ಸಹಿಸಲು ಅಸಾಧ್ಯವಾದ ನೋವು ಎಂದರೆ ಅದು ಕಿವಿನೋವು. ಕಿವಿ ನೋವಿಗೆ ಹಲವಾರು ಕಾರಣಗಳಿವೆ.ಸೋಂಕು, ದವಡೆ ಸಂಧಿ ವಾತ, ಕಿವಿಯ ಮೇಣ, ಕಿವಿಯಲ್ಲಿ ಏನಾದರು ಸಿಕ್ಕಿ ಹಾಕಿಕೊಂಡಿರುವುದು, ಕಿವಿಯ ತಮಟೆಯಲ್ಲಿ ತೂತು, ನೋವುತ್ತಿರುವ ಗಂಟಲು ಮತ್ತು ಸೈನಸ್ ಸೋಂಕು ಕಾರಣವಾಗಿರಬಹುದು.ಈ ರೀತಿ ನೋವುಗಳಿವೆ ಮನೆಯಲ್ಲಿ ಮನೆಮದ್ದನ್ನು ಮಾಡಬಹುದು.
1,ಗಜ ನಿಂಬೆ ಹಣ್ಣಿನ ರಸಕ್ಕೆ ಸ್ವಲ್ಪ ನಿಂಬೆ ರಸಕ್ಕೆ ತುಪ್ಪ ಬೆರೆಸಿ ಕಾಯಿಸಿ ಬೆಚ್ಚಗೆ ಇರುವ ರಸವನ್ನು ಕಿವಿಗೆ ಹಾಕಿದರೆ ಕಿವಿ ನೋವು ಗುಣವಾಗುತ್ತದೆ.
2, ಎಕ್ಕದ ಎಲೆಗಳನ್ನು ತುಪ್ಪದಲ್ಲಿ ಅರೆದು ಅದರಿಂದ ರಸ ತೆಗೆದು ನಿಯಮಿತವಾಗಿ ಕಿವಿಗೆ ಹಾಕಿದರೆ ಕಿವಿ ನೋವು, ಕಿವಿ ಸೋರುವುದು ಮತ್ತು ಇತರ ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ.
3, ಬೆಳ್ಳುಳ್ಳಿ ರಸವನ್ನು ನೋವು ಇರುವ ಕಿವಿಗೆ ಹಾಕಿದರೆ ನೋವು ನಿವಾರಣೆ ಆಗುತ್ತದೆ ಮತ್ತು ಕಿವಿ ಸೋರುವುದು ಕಡಿಮೆ ಆಗುತ್ತದೆ.
4, ಇನ್ನು ಕಿವಿಯಲ್ಲಿ ಕೀಟ, ಇರುವೆ ಹೋದರೆ ಸ್ವಲ್ಪ ಒಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬೆಚ್ಚಗೆ ಮಾಡಿ ಕಿವಿಗೆ ಹಾಕಿ.ನಂತರ ಕಿವಿ ಕೆಳಗೆ ಮಾಡಿದರೆ ಕೀಟ, ಇರುವೆ ಹೊರಗೆ ಬರುತ್ತದೆ.
5, ಇನ್ನು ಎರಡು ತುಳಸಿ ಎಲೆಯ ರಸವನ್ನು ನೋವು ಇರುವ ಕಿವಿಗೆ ಹಾಕಿದರೆ ಕಿವಿ ನೋವು ಕಡಿಮೆ ಆಗುತ್ತದೆ.
6, ಸ್ವಚ್ಛವಾದ ಟವೆಲ್ ಯಿಂದ ಬಿಸಿ ನೀರಿನಿಂದ ಎದ್ದಿ 20 ನಿಮಿಷಗಳ ಕಾಲ ನೋವು ಇರುವ ಕಿವಿಗೆ ಮೃದುವಾಗಿ ಒತ್ತಿ ಹಿಡಿಯಬೇಕು.ಈ ರೀತಿ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.