777 Charlie: ಬಿಗ್ ಬಾಸ್ ಶುರುವಾಗಿ ಒಂದು ತಿಂಗಳಾದ್ರೂ ಇನ್ನು ಎಂಟ್ರಿ ಕೊಟ್ಟಿಲ್ಲ ಚಾರ್ಲಿ, ಕಾರಣ ಏನು ಗೊತ್ತಾ?

Written by Pooja Siddaraj

Published on:

777 Charlie: ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ ಒಂದು ತಿಂಗಳು ಕಳೆದಿದೆ. 4 ಸ್ಪರ್ಧಿಗಳು ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಆದರೆ ಒಂದು ಪ್ರಶ್ನೆ ಜನರನ್ನು ಕಾಡುತ್ತಿದೆ, ಅದೇನು ಎಂದರೆ ಬಿಗ್ ಬಾಸ್ ಮನೆಗೆ ಚಾರ್ಲಿ ಯಾಕೆ ಇನ್ನು ಬಂದಿಲ್ಲ ಎನ್ನುವುದಾಗಿದೆ. ಚಾರ್ಲಿ ಬಿಗ್ ಬಾಸ್ ಮನೆಗೆ ಹೋಗ್ತಾಳೆ ಎನ್ನುವ ವಿಷಯ ಶೋ ಶುರುವಾಗುವ 2 ವಾರಗಳ ಮೊದಲೇ ಗೊತ್ತಾಗಿತ್ತು. ಅನುಬಂಧ ಅವಾರ್ಡ್ಸ್ ಶೋನಲ್ಲಿ ಈ ವಿಚಾರವನ್ನು ರಿವೀಲ್ ಮಾಡಲಾಗಿತ್ತು.

ಅದೇ ರೀತಿ ಲಾಂಚ್ ಎಪಿಸೋಡ್ ದಿನ ಚಾರ್ಲಿ ಬಿಗ್ ಬಾಸ್ ಮನೆಯೊಳಗೆ ಹೋಗ್ತಾಳೆ ಎಂದು ಎಲ್ಲರೂ ಅಂದುಕೊಂಡಿದ್ದರು, ಆದರೆ ಆ ರೀತಿ ನಡೆಯಲಿಲ್ಲ. ಲಾಂಚ್ ದಿನ ಸಂಗೀತ ಅವರು ಹೋಗುವಾಗ ಸುದೀಪ್ ಅವರ ಮಾತಿನಂತೆ ಚಾರ್ಲಿ ಎಂದು ಕರೆದರು ಕೂಡ ಚಾರ್ಲಿ ಬಂದಿರಲಿಲ್ಲ. ಸಂಗೀತ ಒಬ್ಬರೇ ಮನೆಯೊಳಗೆ ಹೋದರು. ಮುಂದಿನ ಎಪಿಸೋಡ್ ಗಳಲ್ಲಿ ಚಾರ್ಲಿ ಬಿಗ್ ಬಾಸ್ ಮನೆಯೊಳಗೆ ಹೋಗಬಹುದು ಎನ್ನಲಾಗಿತ್ತು, ಆದರೆ ಒಂದು ತಿಂಗಳು ಕಳೆದರು ಕೂಡ ಇನ್ನು ಚಾರ್ಲಿ ಬಿಗ್ ಬಾಸ್ ಮನೆಯೊಳಗೆ ಹೋಗಿಲ್ಲ.

ಚಾರ್ಲಿ ಇನ್ನು ಯಾಕೆ ಹೋಗಿಲ್ಲ? ಚಾರ್ಲಿ ಬಿಗ್ ಮನೆಗೆ ಹೋಗೋದು ಯಾವಾಗ ಎನ್ನುವ ಪ್ರಶ್ನೆ ಎಲ್ಲಾ ವೀಕ್ಷಕರಲ್ಲಿ ಮೂಡಿದೆ. ಅದಕ್ಕೆಲ್ಲ ಈಗ ಉತ್ತರ ಸಿಕ್ಕಿದ್ದು, ಚಾರ್ಲಿಗೆ ತರಬೇತಿ ನೀಡುವ ಪ್ರಮೋದ್ ಅವರು ಅಸಲಿ ಕಾರಣ ತಿಳಿಸಿದ್ದಾರೆ. ಒಂದು ಶ್ವಾನ ವನ್ನು ರಿಯಾಲಿಟಿ ಶೋಗೆ ಕಳಿಸೋದು ಅಷ್ಟು ಸುಲಭವಲ್ಲ, ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ ಇಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಚಾರ್ಲಿ ಬಿಗ್ ಬಾಸ್ ಮನೆಗೆ ಹೋಗಲು ಇನ್ನು ಅನುಮತಿ ಸಿಕ್ಕಿಲ್ಲ..

ಅನುಮತಿ ಸಿಕ್ಕ ಕೂಡಲೇ ಚಾರ್ಲಿ ಬಿಗ್ ಮನೆಗೆ ಎಂಟ್ರಿ ಕೊಡಲಿದ್ದಾಳೆ ಎಂದು ಪ್ರಮೋದ್ ಅವರು ತಿಳಿಸಿದ್ದಾರೆ. ಲೆಟರ್ ಮತ್ತು ಮೇಲ್ ಮೂಲಕ ಪರ್ಮಿಶನ್ ಕೇಳಲಾಗಿತ್ತು, ಈಗ ಅದೇ ಪ್ರೊಸಿಜರ್ ನಡೆಯುತ್ತಿದೆ. ಅನಿಮಲ್ ವೆಲ್ಫೇರ್ ಬೋರ್ಡ್ ಇಂದ ಪರ್ಮಿಶನ್ ಸಿಗಲು ಸುಮಾರು 3 ತಿಂಗಳ ಸಮಯ ಹಿಡಿಯುತ್ತದೆ. ಬಿಗ್ ಬಾಸ್ ಶೋ ಶುರುವಾಗುವ ಒಂದೂವರೆ ತಿಂಗಳ ಹಿಂದೆಯೇ ಅರ್ಜಿ ಹಾಕಲಾಗಿತ್ತು, ಆದರೆ ಬೋರ್ಡ್ ಇಂದ ಇನ್ನು ಅನುಮತಿ ಸಿಕ್ಕಿಲ್ಲ ಎಂದು ಮಾಹಿತಿ ಸಿಕ್ಕಿದೆ.

ಅಂದ ಹಾಗೆ ಬಿಗ್ ಬಾಸ್ ಮನೆಗೆ ಚಾರ್ಲಿ ಒಬ್ಬ ಸ್ಪರ್ಧಿಯಾಗಿ ಹೋಗುತ್ತಿಲ್ಲ, ಬದಲಾಗಿ ಚಾರ್ಲಿ ಹೋಗ್ತಿರೋದು ಎಂಟರ್ಟೈನರ್ ಆಗಿ ಎನ್ನಲಾಗುತ್ತಿದೆ. ಚಾರ್ಲಿ ಎಷ್ಟು ದಿವಸ ಬಿಗ್ ಬಾಸ್ ಮನೆಯೊಳಗೆ ಇರುತ್ತಾಳೆ ಎನ್ನುವುದು ಇನ್ನು ತಿಳಿದುಬಂದಿಲ್ಲ. ವೆಲ್ಫೇರ್ ಬೋರ್ಡ ಇಂದ ಅನುಮತಿ ಸಿಗುತ್ತಿದ್ದ ಹಾಗೆಯೇ, ಚಾರ್ಲಿ ಬರುತ್ತಾಳೆ ಎಂದು ತಿಳಿಸಿದ್ದಾರೆ.

Leave a Comment