ಮಂಗಳಮುಖಿಯರ ಶವಯಾತ್ರೆ ಯಾಕೆ ರಹಸ್ಯವಾಗಿರುತ್ತೆ ಗೊತ್ತಾ?ಶವಯಾತ್ರೆಯಲ್ಲಿ ಯಾರು ಕೂಡ ಅಳುವುದಿಲ್ಲ?
ಮಂಗಳಮುಖಿಯರು ಸತ್ತರೆ ಶವಯಾತ್ರೆಯನ್ನು ರಾತ್ರಿ ಮಾಡುತ್ತಾರೆ ಹಾಗೂ ಶವದ ಮುಖವನ್ನು ಯಾರಿಗೂ ಕೂಡ ತೋರಿಸುವುದಿಲ್ಲ. ಸಾಮಾನ್ಯ ಜನರು ಸತ್ತರೆ ಎಲ್ಲರಿಗೂ ತಿಳಿಸುತ್ತಾರೆ.ಆದರೆ ಮಂಗಳಮುಖಿಯಾರ ಸಮುದಾಯದಲ್ಲಿ ಯಾರಾದರೂ ಸತ್ತರೆ ಮುಚ್ಚಿಡುತ್ತಾರೆ ಯಾರಿಗೂ ತೋರಿಸುವುದಿಲ್ಲ.ಯಾರಾದರೂ ಮಂಗಳಮುಖಿ ಸತ್ತರೆ ಆ ಸಮುದಾಯದವರು ಮಾತ್ರ ಭಾಗವಹಿಸುತ್ತಾರೆ.
ಶವ ಯಾತ್ರೆಯನ್ನು ಮಧ್ಯರಾತ್ರಿ ಮಾಡುತ್ತಾರೆ ಯಾರು ಇಲ್ಲದೆ ಇರುವಾಗ. ಯಾಕೆಂದರೆ ಮಂಗಳಮುಖಿ ಶವವನ್ನು ಬೇರೆ ಸಮುದಾಯದವರು,ಗಂಡು, ಹೆಣ್ಣು ಆಗಲಿ ಆ ಮಂಗಳಮುಖಿ ಶವವನ್ನು ನೋಡಬಾರದು ಎನ್ನುವ ಮುಖ್ಯ ಉದ್ದೇಶ.
ಈ ರೀತಿ ಮುಚ್ಚಿಡುವುದಕ್ಕೇ ಕಾರಣವೇನೆಂದರೆ ಯಾರದರು ಗಂಡು ಹೆಣ್ಣು ಮಂಗಳಮುಖಿಯ ಶವವನ್ನು ನೋಡಿದರೆ ಮುಂದಿನ ಜನ್ಮದಲ್ಲಿ ಮಂಗಳಮುಖಿಯಾಗಿ ಹುಟ್ಟುತ್ತಾರೆ ಎಂಬ ನಂಬಿಕೆ.ಈ ಕಾರಣದಿಂದ ಬೇರೆಯವರಿಗೆ ಮಂಗಳಮುಖಿಯ ಮುಖವನ್ನು ತೋರಿಸುವುದಿಲ್ಲ. ಮಂಗಳಮುಖಿಯರು ಸತ್ತಾಗ ಯಾರು ಕೂಡ ಅಳುವುದಿಲ್ಲ.ಯಾಕೆಂದರೆ ಈ ಕೆಟ್ಟ ಪ್ರಪಂಚದಿಂದ ಮುಕ್ತಿ ಸಿಕ್ಕಿದೆ ಎನ್ನುವ ಕಾರಣದಿಂದ
ಯಾರು ಕೂಡ ಅಳುವುದಿಲ್ಲ.
ಈ ಕಾರಣದಿಂದ ಮಂಗಳಮುಖಿಯರ ಶವಯಾತ್ರೆಯಲ್ಲಿ ಯಾರು ಕೂಡ ಅಳುವುದಿಲ್ಲ.ಹಿಂಧೂ ಧರ್ಮದಲ್ಲಿ ಮಂಗಳಮುಖಿಯರು ಶವಕ್ಕೆ ಚಪ್ಪಲಿಯಲ್ಲಿ ಹೊಡೆಯುತ್ತರೆ.ಯಾಕೇಂದರೆ ಯಾವುದೇ ಕಾರಣಕ್ಕೂ ಮುಂದಿನ ಜನ್ಮದಲ್ಲಿ ಮಂಗಳಮುಖಿಯಾಗಿ ಹುಟ್ಟಬೇಡ ಅಂತ ಹೇಳುತ್ತಾ ಶವಕ್ಕೆ ಹೊಡೆಯುತ್ತಾರೆ.ಮಂಗಳಮುಖಿಯರು ಸತ್ತಾಗ ಮಣ್ಣು ಮಾಡುತ್ತಾರೆ ಮತ್ತು ಯಾವುದೇ ಕಾರಣಕ್ಕೂ ಸುಡುವುದಿಲ್ಲ.