ಚಳಿಗಾಲದಲ್ಲಿ , ಮಳೆಗಾಲದಲ್ಲಿ ಹೆಚ್ಚಾಗಿ ಒಡೆದ ಹಿಮ್ಮಡಿಯ ಸಮಸ್ಯೆ ಕಂಡುಬರುತ್ತದೆ.
ಇದು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುತ್ತದೆ , ಚಿಕ್ಕ ಮಕ್ಕಳಿಂದ ಹಿಡಿದು ಗಂಡಸರಿಗೆ , ಹೆಂಗಸರಿಗೆ ಪ್ರತಿಯೊಬ್ಬರಿಗೂ ಸಹ ಈ ಸಮಸ್ಯೆ ಇದ್ದೆ ಇರುತ್ತದೆ.ಈ ರೀತಿಯಾಗಿ ನಮ್ಮ ಕಾಲುಗಳು ಒಡೆದ ರೀತಿಯಾಗಿ ಇರದೆ ತುಂಬಾ ಮೃದುವಾಗಿ ಇರಬೇಕು ಅಂದ್ರೆ ಏನ್ ಮಾಡ್ಬೇಕು ?ಹಾಗೆ ನಮ್ಮ ಕಾಲುಗಳಿಗೆ ಯಾಕೆ ಆ ರೀತಿ ಒಡೆದಂತೆ ಆಗಿರುತ್ತೆ ?ಅನ್ನೋದನ್ನು ಹೇಳ್ತೀವಿ ಬನ್ನಿ..
ಒಡೆದ ಹಿಮ್ಮಡಿಯ ಸಮಸ್ಯೆ ಯಾಕೆ ಬರುತ್ತೆ ಅಂದ್ರೆ ಹೆಚ್ಚಾಗಿ ಈ ಚಳಿಗಾಲದಲ್ಲಿ , ಮಳೆಗಾಲದಲ್ಲಿ ಸ್ಕಿನ್ ತುಂಬಾ ಡ್ರೈ ಆಗೋದು ,ಅದರಲ್ಲಿ ಡೆಡ್ ಸ್ಕಿನ್ ಇರುವುದರಿಂದ ನಮಗೆ ಹಿಮ್ಮಡಿ ಒಡೆಯುತ್ತೆ.ಆ ರೀತಿ ಆಗಬಾರದು ಅಂದ್ರೆ ನೀವು ಸ್ವಲ್ಪ ನಿಮ್ಮ ಸ್ಕಿನ್ ಕೇರ್ ಮಾಡ್ಬೇಕಾಗತ್ತೆ ,ನೀವು ಪ್ರತಿ ರಾತ್ರಿ ಮಲಗುವಾಗ ಸಾಕ್ಸ್ ಧರಿಸಿ ಮಲಗಬೇಕು ,ಇನ್ನು ಮನೆಯಲ್ಲಿ ಓಡಾಡುವಾಗ ಚಪ್ಪಲಿಯನ್ನು ಧರಿಸಿ ಓಡಾಡಬೇಕುಇದರಿಂದ ಏನಾಗುತ್ತೆ ಅಂದ್ರೆ ನೀವು ಧೂಳಿನಲ್ಲಿ ಓಡಾಡಿದಾಗ ಅದು ನಿಮ್ಮ ಕಾಲುಗಳಿಗೆ ಅಂಟದ ರೀತಿಯಾಗಿ ನಿಮ್ಮನ್ನು ಕಾಪಾಡುತ್ತೆ.
ಇನ್ನು ನೀವು ರಾತ್ರಿ ಮಲಗುವಾಗ ನಿಮ್ಮ ಕಾಲುಗಳನ್ನು ನೀಟಾಗಿ ಉಗುರು ಬೆಚ್ಚಗಿನ ನೀರಿನಲ್ಲಿ ವಾಶ್ ಮಾಡ್ಕೊಂಡು ಅನಂತರ ಮಲಗಬೇಕು.ಹೆಚ್ಚಾಗಿ ನೀರನ್ನು ಕುಡಿಯಬೇಕು ,ಹೆಚ್ಚಾಗಿ ನೀರು ಕುಡಿಯುವುದರಿಂದ ಸ್ಕಿನ್ ಡ್ರೈ ಆಗುವುದಿಲ್ಲ ,ತೇವಾಂಶ ಹೆಚ್ಚಾಗಿ ಇರಬೇಕು.
ನಾವು ಹೇಳುವ ಈ ಚಿಕ್ಕ ಚಿಕ್ಕ ಮನೆ ಮದ್ದುಗಳನ್ನು ನೀವು ಪಾಲಿಸಿದರೆ ನಿಮ್ಮ ಹಿಮ್ಮಡಿ ಒಡೆಯದಂತೆ ಸುರಕ್ಷಿತ ನಿಯಮಿತವಾಗಿ ಕಾಪಾಡಿಕೊಳ್ಳಬಹುದು.
ಮನೆಮದ್ದು
ಬೇಕಾಗುವ ಸಾಮಗ್ರಿಗಳು :ರೋಸ್ ವಾಟರ್, ಗ್ಲಿಸರಿನ್ .ಮಾಡುವ ವಿಧಾನ :ಒಂದು ಚಿಕ್ಕ ಬೌಲ್ನಲ್ಲಿ ಒಂದು ಸ್ಪೂನ್ ರೋಸ್ ವಾಟರ್ ಹಾಗೂ ಒಂದು ಅರ್ಧ ಸ್ಪೂನ್ ಗ್ಲಿಸರಿನ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
ಬಳಸುವ ವಿಧಾನ :ಮೊದಲಿಗೆ ನಿಮ್ಮ ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ಹತ್ತಿಯನ್ನು ಬಳಸಿ ಒಡೆದಿರುವ ಹಿಮ್ಮಡಿ ಮೆಲ್ಲಗೆ ಜಾಗಕ್ಕೆ ಹಚ್ಚಿಕೊಳ್ಳಬೇಕು.ಇದರಿಂದ ನಿಮ್ಮ ಪಾದ ಮೃದು ಗೊಳ್ಳುವುದಲ್ಲದೆ ಕ್ರಮೇಣವಾಗಿ ಒಡೆದಿರುವುದು ಹೊರಟು ಹೋಗುತ್ತದೆ.
ಆದಷ್ಟು ನಿಮ್ಮ ಪಾದಗಳನ್ನು ಸಾಕ್ಸ್ ಹಾಕಿಕೊಂಡು ಓಡಾಡಿ, ಹಾಗೂ ಪಾದಗಳಿಗೆ ಯಾವುದಾದ್ರೂ ಮಾಯಿಶ್ಚರೈಸರ್ ಬಳಸಿ ಇದರಿಂದ ನಿಮ್ಮ ಪಾದ ಒಣಗುವುದಿಲ್ಲ.
ಧನ್ಯವಾದಗಳು.