Darshan: ಡಿಬಾಸ್ ಮನೆ ಕಾರ್ಯಾಚರಣೆ ವೇಳೆ ಸಿಕ್ಕಿದ್ದು ಎಷ್ಟು ಹುಲಿ ಉಗುರುಗಳು ಗೊತ್ತಾ? ಅಸಲಿಯೋ ನಕಲಿಯೋ?

Written by Pooja Siddaraj

Published on:

Darshan: ಪ್ರಸ್ತುತ ಸ್ಯಾಂಡಲ್ ವುಡ್ ನಲ್ಲಿ ಮತ್ತು ನಮ್ಮ ರಾಜ್ಯದಲ್ಲಿ ಹುಲಿಯ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಹುಲಿಯ ಉಗುರು ಇರುವ ಪೆಂಡೆಂಟ್ ಧರಿಸಿದ್ದ ಕಾರಣಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಹೊರಗೆ ಕರೆದುಕೊಂಡು ಹೋಗಿ ಬಂಧಿಸಲಾಗಿದೆ. ಅಷ್ಟೇ ಅಲ್ಲದೆ, ಇವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಸಂತೋಷ್ ಅವರನ್ನು ಬಂಧಿಸಿದ ಬಳಿಕ ಸ್ಯಾಂಡಲ್ ವುಡ್ ನ ಬೇರೆ ಕಲಾವಿದರ ಬಳಿ ಕೂಡ ಹುಲಿ ಉಗುರಿನ ಪೆಂಡೆಂಟ್ ಇರುವ ವಿಚಾರ ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ವಿನಯ್ ಗುರುಜಿ ಅವರು ತಲೆ ಸಮೇತ ಇರುವ ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೋ ವೈರಲ್ ಆಗಿದೆ. ಜೊತೆಗೆ ನಟ ದರ್ಶನ್, ನಟ ಯಶ್, ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇವರೆಲ್ಲರ ಮೇಲು ದೂರು ದಾಖಲಾಗಿದೆ.

ಇವರ ಮನೆಯಲ್ಲಿ ತನಿಖೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಚಂದನವನದಲ್ಲಿ ಹಾಗೂ ಕಲಾವಿದರನ್ನು ಬಿಟ್ಟು ಬೇರೆ ಜನರ ಬಳಿ ಯಾರ ಹತ್ತಿರ ಹುಲಿ ಉಗುರು ಅಥವಾ ಹುಲಿ ಉಗುರಿನ ಪೆಂಡೆಂಟ್ ಇದೆಯೋ, ಅವರ ಫೋಟೋಗಳೆಲ್ಲವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ವೇಳೆ ನಟ ದರ್ಶನ್ ಅವರ ಮನೆಗೆ ತೆರಳಿದ ಅರಣ್ಯಾಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಅಧಿಕಾರಿಗಳಿಗೆ ದರ್ಶನ್ ಅವರು ಸಂಪೂರ್ಣವಾಗಿ ಸಪೋರ್ಟ್ ನೀಡಿದ್ದಾರೆ ಎನ್ನಲಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಮನೆಗೆ ಬರುತ್ತಿದ್ದ ಹಾಗೆ, ಅವರನ್ನು ಬರಮಾಡಿಕೊಂಡು, ಅವರ ಪ್ರಶ್ನೆಗಳಿಗೆ ಉತ್ತರಿಸಿ, ಅವರು ಕೇಳಿದ ವಸ್ತುಗಳನ್ನು ನೀಡಿದ್ದಾರಂತೆ. ಈ ಶೋಧ ಕಾರ್ಯದ ವೇಳೆ ದರ್ಶನ್ ಅವರ ಮನೆಯಲ್ಲಿ ಸುಮಾರು 8 ರಿಂದ 10 ಹುಲಿ ಉಗುರುಗಳು, ಅಂದರೆ ಹುಲಿ ಉಗುರಿನ ಪೆಂಡೆಂಟ್ ಗಳು ಅಧಿಕಾರಿಗಳಿಗೆ ಸಿಕ್ಕಿದೆಯಂತೆ. ಈ ವಿಚಾರ ಬೆಳಕಿಗೆ ಬಂದಿದ್ದು, ಇದರಲ್ಲಿ ಯಾವುದು ಅಸಲಿ, ಯಾವುದು ನಕಲಿ ಎನ್ನುವ ವಿಚಾರ ಗೊತ್ತಾಗಿದೆ..

ಸಧ್ಯಕ್ಕೆ ಸಿಕ್ಕಿರುವ ಮಾಹಿಯಿಯ ಪ್ರಕಾರ ಈಗ ದರ್ಶನ್ ಅವರ ಮನೆಯಲ್ಲಿ ಸಿಕ್ಕಿರುವ ಎಲ್ಲಾ ಹುಲಿ ಉಗುರಿನ ಪೆಂಡೆಂಟ್ ನಲ್ಲಿರುವ ಉಗುರುಗಳು ಅಸಲಿ ಅಲ್ಲ, ಅವೆಲ್ಲವೂ ನಕಲಿ ಎಂದು ಹೇಳಲಾಗುತ್ತಿದೆ. ಈ ವಿಚಾರ ತಿಳಿದುಬಂದಿದ್ದು, ದರ್ಶನ್ ಅವರಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ ಎನ್ನುವುದು ಗೊತ್ತಾಗಿದೆ. ಡಿಬಾಸ್ ಅಭಿಮಾನಿಗಳಿಗೆ ಇದರಿಂದ ತಿಳಿದುಬಂದಿದೆ.

Leave a Comment