ಮನೆಯಲ್ಲಿ ದೇವರ ಕೋಣೆ ಎಲ್ಲಿರಬೇಕು ?ಎಲ್ಲಿದ್ದರೆ ಅದೃಷ್ಟ!
ಹಿರಿಯರ 1 ಮಾತು ಇದೆ ಮನೆ ಕಟ್ಟಿ ನೋಡು ಮದುವೆ ಮಾಡಿನೋಡು ಎಂದು.ಇತ್ತೀಚಿನ ಕಾಲದಲ್ಲಿ ಮದುವೆ ಮಾಡುವುದಕ್ಕೂ ಕಷ್ಟವಾಗಿದೆ ಮನೆಗಳು ಕಟ್ಟುವುದಕ್ಕೂ ಬಹಳ ಕಷ್ಟಕರವಾಗಿದೆ.ಇನ್ನೂ ಮನೆ ನಿರ್ಮಿಸುವಾಗ ಈ ಹಲ ಕೆಲವು ವಿಷಯಗಳನ್ನು ನಾವು ತಿಳಿದುಕೊಳ್ಳಲೇಬೇಕು.ಯಾಕೆಂದರೆ ವಾಸ್ತುವಿನಲ್ಲಿ ಸ್ವಲ್ಪ ತಪ್ಪಾದರು ಅದನ್ನು ಸರಿ ಪಡಿಸಲು ಬಹಳ ಕಷ್ಟ ಪಡಬೇಕಾಗುತ್ತದೆ.ಇನ್ನು ದೇವರ ಕೋಣೆಯಲ್ಲಿ ನಾವು ಗಮಣಿಸಿಕೊಳ್ಳಲೇಬೇಕಾದ ಕೆಲವು ಅಂಶಗಳನ್ನು ಇಲ್ಲಿ ತಿಳಿಸಲಾಗಿದೆ.
ದೇವರ ಕೋಣೆಯನ್ನು ನಿರ್ಮಿಸುವಾಗ ವಿಶೇಷವಾದ ಕಾಳಜಿ ವಹಿಸುವುದು ತುಂಬಾ ಅಗತ್ಯ ಏಕೆಂದರೆ ದೇವರ ಕೋಣೆಯಲ್ಲಿ ಪೂಜೆ , ಧ್ಯಾನ ಆರಾಧನೆಗಳನ್ನು ಮಾಡಲಾಗುತ್ತದೆ.
ದೇವರ ಪ್ರತಿಷ್ಠಾಪನೆಗಾಗಿ ನಿರ್ಮಿಸುವ ಈ ದೇವರ ಕೋಣೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಏಕೆಂದರೆ ಇಲ್ಲಿಂದಲೇ ಸಕಾರಾತ್ಮಕ ಕಂಪನಗಳು ಮನೆಯ ಪೂರಾ ಪಸರಿಸುತ್ತವೆ.
ದೇವರ ಕೋಣೆಯನ್ನು ಮನೆಯ ಉತ್ತರ ಅಥವಾ ಪೂರ್ವ ಈಶಾನ್ಯದಲ್ಲಿ ನಿರ್ಮಿಸಬೇಕು.
ಪ್ರಾರ್ಥನೆ ಅಥವಾ ಪೂಜೆ , ಆರಾಧನೆಯನ್ನು ಮಾಡುವಾಗ ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತು ಕೊಂಡು ಮಾಡುವಂತಿರಬೇಕು.
ದೇವರ ಕೋಣೆಯಲ್ಲಿ ದೇವರ ವಿಗ್ರಹಗಳು ಇರುವುದು ಸಹಜ ಆದರೆ 9 ಇಂಚು ಗಿಂತ ಎತ್ತರ ಮತ್ತು 2 ಇಂಚಿಗಿಂತ ಕಡಿಮೆ ಇರಬಾರದು.
ಇನ್ನು ಪೂಜೆ ಕೋಣೆಯಲ್ಲಿ ಯಾವುದೇ ವ್ಯಕ್ತಿಯು ಪೂಜೆಯನ್ನು ಮಾಡುವಾಗ ಅವನ ಎದೆಯ ಮಟ್ಟಕ್ಕೆ ದೇವರ ವಿಗ್ರಹಗಳು ಬರುವಂತೆ ಇರಬೇಕು.
ದೇವರ ಕೋಣೆಯನ್ನು ಯಾವುದೇ ಕಾರಣಕ್ಕೂ ಸ್ನಾನದ ಮನೆಗೆ ಅಂಟಿಕೊಂಡು ಅಥವಾ ಮಲಗುವ ಕೋಣೆಗೆ ಅಂಟಿಕೊಂಡು ಕಟ್ಟಬಾರದು ಅಥವ ನಿರ್ಮಿಸಬಾರದು.
ಕೈ ಕಾಲು , ಮುಖ ವನ್ನು ಶುಭ್ರವಾಗಿ ತೊಳೆಯದೆ ದೇವರಕೋಣೆಯೊಳಗೆ ಪ್ರವೇಶ ಮಾಡಬಾರದು
ಹೀಗೆ ಮಾಡುವುದರಿಂದ ಪಾಪ ಸುತ್ತಿಕೊಳ್ಳುತ್ತದೆ.
ಇನ್ನೂ ಕಾಲುಗಳನ್ನು ತೊಳೆದು ಕೊಳ್ಳುವಾಗ ಬಲಗೈಯಿಂದ ನೀರನ್ನು ಹಾಕಿಕೊಂಡು ಎಡಗೈಯಿಂದ ಪಾದಗಳನ್ನು ತೊಳೆದುಕೊಳ್ಳಬೇಕು ಹಾಗೂ ಪಾದಗಳನ್ನು ತೊಳೆಯುವಾಗ ಹಿಮ್ಮಡಿ ಯಿಂದ ತೊಳೆದು ಕೊಳ್ಳಿ ನಂತರ ದೇವರ ಮನೆ ಪ್ರವೇಶಿಸಿ.
ದೇವರ ಕೋಣೆಯಲ್ಲಿ ನೀರನ್ನು ಸಂಗ್ರಹ ಮಾಡುವ ಪಾತ್ರೆ ಯಾವತ್ತೂ ತಾಮ್ರದ್ದಾಗಿರಬೇಕಾಗಿರುತ್ತದೆ.
ತ್ರಿಕೋನಾಕಾರದ ದೇವರ ವಿಗ್ರಹ ಅಥವಾ ಫೋಟೋವನ್ನು ದೇವರ ಕೋಣೆಯಲ್ಲಿ ಇಟ್ಟುಕೊಳ್ಳಬಾರದು.
ದೇವರ ಮನೆಯ ಗೋಡೆಗೆ ಯಾವಾಗಲೂ ಬಿಳಿ ಬಣ್ಣ ಅಥವಾ ಲಿಂಬೆಯ ಬಣ್ಣ ಅಥವ ತಿಳಿ ನೀಲಿ ಬಣ್ಣ ಬಳಸಬೇಕು.
ದೇವರ ಮನೆಯ ಬಾಗಿಲು ಅಥವಾ ಕಿಟಕಿಗಳು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು.
ಅಗ್ನಿ ಕುಂಡವು ದೇವರ ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಬೇಕು.ಅಗ್ನಿ ಸಂಬಂಧಿತ ಪೂಜೆಗಳೆಂದರೆ ಹೋಮ ಹವನಾದಿಗಳನ್ನು ಆಗ್ನೇಯ ದಿಕ್ಕಿನಲ್ಲಿ ಅಂದರೆ ಪೂರ್ವಾಭಿಮುಖವಾಗಿ ಕುಳಿತುಕೊಂಡು ಮಾಡಬೇಕು.
ದೀಪದ ಸ್ಟ್ಯಾಂಡ್ ಗಳನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಟ್ಟು ಬೆಳಗಿಸಬೇಕು.
ಧನ್ಯವಾದಗಳು.