ಬಿಳಿ ಅಕ್ಕಿಯನ್ನು ಜಾಸ್ತಿ ಉಪಯೋಗಿಸುತ್ತೀರಾ ಒಮ್ಮೆ ಈ ಲೇಖನ ಓದಿ!
ಬಿಳಿ ಅಕ್ಕಿ
ನಮ್ಮೆಲ್ಲರಿಗೂ ತಿಳಿದಿರುವಂತೆ ಬಿಳಿ ಅಕ್ಕಿ ನಮ್ಮ ಆರೋಗ್ಯಕ್ಕೆ ಅಷ್ಟಾಗಿ ಒಳ್ಳೆಯದಲ್ಲ ಆದರೆ ಅದು ಯಾಕೆ ಎಂದು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ಬಿಳಿ ಅಕ್ಕಿ
ಬಿಳಿ ಅಕ್ಕಿಯನ್ನು ಅನೈಸರ್ಗಿಕವಾಗಿ ಅದರ ಮೇಲಿರುವ ತೌಡನ್ನು ತೆಗೆದು ಬಿಳಿಯಾಗಿಸಿ ಅದನ್ನು ಬಳಸಲಾಗುತ್ತದೆ
ಅದಕ್ಕೆ ಮುಖ್ಯ ಕಾರಣ ಅಕ್ಕಿಯು ಮೃದುವಾಗಲು , ಚೆನ್ನಾಗಿ ಕಾಣಲು ಇತ್ಯಾದಿ ಕಾರಣಗಳು
ಆದರೆ ರುಚಿ ಗಿಂತ ಹೆಚ್ಚು ಆರೋಗ್ಯದ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ.
ಏಕೆಂದರೆ ನೈಸರ್ಗಿಕವಾಗಿ ನಮಗೆ ಅಕ್ಕಿಯ ಬಣ್ಣ ಕೆಂಪು , ನಸುಗೆಂಪು ಇತ್ಯಾದಿ ಬಣ್ಣಗಳಲ್ಲಿ ಇರುತ್ತದೆ ಅವು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಆದರೆ ಅನೈಸರ್ಗಿಕವಾಗಿ ಅಕ್ಕಿಯ ಮೇಲಿರುವ ತೌಡನ್ನು ತೆಗೆದು , ಕೆಮಿಕಲ್ಸ್ ಯುಕ್ತ ಬಿಳಿ ಬಣ್ಣದ ಪಾಲಿಶ್ ಹೊಡೆದು ಹಣದ ಆಸೆಗೆ ಮಾರುತ್ತಾರೆ ಆದರೆ ಇದರಿಂದ ಅಕ್ಕಿಯಲ್ಲಿ ಸಿಗಬೇಕಾಗಿದ್ದ ಮುಖ್ಯವಾದ ಫೈಬರ್ ಅಂಶ ನಮಗೆ ಸಿಗುವುದಿಲ್ಲ.
ಇನ್ನು ನಮ್ಮ ದೇಹದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾದರೂ ಅದಕ್ಕೆ ಮುಖ್ಯ ಕಾರಣ ನಮ್ಮ ದೇಹದಲ್ಲಿ ಫೈಬರ್ ನ ಅಂಶ ಕೊರತೆ ಇರುವುದು.ಅಕ್ಕಿಯ ಮೇಲೆ ಇರುವ ತೌಡನ್ನು ತೆಗೆಯುವುದರಿಂದ ಫೈಬರ್ ನ ಅಂಶ ಅಕ್ಕಿಯಲ್ಲಿ ಕುಂಠಿತವಾಗುತ್ತದೆ
ಹಾಗೂ ಇದು ನಮ್ಮ ಆರೋಗ್ಯವನ್ನು ಕೆಡಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ವೀಡಿಯೊವನ್ನು ಸಂಪೂರ್ಣವಾಗಿ ನೋಡಿ.
ಧನ್ಯವಾದಗಳು.