Latest Breaking News

ಈ ರಾಶಿಯವರು ಎಚ್ಚರದಿಂದ ಇರಿ;ತಾಯಿ ಚಾಮುಂಡೇಶ್ವರಿ ಆಶಿರ್ವಾದ ಈ ರಾಶಿಯವರಿಗೆ ಇರಲಿದೆ:ಮೇ ತಿಂಗಳ ನಿಮ್ಮ ಭವಿಷ್ಯ

0 0

Get real time updates directly on you device, subscribe now.

ನಿಮ್ಮ ರಾಶಿಗೆ ಅನುಗುಣವಾಗಿ ಮೇ ತಿಂಗಳ ರಾಶಿ ಭವಿಷ್ಯವನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.

1 ) ಮೇಷ ರಾಶಿ

ಈ ತಿಂಗಳ ಮೊದಲ ವಾರದಲ್ಲಿ ಸ್ವಲ್ಪ ಕಷ್ಟ ಅನುಭವಿಸುವ ಸಾಧ್ಯತೆ ಇದೆ.ಹಣವು ನಿಧಾನಗತಿಯಲ್ಲಿ ನಿಮ್ಮ ಬಳಿ ಬರುವುದು.ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ.ಕರ ಕುಶಲ ಕೆಲಸಗಾರರಿಗೆ ಉತ್ತಮ ಲಾಭ.ಆರೋಗ್ಯದ ಕಡೆ ಗಮನ ವಹಿಸಿ.ಮಾನಸಿಕ ಅಶಾಂತಿ ಕಾಡಬಹುದು.ಪುಣ್ಯಕ್ಷೇತ್ರಗಳಿಗೆ ದರ್ಶನ ಕೊಡುವ ಸಾಧ್ಯತೆ ಇದೆ .ಮನೆ ದೇವರ ಕೃಪೆ ನಿಮ್ಮ ಮೇಲೆ ಇರಲಿದೆ.

2 ) ವೃಷಭ ರಾಶಿ

ಈ ರಾಶಿಯವರಿಗೆ ಸ್ವಲ್ಪ ಆತಂಕದ ವಾತಾವರಣ ಸೃಷ್ಟಿಯಾಗುತ್ತದೆ.ಆತ್ಮವಿಶ್ವಾಸದ ಕೊರತೆಯಾಗುತ್ತದೆ.
ವ್ಯಾಪಾರ ವ್ಯವಹಾರಕ್ಕೆ ಹಣದ ಕೊರತೆ ಎದುರಾಗಲಿದೆ.ಆ ಸಮಯದಲ್ಲಿ ಗಣಪತಿಯನ್ನು ಪೂಜೆ ಮಾಡಿ ಧ್ಯಾನ ಮಾಡಿದರೆ ಉತ್ತಮ.ಶುಭ ಸಮಾರಂಭ ನಿಮ್ಮ ಮನೆಯಲ್ಲಿ ನಡೆಯಬಹುದು.ಗರ್ಭಿಣಿ ಸ್ತ್ರೀಯರು ಮತ್ತು ವೃದ್ಧರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ.

3 ) ಮಿಥುನ ರಾಶಿ

ಇನ್ನು ಕೆಲವೇ ದಿನಗಳಲ್ಲಿ ನೀವು ಅಂದುಕೊಂಡ ಎಲ್ಲ ಕೆಲಸವೂ ವಿಘ್ನಗಳಿಲ್ಲದೆ ನೆರವೇರಲಿದೆ.ನಿಮ್ಮ ದ್ವಂದ್ವ ಮನಸ್ಸಿನಿಂದ ಕುಟುಂಬದಲ್ಲಿ ಕಲಹ ಮೂಡಬಹುದು.ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಶುಭಫಲ ನಿಮಗಿದೆ.

4 ) ಕರ್ಕಾಟಕ ರಾಶಿ

ಈ ರಾಶಿಯವರಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ.ದೂರ ಪ್ರಯಾಣ ಹೋಗುವ ಸಂಭವವಿದೆ.ಕೆಟ್ಟ ಸುದ್ದಿಯನ್ನು ಕೇಳಬಹುದು .ದುರ್ಗಾ ದೇವಿಯ ದೇವಸ್ಥಾನಕ್ಕೆ ಹೋಗುವುದರಿಂದ ಹಾಗೂ ಆರಾಧನೆ ಮಾಡುವುದರಿಂದ ನಿಮ್ಮ ಚಿಂತೆ ಸ್ವಲ್ಪ ಕಡಿಮೆಯಾಗಲಿದೆ.ಮನಸ್ಸನ್ನು ಆದಷ್ಟು ಹತೋಟಿಯಲ್ಲಿಡಿ.
ದುರ್ಗಾದೇವಿಯ ಆರಾಧನೆ ಮಾಡಿ.

5 ) ಸಿಂಹ ರಾಶಿ

ನಿಮ್ಮ ಕಾರ್ಯಕ್ಷಮತೆಗೆ ಮೆಚ್ಚಿ ನಿಮ್ಮನ್ನು ಅಧಿಕಾರಿಗಳು ಶ್ಲಾಘಿಸಬಹುದು.ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.ವಿವಾಹ ಯೋಗ ಕೂಡಿ ಬರಲಿದೆ.ಅನೇಕ ಶುಭ ಫಲಗಳು ನಿಮ್ಮ ರಾಶಿಯಲ್ಲಿ ಇದೆ.
ಎಲ್ಲ ಕಾರ್ಯದಲ್ಲೂ ನಿಮಗೆ ಜಯ ಸಿಗಲಿದೆ.ಆಂತರಿಕವಾಗಿ ಬಹಳ ನೆಮ್ಮದಿಯಿಂದ ಇರುತ್ತೀರಿ.
ದೂರ ಪ್ರಯಾಣ ಹೋಗುವ ಸಂಭವವಿದೆ.

6 ) ಕನ್ಯಾ ರಾಶಿ

ಈ ರಾಶಿಯವರಿಗೆ ಅಷ್ಟೊಂದು ಲಾಭದಾಯಕವಾಗಿಲ್ಲ ಆದರೂ ಪೂರ್ತಿ ಪ್ರಮಾಣದ ಅಶುಭ ವಂತೂ ನಿಮಗಿಲ್ಲ.ನಿಮ್ಮ ಕಾರ್ಯಗಳೆಲ್ಲವೂ ನಿಧಾನಗತಿಯಲ್ಲಿ ಜರುಗುತ್ತವೆ.ತಡವಾದರೂ ನೀವು ಗೆಲ್ಲುತ್ತೀರಿ.

7 ) ತುಲಾ ರಾಶಿ

ಈ ರಾಶಿಯವರಿಗೆ ಸಿಹಿ ಸುದ್ದಿಯನ್ನು ಕೇಳುವ ಯೋಗ ಇದೆ.ಹೂಡಿಕೆ ಮಾಡಿದ ಹಣದಿಂದ ಲಾಭ ಬರಲಿದೆ.
ಆರ್ಥಿಕವಾಗಿ ಸದೃಢರಾಗುತ್ತೀರಿ.ಆರೋಗ್ಯದ ಕಡೆ ಗಮನ ಹರಿಸಿ .ಮನೆ ದೇವರ ಪ್ರಾರ್ಥನೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

8 ) ವೃಶ್ಚಿಕ ರಾಶಿ

ಪೂರ್ವಜರ ಆಸ್ತಿ ನಿಮಗೆ ದೊರೆಯುವ ಯೋಗ ಇದೆ.ನಿಮ್ಮ ವಾಕ್ಚಾತುರ್ಯವೇ ನಿಮಗೆ ಅದೃಷ್ಟ ತಂದುಕೊಡಲಿದೆ.ಈ ರಾಶಿಯ ಹೆಣ್ಣುಮಕ್ಕಳು ಆರೋಗ್ಯದ ಕಡೆ ಗಮನ ವಹಿಸಬೇಕು.ಆರ್ಥಿಕವಾಗಿ ಸದೃಢರಾಗುತ್ತೀರಿ.

9 ) ಧನಸ್ಸು ರಾಶಿ

ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು.ವ್ಯಾಪಾರದಲ್ಲಿ ಬರುವ ಲಾಭದಿಂದ ನಿಮಗೆ ತೃಪ್ತಿ ಸಿಗುವುದಿಲ್ಲ.ನಿಧಾನಗತಿಯಲ್ಲಿ ನಿಮಗೆ ಯಶಸ್ಸು ದೊರೆಯಲಿದೆ.ಕುಟುಂಬದಲ್ಲಿ ಮತ್ತು ಕಚೇರಿಗಳಲ್ಲಿ ಗೌರವ ಹೆಚ್ಚುತ್ತದೆ.ಸಕಾರಾತ್ಮಕ ಚಿಂತನೆಯಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

10 ) ಮಕರ ರಾಶಿ

ಇವರಿಗೆ ಅದೃಷ್ಟದ ಕಾಲ ಶುರುವಾಗಲಿದೆ.ಅಂದುಕೊಂಡ ಕೆಲಸಗಳೆಲ್ಲವೂ ಇವರು ಸಾಧಿಸುತ್ತಾರೆ.
ಕಲಾವಿದರು ಉನ್ನತ ಮಟ್ಟಕ್ಕೆ ಏರುತ್ತೀರಿ.ನಿಮ್ಮ ಆಲಸ್ಯತನದಿಂದ ಆರ್ಥಿಕ ಸಂಕಷ್ಟ ಎದುರಾದರೂ ಅದನ್ನು ನಿಭಾಯಿಸುವ ಸಾಮರ್ಥ್ಯ ನಿಮ್ಮಲ್ಲೇ ಅಡಗಿದೆ.ಭೂಮಿ ಯೋಗ ಇದೆ.ಕಂಕಣ ಭಾಗ್ಯ ಕೂಡಿ ಬರಲಿದೆ.

11 ) ಕುಂಭ ರಾಶಿ

ನೀವು ಕಷ್ಟಪಟ್ಟು ಮಾಡಿದ ಕೆಲಸಕ್ಕೆ ನಿಮಗೆ ಯಶಸ್ಸು ಸಿಕ್ಕಿದರೂ ಆ ಯಶಸ್ಸಿನಿಂದ ನೀವು ತೃಪ್ತರಾಗುವುದಿಲ್ಲ.ಎಲ್ಲವೂ ನಿಮ್ಮ ಬಳಿ ಇದ್ದರೂ ಇನ್ನೂ ಏನೋ ಬೇಕು ಎಂಬ ಮನಸ್ಥಿತಿ ನಿಮ್ಮದಾಗಿರುತ್ತದೆ.ಮನಸ್ಸಲ್ಲಿ ಸಾಕಷ್ಟು ಗೊಂದಲಗಳು ಇರುತ್ತವೆ.
ಇದರಿಂದ ಮುಕ್ತಿ ಹೊಂದಲು ಶನಿದೇವರ ಪ್ರಾರ್ಥನೆಯನ್ನು ಮಾಡಿ.

12 ) ಮೀನ ರಾಶಿ

ನೀವು ಮಾಡದ ತಪ್ಪಿಗೆ ನಿಮ್ಮ ಮೇಲೆ ಆಪಾದನೆ ಬರುವ ಸಾಧ್ಯತೆ ಇದೆ.ಇದಕ್ಕೆ ಪರಿಹಾರ ಅಂದರೆ ಮೌನವಾಗಿರುವುದು.ಉದ್ಯೋಗದಲ್ಲಿ ಪ್ರಗತಿ.ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಕಾರ್ಯಕ್ಕೆ ಮನ್ನಣೆ ಸಿಗಲಿದೆ.
ಆರೋಗ್ಯದ ಕಡೆ ಗಮನ ವಹಿಸಿ.ಇನ್ನು ನೀವು ನರಸಿಂಹ ಸ್ವಾಮಿಯ ಪ್ರಾರ್ಥನೆ ಮಾಡಿದರೆ ಉತ್ತಮ.

ಇದರಲ್ಲಿ ನಿಮ್ಮ ರಾಶಿ ಯಾವುದು ಎಂದು ಕಾಮೆಂಟ್ ಮಾಡಿ ತಿಳಿಸಿ ಹಾಗೂ ಭಕ್ತಿಯಿಂದ ನಿಮ್ಮ ಮನೆ ದೇವರ ಹೆಸರನ್ನು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.

Get real time updates directly on you device, subscribe now.

Leave a comment