ವಿಟಮಿನ್ ಸಿ ಯಾವ ಆಹಾರದಲ್ಲಿ ಹೆಚ್ಚು ಇರುತ್ತದೆ ?ಮತ್ತು ಅದನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ?

0
3892
ವಿಟಮಿನ್ ಸಿ ಯಾವ ಆಹಾರದಲ್ಲಿ ಹೆಚ್ಚು ಇರುತ್ತದೆ ?ಮತ್ತು ಅದನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ?ಜಾಸ್ತಿ ಪ್ರಮಾಣದಲ್ಲಿ ಸೇವನೆ ಮಾಡಿದರೆ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳೇನು ?

ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಮಗೆ ವಿಟಮಿನ್ ಸಿ ಅಂಶ ಗಳು ಬಹಳ ಅಗತ್ಯವಿರುತ್ತದೆ.ವಿಟಮಿನ್ ಸಿ ಯಾವ ಆಹಾರದಲ್ಲಿ ಸಿಗುತ್ತದೆ ಎಂದು ನೋಡುವುದಾದರೆ

ಪೇರಳೆ ಹಣ್ಣು , ಕಿತ್ತಳೆ ಹಣ್ಣು , ಸ್ಟ್ರಾಬೆರಿ , ಬ್ರೊಕೋಲಿ , ಕಿವಿಹಣ್ಣು , ಲಿಚಿ ಹಣ್ಣು , ಪೈನಾಪಲ್ ಹಣ್ಣು ಇತ್ಯಾದಿಗಳಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿರುತ್ತದೆ.ಹಾಗೂ ಬ್ರೊಕೋಲಿ , ಕೆಂಪು ಬಣ್ಣದ ದಪ್ಪ ಮೆಣಸಿನಕಾಯಿ ನಮ್ಮ ಆರೋಗ್ಯಕ್ಕೆ ವಿಟಮಿನ್ ಸಿ ಅಂಶವನ್ನು ಒದಗಿಸುವುದರ ಜೊತೆಗೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಹಾಗೂ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.

ಬೆಟ್ಟದ ನೆಲ್ಲಿ ಕಾಯಿಯನ್ನು ಸೇವನೆ ಮಾಡುವುದರಿಂದ 2 ಕಿತ್ತಳೆಯನ್ನು ಸೇವನೆ ಮಾಡಿದಾಗ ಸಿಗುವ ವಿಟಾಮಿನ್ ಸಿ ಅಂಶ 1 ಬೆಟ್ಟದ ನೆಲ್ಲಿಕಾಯಿಯಲ್ಲಿ 2 ಪಟ್ಟು ದೇಹಕ್ಕೆ ವಿಟಮಿನ್ ಸಿ ಅಂಶ ಸಿಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.ಮತ್ತು ಬೆಟ್ಟದ ನೆಲ್ಲಿಕಾಯಿಯನ್ನು ಸೇವನೆ ಮಾಡುವುದರಿಂದ ಶೀತಕ್ಕೆ ಸಂಬಂಧಿಸಿದ ರೋಗಗಳನ್ನು ದೂರವಿಡಬಹುದು.

ಇನ್ನು ನಾವು ಸೇವಿಸುವ ವಿಟಮಿನ್ ಸಿ ಅಂಶ ಕೂಡ 1 ಮಿತಿಯಲ್ಲಿರಬೇಕು ಅತಿಯಾದರೆ ಅಮೃತ ಕೂಡ ವಿಷದಂತೆ ಹಾಗೆ ವಿಟಮಿನ್ ಸಿ ನಮ್ಮ ದೇಹದಲ್ಲಿ ಹೆಚ್ಚಾದರೆ ವಾಕರಿಕೆ , ವಾಂತಿ , ಭೇದಿ , ತಲೆನೋವು , ಎದೆ ಉರಿ ಮತ್ತು ಕೈಕಾಲುಗಳ ಸೆಳೆತ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಒಬ್ಬ ವ್ಯಕ್ತಿ 1 ದಿನಕ್ಕೆ ಸುಮಾರು 65 ರಿಂದ 90 ಮಿಲಿ ಗ್ರಾಮ್ ವಿಟಮಿನ್ ಸಿ ಸಾಕಾಗುತ್ತದೆ ಎಂದು ಆಹಾರ ತಜ್ಞರು ಅಭಿಪ್ರಾಯ ಪಡುತ್ತಾರೆ.

ಧನ್ಯವಾದಗಳು.

LEAVE A REPLY

Please enter your comment!
Please enter your name here