುತ್ತದೆ.

ಸೂಕ್ತ ಬಣ್ಣದ ಬಳೆಗಳನ್ನು ಧರಿಸುವುದರಿಂದ ವೈವಾಹಿಕ ಜೀವನ ಸುಂದರವಾಗಿರುತ್ತದೆ.
ಬಳೆಗಳನ್ನು ಆದಷ್ಟು ಶನಿವಾರ ಮತ್ತು ಮಂಗಳವಾರ ದಿನ ಖರೀದಿಸಬೇಡಿ.ಬಳೆ ಧರಿಸುವ ಮುನ್ನ ತಾಯಿ ಮಂಗಳಗೌರಿಗೆ ಸಮರ್ಪಣೆ ಮಾಡಿ ನಂತರ ಕೈಗೆ ತೊಡಗಿಸಿಕೊಳ್ಳಿ.ಬಳೆಗಳನ್ನು ಪ್ರಾತಃಕಾಲ ಅಥವಾ ಸಂಧ್ಯಾಕಾಲದಲ್ಲಿ ಧರಿಸಿ.

ಅವಿವಾಹಿತ ಮಹಿಳೆಯರು ಯಾವುದೇ ಬಣ್ಣದ ಬಳೆಗಳನ್ನು ಬೇಕಾದರೂ ಧರಿಸಬಹುದು ಆದರೆ ವಿವಾಹಿತ ಮಹಿಳೆಯರು ಕಪ್ಪು ಬಳೆಯನ್ನು ಧರಿಸಬಾರದು.ನಿಮಗೇನಾದರೂ ಬಿಳಿ ಬಣ್ಣದ ಬಳೆಗಳನ್ನು ಧರಿಸುವುದು ಇಷ್ಟವಾದರೆ ಅದರ ಜೊತೆಗೆ ಬೇರೆ ಬಣ್ಣದ ಬಳೆಗಳು ಜೊತೆಗೂಡಿ ಧರಿಸಿ.ಪುರುಷರು ಬೆಳ್ಳಿ , ತಾಮ್ರ , ಚಿನ್ನ ಬಳೆಗಳನ್ನು ಧರಿಸಬಹುದು.ವೈವಾಹಿಕ ಜೀವನ ಸುಖಕರವಾಗಿರಲು ಕೆಂಪು ಬಣ್ಣದ ಬಳೆಗಳನ್ನು ಧರಿಸಿ

ಶೀಘ್ರವಾಗಿ ಮದುವೆಯಾಗಲು ತಾಯಿ ದುರ್ಗೆಗೆ ಕೆಂಪು ದುಪ್ಪಟ್ಟ ಮತ್ತು ಕೆಂಪು ಬಳೆಗಳನ್ನು ಸಮರ್ಪಿಸಿ ಪೂಜಿಸಿದರೆ ಬಹು ಬೇಗ ಮದುವೆಯಾಗುತ್ತದೆ.ಸಂತಾನ ಪ್ರಾಪ್ತಿಗಾಗಿ ಹಳದಿ ಬಣ್ಣದ ಬಳೆಗಳನ್ನು ಧರಿಸಬೇಕು.ಇನ್ನೂ ಯಾವ ಮನೆಯಲ್ಲಿ ಮಹಿಳೆಯರು ಕೈತುಂಬ ಬಳೆಗಳನ್ನು ಧರಿಸಿ ಓಡಾಡುತ್ತಾರೋ ಅಂಥವರ ಮನೆಯಲ್ಲಿ ಶ್ರೀಮಹಾಲಕ್ಷ್ಮೀ ನೆಲೆಸಿರುತ್ತಾಳಂತೆ.

ಧನ್ಯವಾದಗಳು.

Leave a Reply

Your email address will not be published.