ಮಂಗಳವಾರ ಹುಟ್ಟಿದವರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ಇವರು ಸಲಹೆ ನೀಡುವುದರಲ್ಲಿ ಉತ್ತಮರು,ಬೇರೆಯವರನ್ನು ಇವರ ಹಿಡಿತದಲ್ಲಿ ಇಟ್ಟುಕೊಳ್ಳಲು ಇವರು ಇಷ್ಟಪಡುವವರು ಆಗಿರುತ್ತಾರೆ.ಪ್ರತಿಯೊಬ್ಬರೂ ಇವರ ಮಾತನ್ನೇ ಕೇಳಬೇಕು ಎಂದು ಆಸೆ ಪಡುತ್ತಾರೆ.
ಇವರು ಹಠದ ಸ್ವಭಾವದವರಾಗಿರುತ್ತಾರೆ ಹಾಗೂ ಇವರು ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವವರಲ್ಲ.ಯಾವುದೇ ಕೆಲಸದಲ್ಲಾದರೂ ಇವರು ಯಶಸ್ಸನ್ನು ಪಡೆದೇ ತೀರುತ್ತಾರೆ.
ಹೋರಾಟದ ಮನೋಭಾವ ಇವರಲ್ಲಿ ಇರುವುದರಿಂದ ಎಂತಹದೇ ಕಷ್ಟದ ಪರಿಸ್ಥಿತಿ ಎದುರಾದರೂ ಅದನ್ನು ಜಯಿಸುವ ಸಾಮರ್ಥ್ಯ ಇವರಲ್ಲಿದೆ.ಇವರಿಗೆ ಯಾವುದೇ ರೀತಿಯ ತೊಂದರೆ ಎದುರಾದರೂ ಅದು ಬೇಗನೆ ದೂರ ಮಾಡಿಕೊಳ್ಳುತ್ತಾರೆ.ಇವರು ಯಾರನ್ನಾದರೂ ಇಷ್ಟ ಪಟ್ಟರೆ ಅವರಿಗಾಗಿ ತಮ್ಮ ಸರ್ವಸ್ವವನ್ನೇ ಮುಡಿಪಾಗಿಡುತ್ತಾರೆ.ಇವರು ಮಾಡುವ ಅನೇಕ ತಪ್ಪು ಸರಿಗಳು ಇವರಿಗೆ ಅರಿವು ಬಂದಾಗ ಮಾತ್ರ ಬದಲಾವಣೆಯಾಗುತ್ತದೆ.ಇವರು ತಮ್ಮ ಭಾವನೆಗಳನ್ನು ಬದಲಾಯಿಸುವುದಿಲ್ಲ.
ಮಂಗಳವಾರ ಹುಟ್ಟಿದವರ ಅದೃಷ್ಟ ಸಂಖ್ಯೆ 9.ಶುಭ ಕಾರ್ಯಗಳನ್ನು 9ನೇ ತಾರೀಖಿನಂದು ಮಾಡಿ ಇದರಿಂದ ಅಭಿವೃದ್ದಿ ಹೊಂದುತ್ತೀರಿ.ಇಂಜಿನಿಯರಿಂಗ್ , ರಿಯಲ್ ಎಸ್ಟೇಟ್ , ಆಹಾರ ಮಳಿಗೆಯ ಕ್ಷೇತ್ರಗಳ ವ್ಯಾಪಾರಗಳಲ್ಲಿ ಇವರು ಅಭಿವೃದ್ಧಿಯನ್ನು ಹೊಂದುತ್ತಾರೆ.ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳು ಬರಬಹುದು
ಆದ್ದರಿಂದ ಸ್ವಲ್ಪ ಜಾಗ್ರತೆ ವಹಿಸಿ.
ಮಂಗಳವಾರದ ಅಧಿಪತಿ ಕುಜ ನಾಗಿರುತ್ತಾನೆ ಕುಜನು ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸುತ್ತಾನೆ
ಆದ್ದರಿಂದ ಪ್ರತಿದಿನ ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ ಇದರಿಂದ ಒಳ್ಳೆಯದಾಗುತ್ತದೆ.
ಸುಬ್ರಹ್ಮಣ್ಯ ಸ್ವಾಮಿಯ ಮಂತ್ರ
“ಓಂ ಶಂ ಶರವಣ ಭವ”
ಈ ಮಂತ್ರವನ್ನು ಪ್ರತಿದಿನ ಪಠಿಸುವುದರಿಂದ ಎಲ್ಲಾ ಕೆಲಸಗಳಲ್ಲೂ ಜಯ ಸಾಧಿಸುತ್ತೀರಿ .
ಧನ್ಯವಾದಗಳು.