ಬ್ರಹ್ಮ ತನ್ನ ಮಗಳಾದ ಸರಸ್ವತಿಯನ್ನು ಮದುವೆ ಆದ ಕಥೆ!

0
236

ಬ್ರಹ್ಮನನ್ನು ಸೃಷ್ಟಿಯ ರಚನೆಗಾರ ಎಂದು ಕರೆಯಲಾಗುತ್ತದೆ ಹಾಗೂ ಬ್ರಹ್ಮದೇವನ ಪತ್ನಿ ವಿದ್ಯಾ ದೇವಿ ಸರಸ್ವತಿ. ಸರಸ್ವತಿ ಬ್ರಹ್ಮದೇವನ ಮಗಳು. ಹಿಂದೂ ಧರ್ಮದ ಪ್ರಕಾರ ಸರಸ್ವತಿ ಪುರಾಣ ಹಾಗೂ ಮತ್ತೆಸ್ಯ ಪುರಾಣ ಎಂಬ ಗ್ರಂಥಗಳಿವೆ.

ಈ ಎರಡು ಗ್ರಂಥಗಳ ಪ್ರಕಾರ ಬ್ರಹ್ಮದೇವನು ತನ್ನ ಮಗಳಾದ ಸರಸ್ವತಿಯನ್ನು ಮದುವೆಯಾದರು. ಸರಸ್ವತಿ ಪುರಾಣದ ಪ್ರಕಾರ ಬ್ರಹ್ಮದೇವನು ತನ್ನ ಶಕ್ತಿಯಿಂದ ಸರಸ್ವತಿಯನ್ನು ಸೃಷ್ಟಿಸುತ್ತಾನೆ. ಸರಸ್ವತಿ ಮಾತೆಯನ್ನು ವಿದ್ಯೆ ನೀಡುವ ಮಾತೇ ಎಂದು ಹೇಳಲಾಗುತ್ತದೆ.

ಸರಸ್ವತಿಗೆ ತಾಯಿ ಯಾರು ಇರಲಿಲ್ಲ. ಮತ್ತೆಸ್ಯ ಪುರಾಣದ ಪ್ರಕಾರ ಬ್ರಹ್ಮನಿಗೆ ಐದು ತಲೆ ಇತ್ತು. ಬ್ರಹ್ಮ ತನಗಿದ್ದ ಶಕ್ತಿಯಿಂದ ಸೃಷ್ಟಿಯ ರಚನೆ ಮಾಡುವಾಗ ಬ್ರಹ್ಮ ಒಬ್ಬರೇ ಇದ್ದರಂತೆ.ಆಗ ಅವರು ಸರಸ್ವತಿ, ಸಂದೇ ಬ್ರಹ್ಮಿ ಅನ್ನು ಸೃಷ್ಟಿಸಿದರಂತೆ.

ಅದರಲ್ಲಿ ಸರಸ್ವತಿ ಅತಿ ಸುಂದರವಾಗಿ ಇದ್ದರು. ಸರಸ್ವತಿ ಸೌಂದರ್ಯಕ್ಕೆ ಬ್ರಹ್ಮನು ಮಾರಿ ಹೋಗಿದ್ದರು ಹಾಗೂ ತನ್ನ ದೃಷ್ಟಿಯನ್ನು ಸರಸ್ವತಿಯ ಮೇಲೆ ಸದಾ ಇರಿಸಿದ್ದಾರಂತೆ. ಈ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ತಾಯಿ ಸರಸ್ವತಿ ನಾಲ್ಕು ದಿಕ್ಕಿನಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದಂತೆ.

ಆದರೆ ಬ್ರಹ್ಮದೇವ ಸರಸ್ವತಿ ಎಲ್ಲೇ ಅಡಗಿ ಕುಳಿತರು ತನ್ನ ಐದನೇ ತಲೆಯ ಶಕ್ತಿಯಿಂದ ಕಂಡುಹಿಡಿಯುತ್ತಿದ್ದರು. ನಂತರ ಸರಸ್ವತಿಯು ಆಕಾಶದಲ್ಲಿ ಅಡದಿ ಕುಳಿತುಕೊಳ್ಳುತ್ತಿದ್ದಳಂತೆ. ಆದರೆ ಬ್ರಹ್ಮದೇವನು ಅಲ್ಲಿಯೂ ಕಂಡುಹಿಡಿದನು.ನಂತರ ಇವರಿಬ್ಬರಿಗೂ ಮದುವೆ ಕೂಡ ಆಗುತ್ತದೆ ಹಾಗೂ ಮನು ಎಂಬ ಪುತ್ರ ಹುಟ್ಟುತ್ತನೆ.ಮನು ಮೊದಲು ಹುಟ್ಟಿರುವ ಸೃಷ್ಟಿಯ ಮಾನವ ಎಂದು ಹೇಳಲಾಗುತ್ತದೆ.

LEAVE A REPLY

Please enter your comment!
Please enter your name here