Latest Breaking News

ನದಿಗಳಿಗೆ ನಾಣ್ಯಗಳನ್ನು ಏಕೆ ಹಾಕುತ್ತಾರೆ ಗೊತ್ತಾ?ತಪ್ಪದೇ ಓದಿ

0 2

Get real time updates directly on you device, subscribe now.

ಚಿಕ್ಕವರಾಗಿದ್ದಾಗ ಟ್ರೈನ್ ನಲ್ಲಿ ಹೋಗುವಾಗ ಯಾವುದಾದರೂ ನದಿಗಳು ಕಂಡುಬಂದರೆ ಹಿರಿಯರು ಆ ನದಿಗಳಿಗೆ ನಾಣ್ಯಗಳನ್ನು ಹಾಕುತ್ತಿದ್ದರು.ಇನ್ನು ಕೆಲವರು ಹಣೆಯ ಮೇಲೆ ನಾಣ್ಯಗಳನ್ನು ಇಟ್ಟುಕೊಂಡು ಅವರಿಗೆ ಇಷ್ಟವಾದ ದೇವರನ್ನು ನೆನೆಸಿಕೊಂಡು ನಂತರ ಆ ನಾಣ್ಯವನ್ನು ನದಿಗಳಿಗೆ ಮತ್ತು ಕೆರೆಗಳಿಗೆ ಹಾಕುತ್ತಾರೆ.

ಈ ರೀತಿ ಮಾಡುವುದರಿಂದ ಅವರು ಬಯಸಿದ್ದೆಲ್ಲ ಈಡೇರುತ್ತದೆ ಮತ್ತು ಅವರಿಗೆ ಅದೃಷ್ಟ ಒಲಿದು ಬರುತ್ತದೆ ಎಂದು ಜನರು ನಂಬುತ್ತಾರೆ.

ಇಂದಿಗೂ ಸಹ ಇತರ ಆಚರಣೆ ಮಾಡುವ ಜನರನ್ನು ನೋಡುತ್ತೇವೆ.ತಾಮ್ರ ಎಂಬುವುದು ದೇಹಕ್ಕೆ ಬಹಳ ಅವಶ್ಯಕವಾದ ಒಂದು ಪ್ರಮುಖ ಪೌಷ್ಟಿಕ ಪದಾರ್ಥ.

ಇದರಿಂದ ಶರೀರದಲ್ಲಿ ಚಯಪಾಚಯ ಪ್ರಕ್ರಿಯೆಯೂ ಉತ್ತಮವಾಗಿ ನಡೆಯುತ್ತದೆ ಮತ್ತು ದೇಹಕ್ಕೆ ಬಲವನ್ನು ನೀಡುತ್ತಾದೆ.

ಇದರಿಂದ ಅರೋಗ್ಯ ಕೂಡ ಚೆನ್ನಾಗಿ ಇರುತ್ತದೆ.ಹಿಂದಿನ ಜನರು ನೀರನ್ನು ನದಿಗಳು, ಕೆರೆಗಳಿಂದ ತಂದು ಕುಡಿಯುತ್ತಿದ್ದರು ಆದರೆ ಅವು ಕುಡಿಯಲು ಯೋಗ್ಯವಾಗಿಲ್ಲ ಕಾರಣ ಕೆರೆಗಳಿಗೆ ತಾಮ್ರದ ನಾಣ್ಯವನ್ನು ಎಸೆಯುತ್ತಿದ್ದರು.ಆದ್ದರಿಂದ ನಾಣ್ಯವನ್ನು ಕೆರೆ ಮತ್ತು ನದಿಗಳಿಗೆ ಹಾಕುತ್ತಿದ್ದರು.

ಹಿಂದಿನ ಜನರು ತಾಮ್ರದ ಪಾತ್ರೆಯಲ್ಲಿ ರಾತ್ರಿ ನೀರು ಸಂಗ್ರಹಿಸಿ ಬೆಳಗ್ಗೆ ನೀರು ಕುಡಿಯುತ್ತಿದ್ದಾರು.ಇದರಿಂದ ಅವರ ಅರೋಗ್ಯ ಚೆನ್ನಾಗಿ ಇರುತ್ತಿತ್ತು.ಅದೇ ನಂಬಿಕೆಯಿಂದ ಕೆರೆಗಳಿಗೆ ಮತ್ತು ನದಿಗಳಿಗೆ ನಾಣ್ಯವನ್ನು ಹಾಕುವುದಕ್ಕೆ ಆರಂಭಿಸಿದರು.

Get real time updates directly on you device, subscribe now.

Leave a comment