72 ಗಂಟೆಗಳಲ್ಲಿ ಶ್ವಾಸಕೋಸವನ್ನು ಸ್ವಚ್ಚಗೊಳಿಸಲು ಟಿಪ್ಸ್!

0
469

ಶ್ವಾಸ ವ್ಯವಸ್ಥೆಗೆ ಮೂಲಾಧಾರವಾಗಿರುವ ಶ್ವಾಸಕೋಶವು ಗಾಳಿ ವಾತಾವರಣದಲ್ಲಿನ ಕಲ್ಮಶದಿಂದ ಆಗುವ ತೊಂದರೆಗಳೇನು ಎಂದು ನಮಗೆಲ್ಲರಿಗೂ ತಿಳಿದಿದೆ.ಆಮ್ಲಜನಕವನ್ನು ವಾತಾವರಣದಿಂದ ತೆಗೆದುಕೊಂಡು ರಕ್ತದೊಳಗೆ ಕಳುಹಿಸಿ ರಕ್ತದಲ್ಲಿನ ಕಾರ್ಬನ್ ಡಯಾಕ್ಸೈಡ್ ಅನ್ನು ಹೊರಹಾಕುವುದೆ ಶ್ವಾಸಕೋಶ.

ಬಹಳಷ್ಟು ಜನರಿಗೆ ಮದ್ಯಪಾನ , ಧೂಮಪಾನದ ಅಭ್ಯಾಸದಿಂದ , ವಾಯುಮಾಲಿನ್ಯದ ಕಾರಣದಿಂದ ಶ್ವಾಸಕೋಶದ ಸಮಸ್ಯೆಯಿಂದ ಬಹಳಷ್ಟು ಮಂದಿ ಬಳಲುತ್ತಿದ್ದಾರೆ.ಇಲ್ಲಿ ತಿಳಿಸಲಾಗಿರುವ ಕೆಲವು ಟಿಪ್ಸ್ ಗಳನ್ನು ಪಾಲಿಸುವುದರಿಂದ ನಿಮ್ಮ ಶ್ವಾಸಕೋಶಗಳನ್ನು 3 ದಿನಗಳಲ್ಲಿ ಅಂದರೆ ಕೇವಲ 72 ಗಂಟೆಗಳಲ್ಲಿ ನೀವೇ ಶುದ್ಧ ಪಡಿಸಿಕೊಳ್ಳಬಹುದು.

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 1 ಲೋಟ ಕ್ಯಾರೆಟ್ ಜ್ಯೂಸನ್ನು ಕುಡಿಯಿರಿ.
ಹೀಗೆ ಪ್ರತಿನಿತ್ಯ ಕ್ಯಾರೆಟ್ ಜ್ಯೂಸನ್ನು ನಿಯಮಿತವಾಗಿ ಸೇವಿಸುವುದರಿಂದ ಶ್ವಾಸಕೋಶ ಗಳನ್ನು ಶುದ್ಧಗೊಳಿಸಿಕೊಳ್ಳಬಹುದಾಗಿದೆ.

1 ಗ್ಲಾಸ್ ನೀರಿಗೆ ಸ್ವಲ್ಪ ಬೆಲ್ಲ ಮತ್ತು ಸ್ವಲ್ಪ ಕಾಳು ಮೆಣಸಿನ ಪುಡಿಯನ್ನು ಹಾಕಿ ಕುದಿಸಿ ಕುಡಿಯುವುದರಿಂದ ಶ್ವಾಸಕೋಶ ಗಳನ್ನು ಶುದ್ಧಿ ಗೊಳಿಸಿಕೊಳ್ಳಬಹುದಾಗಿದೆ.

ದಿನಕ್ಕೊಮ್ಮೆ ಗ್ರೀನ್ ಟೀಯನ್ನು ಕುಡಿಯುವುದರಿಂದ ಶ್ವಾಸಕೋಶದಲ್ಲಿರುವ ವ್ಯರ್ಥ ಪದಾರ್ಥಗಳನ್ನು ಹೊರಹಾಕಬಹುದಾಗಿದೆ ಹಾಗೂ ಇದರಿಂದ ಶ್ವಾಸಕೋಶ ಸ್ವಚ್ಛ ವಾಗುತ್ತದೆ.

1 ಗ್ಲಾಸ್ ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಶ್ವಾಸಕೋಶವನ್ನು ಸ್ವಚ್ಛಗೊಳಿಸಿ ಕೊಳ್ಳಬಹುದಾಗಿದೆ.

ಪ್ರತಿದಿನ 2 ರಿಂದ 3 ಬೆಳ್ಳುಳ್ಳಿ ಎಸಳುಗಳನ್ನು ಸೇವಿಸುವುದರಿಂದ ಶ್ವಾಸಕೋಶವನ್ನು ಸ್ವಚ್ಚಗೊಳಿಸಿ ಕೊಳ್ಳಬಹುದಾಗಿದೆ.

1 ಗ್ಲಾಸ್ ನೀರಿಗೆ ಮೆಂತ್ಯೆ ಅಥವಾ ಶುಂಠಿಯನ್ನು ಹಾಕಿ ಕುದಿಸಿ ತಣ್ಣಗಾದ ಮೇಲೆ ಕುಡಿಯುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.

ಪ್ರತಿದಿನ 4 ರಿಂದ 5 ಪುದೀನಾ ಎಲೆ ಅಥವಾ ತುಳಸಿ ಎಲೆಗಳನ್ನು ತಿನ್ನುವುದರಿಂದ ಶ್ವಾಸಕೋಶಗಳನ್ನು ಸ್ವಚ್ಛಗೊಳಿಸಲು ಇದು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು.ಅಥವಾ ರಾತ್ರಿ ಮಲಗುವ ಮುನ್ನ 4 ರಿಂದ 5 ಪುದೀನಾ ಎಲೆಗಳನ್ನು ಅಥವಾ ತುಳಸಿ ಎಲೆಗಳನ್ನು 1 ಲೋಟ ನೀರಿಗೆ ಹಾಕಿ ಮುಚ್ಚಿಟ್ಟು
ಬೆಳಿಗ್ಗೆ ಎದ್ದು ಖಾಲಿಹೊಟ್ಟೆಯಲ್ಲಿ ಕುಡಿಯುವುದರಿಂದ ಶ್ವಾಸಕೋಶ ಶುದ್ಧಿಯಾಗುತ್ತದೆ.

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವವರು, ಹಾಲು , ಮೊಸರು, ಬೆಣ್ಣೆಯಂತಹ ಪದಾರ್ಥಗಳನ್ನು ಸೇವಿಸಬಾರದು.

ಧನ್ಯವಾದಗಳು.

LEAVE A REPLY

Please enter your comment!
Please enter your name here