ಮೊಟ್ಟೆಯನ್ನು ಹೀಗೆ ತಿನ್ನುವುದರಿಂದ ನಮ್ಮ ಪ್ರಾಣಕ್ಕೆ ಆಪತ್ತು!
ಮೊಟ್ಟೆಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ ಆದರೆ ಕೆಲವರಿಗೆ ಮೊಟ್ಟೆ ಬಗ್ಗೆ ಹಲವಾರು ಗೊಂದಲಗಳಿವೆ. ಅದಕ್ಕಾಗಿ ಇವತ್ತಿನ ನಮ್ಮ ಲೇಖನದಲ್ಲಿ ಮೊಟ್ಟೆ ಸೇವಿಸುವ ಸರಿಯಾದ ಸಮಯ ಯಾವುದು ?ಮೊಟ್ಟೆ ಸೇವಿಸುವ ಸರಿಯಾದ ವಿಧಾನ ಯಾವುದು ?ಮೊಟ್ಟೆ ಸೇವನೆಯಿಂದ ದೊರೆಯುವ ಲಾಭಗಳೇನು ?ಮೊಟ್ಟೆ ಸೇವಿಸುವುದರಿಂದ ಆಗುವ ತೊಂದರೆಗಳೇನು ? ಮೊಟ್ಟೆ ಸೇವಿಸಿದ ನಂತರ ಏನನ್ನೂ ಸೇವಿಸಬಾರದು ? ಮೊಟ್ಟೆ ಯಾರು ಸೇವಿಸಬಾರದು ?ಇವೆಲ್ಲದರ ಬಗ್ಗೆ ತಿಳಿಯೋಣ..
ಮೊಟ್ಟೆಯಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿಯೋಣ ಮೊಟ್ಟೆ ನೋಡಲು ಚಿಕ್ಕದಾಗಿದ್ದರೂ ಹಲವಾರು ಪೋಷಕಾಂಶಗಳನ್ನು ಹೊಂದಿದೆ.ಮೊಟ್ಟೆಯಲ್ಲಿ ಕಬ್ಬಿಣಾಂಶ , ಸತು ,ಪೊಟ್ಯಾಷಿಯಂ , ವಿಟಮಿನ್ ಈ ಹಾಗೂ ಪೋಲೆಟ್ ಅಂಶಗಳಿವೆ.ಇನ್ನು ಮೊಟ್ಟೆಯಲ್ಲಿ ಒಮೆಗಾ ತ್ರಿ ಫ್ಯಾಟಿ ಆಮ್ಲ ವಿದೆ.ಮೊಟ್ಟೆಯಲ್ಲಿರುವ ಸೆಲೆನಿಯಂ ಅಂಶ ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ.
ಇಷ್ಟೆಲ್ಲಾ ಪೋಷಕಾಂಶಗಳಿರುವ ಕಾರಣಕ್ಕಾಗಿ ಮೊಟ್ಟೆಯನ್ನು ಪೌಷ್ಟಿಕ ಆಹಾರದ ಶ್ರೇಣಿಯಲ್ಲಿಡಲಾಗಿದೆ.
ಮೊಟ್ಟೆಯನ್ನು ಸೇವಿಸುವ ಸರಿಯಾದ ಸಮಯ ಯಾವುದು ? ಮೊಟ್ಟೆಯನ್ನು ಬೆಳಗ್ಗೆ ಉಪಾಹಾರದ ಸಮಯದಲ್ಲಿ ಸೇವಿಸುವುದು ಉತ್ತಮ ಇದರಿಂದ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತದೆ.
ಇದನ್ನು ಬೆಳಗ್ಗೆ ಉಪಾಹಾರದ ಸಮಯದಲ್ಲಿ ಸೇವಿಸಿದರೆ ಇದು ಇಡೀ ದಿನಕ್ಕೆ ಶಕ್ತಿಯನ್ನು ಒದಗಿಸುತ್ತದೆ ಆದ್ದರಿಂದ ಬೆಳಗಿನ ಸಮಯ ಮೊಟ್ಟೆ ಸೇವಿಸುವುದು ಉತ್ತಮ.
ಮೊಟ್ಟೆಯನ್ನು ಸೇವಿಸುವ ಸರಿಯಾದ ವಿಧಾನ ಯಾವುದು ? ಮೊಟ್ಟೆಯನ್ನು ಮೂರು ರೀತಿಯಲ್ಲಿ ಸೇವಿಸಲಾಗುತ್ತದೆ.ಹಸಿಯಾಗಿ , ಬೇಯಿಸಿ , ಆಮ್ಲೇಟ್ ಅಥವಾ ಫ್ರೈ ರೀತಿಯಲ್ಲಿ ಸೇವಿಸಲಾಗುತ್ತದೆ. ಈ ಮೂರರಲ್ಲಿ ಉತ್ತಮ ರೀತಿಯೆಂದರೆ ಬೇಯಿಸಿದ ಮೊಟ್ಟೆ ಯಾಕೆಂದರೆ ಬೇಯಿಸಿದ ಮೊಟ್ಟೆಯಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ .
ಹಸಿ ಮೊಟ್ಟೆಯ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ,ಹಸಿ ಮೊಟ್ಟೆಯಲ್ಲಿ ಬ್ಯಾಕ್ಟೀರಿಯಾಗಳಿರುತ್ತವೆ ಇದರಿಂದ ಹೊಟ್ಟೆ ಕೆಡುವುದು , ಅಲರ್ಜಿ ಮುಂತಾದ ತೊಂದರೆಗಳು ಉಂಟಾಗುತ್ತದೆ ಆದ್ದರಿಂದ ಹಸಿ ಮೊಟ್ಟೆಯನ್ನು ಸೇವಿಸಬೇಡಿ.
ಹಾಗೆಯೇ ಮೊಟ್ಟೆಯನ್ನು ಫ್ರೈ ಮಾಡಿ , ಆಮ್ಲೆಟ್ ಬುರ್ಜಿ ರೂಪದಲ್ಲಿ ಸೇವಿಸಲಾಗುತ್ತದೆ ಆದರೆ ಈ ರೀತಿ ಸೇವಿಸುವುದರಿಂದ ಮೊಟ್ಟೆಯಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತದೆ ಆದ್ದರಿಂದ ಬೇಯಿಸಿದ ಮೊಟ್ಟೆಯನ್ನು ಸೇವಿಸಿ.ಇದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಇದರಿಂದ ಪೋಷಕಾಂಶಗಳು ಪೂರ್ತಿಯಾಗಿ ನಿಮ್ಮ ದೇಹಕ್ಕೆ ದೊರೆಯುತ್ತದೆ.
ಒಬ್ಬ ಆರೋಗ್ಯವಂತ ವ್ಯಕ್ತಿ ದಿನದಲ್ಲಿ 2 ಮೊಟ್ಟೆಯನ್ನು ಸೇವಿಸಬಹುದು.ಹಾಗೆಯೇ ನೀವು ಜಿಮ್ ಅಥವಾ ಬೇರೆ ವ್ಯಾಯಾಮ , ಕ್ರೀಡೆ ಮೊದಲಾದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ನಿಮ್ಮ ಇನ್ ಸ್ಟ್ರಕ್ಟರ್ ನೀಡುವ ಸಲಹೆಯ ಮೇರೆಗೆ ಅಧಿಕ ಮೊಟ್ಟೆಯನ್ನು ಸೇವಿಸಬಹುದು.
ಅತಿಯಾದ ಮೊಟ್ಟೆ ಸೇವನೆಯಿಂದ ದೇಹ ಹೀಟ್ ಆಗುತ್ತದೆ ಆದ್ದರಿಂದ ದಿನದಲ್ಲಿ ಒಂದರಿಂದ ಎರಡು ಮೊಟ್ಟೆ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
ಮೊಟ್ಟೆಯನ್ನು ಸೇವಿಸುವುದರಿಂದ ದೊರೆಯುವ ಲಾಭಗಳೇನು ? ಮೆದುಳಿನ ಆರೋಗ್ಯಕ್ಕೆ ಉತ್ತಮ , ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ , ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ .ಮೊಟ್ಟೆಯಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇದೆ ಇದು ಮೂಳೆಗಳಿಗೆ ಉತ್ತಮ , ಹಲ್ಲುಗಳಿಗೆ ಉತ್ತಮ , ಮೊಟ್ಟೆಯಲ್ಲಿ ಕಬ್ಬಿಣ ಅಂಶವಿದೆ ಇದರಿಂದ ರಕ್ತಹೀನತೆ ದೂರವಾಗುತ್ತದೆ.ಉಗುರು ಹಾಗೂ ಕೂದಲಿಗೆ ಉತ್ತಮ.
ಮೊಟ್ಟೆಯನ್ನು ಸೇವಿಸುವುದರಿಂದ ಆಗುವ ತೊಂದರೆಯ ಬಗ್ಗೆ ತಿಳಿಯೋಣ ಮೊಟ್ಟೆಯನ್ನು ಅಧಿಕ ಪ್ರಮಾಣದಲ್ಲಿ ಸೇವನೆ ಮಾಡಬಾರದು ಇದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ ಅಷ್ಟೆ ಅಲ್ಲ ಮಲಬದ್ಧತೆ , ಉರಿಮೂತ್ರ ದಂತಹ ಸಮಸ್ಯೆ ಎದುರಾಗಬಹುದು. ಅತಿಯಾದ ಮೊಟ್ಟೆಯ ಸೇವನೆಯಿಂದ ಹೊಟ್ಟೆ ಉಬ್ಬರ ಅಲರ್ಜಿಯಂತಹ ತೊಂದರೆ ಎದುರಾಗುತ್ತದೆ.
ಇದು ಯಾರು ಮೊಟ್ಟೆಯನ್ನು ಸೇವಿಸಬಾರದು? ಹೃದಯದ ತೊಂದರೆಯಿಂದ ಬಳಲುತ್ತಿರುವವರು ಮೊಟ್ಟೆಯ ಹಳದಿ ಭಾಗ ಸೇವನೆ ಮಾಡಬಾರದು.ಮೊಟ್ಟೆಯಲ್ಲಿ ಅಧಿಕ ಪ್ರೊಟೀನ್ ಇರುವುದರಿಂದ ಲಿವರ್ ತೊಂದರೆ ಇರುವವರು ಮೊಟ್ಟೆಯ ಸೇವನೆ ಮಾಡಬಾರದು. ಅಸ್ತಮಾ ತೊಂದರೆ ಇರುವವರು ಕೂಡ ಮೊಟ್ಟೆಯನ್ನು ಸೇವಿಸದೆ ಇದ್ದರೆ ಉತ್ತಮ ಎಂದು ಯಾವುದೇ ರೀತಿಯ ಸ್ಕಿನ್ ಅಲರ್ಜಿಗಳಿಂದ ಬಳಲುತ್ತಿರುವವರು ಕೂಡ ಮೊಟ್ಟೆಯನ್ನು ಸೇವಿಸಬಾರದು.
ಮೊಟ್ಟೆಯನ್ನು ಸೇವಿಸಿದ ನಂತರ ಏನನ್ನು ಸೇವಿಸಬಾರದು ? ಮೊಟ್ಟೆಯ ಸೇವನೆಯ ನಂತರ ಹುಳಿ , ಪದಾರ್ಥಗಳಾದ ನಿಂಬೆ ಕಿತ್ತಳೆ ಮೊದಲಾದವುಗಳನ್ನು ಸೇವಿಸಬಾರದು.
ಇದರಿಂದ ನಿಮಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆ ಎದುರಾಗಬಹುದು.
ಮೊಟ್ಟೆಯ ಜೊತೆಗೆ ಮೀನನ್ನು ಸೇವಿಸಬಾರದು ಇದರಿಂದ ಅಲರ್ಜಿಗಳಾಗುವುದರ ಜೊತೆಗೆ ಮೊಡವೆ ಸಮಸ್ಯೆ ಉಂಟಾಗುತ್ತದೆ .
ಮೊಟ್ಟೆಯ ಸೇವನೆಯ ನಂತರ ಹಾಲನ್ನು ಸೇವಿಸಬಾರದು ಇದು ಕೂಡ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಇದರಿಂದ ದೇಹದಲ್ಲಿ ಕಫ ಹೆಚ್ಚಾಗುತ್ತದೆ.
ಧನ್ಯವಾದಗಳು