ದೆವ್ವಗಳು ಕಟ್ಟಿದ ದೇವಾಲಯ!ಈ ದೇವಾಲಯದ ಬಗ್ಗೆ ಆಸಕ್ತಿಕರ ವಿಷಯಗಳು!

0
1156

ಈ ಸೃಷ್ಟಿಯಲ್ಲಿ ಯಾವುದಾದರೂ 1 ಕಾರ್ಯ ಜರುಗಬೇಕಾದರೆ ಅದಕ್ಕೆ ಒಂದು ಕಾರಣ ಇದ್ದೇ ಇರುತ್ತದೆ .ಆದಿ ಅಂತ್ಯದ ಈ ಸೂತ್ರಗಳು ಸೃಷ್ಟಿಯ ಪ್ರತಿಯೊಂದು ಜೀವಿಗಳಿಗೂ ಅನ್ವಯವಾಗುವಂಥದ್ದು.ಯುಗಾಂತ್ಯದ ಸಿದ್ಧಾಂತಗಳನ್ನು ನಾವು ಪ್ರತಿನಿತ್ಯ ಕೇಳುತ್ತಲೇ ಇರುತ್ತೇವೆ.ಪ್ರಾರಂಭವಾದ ಪ್ರತಿಯೊಂದು ಯುಗವೂ ಒಂದಲ್ಲ ಒಂದು ಸಮಯದಲ್ಲಿ ಅಂತ್ಯವಾಗಲೇಬೇಕು. ಅಂತ್ಯವಾದ ಪ್ರತಿಬಾರಿಯೂ ನೂತನ ಯುಗವು ಪ್ರಾರಂಭವಾಗುತ್ತದೆ.

ದೇವಾಲಯಗಳನ್ನು ಧಾರ್ಮಿಕ ಶ್ರದ್ಧಾ ಕೇಂದ್ರಗಳೆಂದು ಪರಿಗಣಿಸಲಾಗುತ್ತಿತ್ತು.ಋಣಾತ್ಮಕ ಶಕ್ತಿಯನ್ನು ತೊಲಗಿಸಿ ಸಕಾರಾತ್ಮಕ ಶಕ್ತಿಯನ್ನು ನೀಡಬಲ್ಲಂತಹ ಪ್ರದೇಶ ಈ ದೇವಸ್ಥಾನ ಎನ್ನುವ ನಂಬಿಕೆ ಭಕ್ತರಲ್ಲಿ ಮತ್ತು ಜನರಲ್ಲಿ ಇದೆ.

ಆದರೆ ಋಣಾತ್ಮಕ ಶಕ್ತಿಗಳ ಪ್ರತಿನಿಧಿಯಾಗಿರುವ ಭೂತಗಳು ಸಕಾರಾತ್ಮಕ ಶಕ್ತಿಯ ದೇವಾಲಯವನ್ನು ನಿರ್ಮಿಸಿವೆ ಎಂದು ಹೇಳಿದರೆ ನಂಬಲು ಸಾಧ್ಯವಿಲ್ಲ.ಈ ದೇವಾಲಯ ಉತ್ತರ ಪ್ರದೇಶದ ಹಾ ಪುರದ ದರ್ತಿಯಾನಾ ಗ್ರಾಮದಲ್ಲಿ ಈ ದೇವಾಲಯವಿದೆ.

ಸ್ಥಳೀಯರ ಪ್ರಕಾರ ಈ ಶಿವನ ದೇವಸ್ಥಾನವನ್ನು ರಾತ್ರೋರಾತ್ರಿ ಭೂತಗಳು ನಿರ್ಮಾಣ ಮಾಡಿವೆಯಂತೆ.
ಕನಿಷ್ಠ ಸಾವಿರ ವರ್ಷದ ಇತಿಹಾಸವಿರುವ ಈ ಮಂದಿರವನ್ನು ಭೂತ್ ವಾಲಾ ಮಂದಿರ ಎಂದು ಕರೆಯಲಾಗುತ್ತದೆ.

ಈ ದೇವಾಲಯ ಭೂತಗಳಿಂದ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ ಆದರೆ ಕೆಂಪು ಇಟ್ಟಿಗೆಗಳಿಂದ ಸಾಮಾನ್ಯವಾಗಿ ನಿರ್ಮಿಸಿರುವ ರೀತಿಯಲ್ಲಿ ಇದೆ .ಭೂತಗಳು ರಾತ್ರೋರಾತ್ರಿ ಈ ದೇವಾಲಯವನ್ನು ನಿರ್ಮಿಸಿವೆ.ಆದರೂ ಈ ದೇವಾಲಯದ ಶಿಖರದ ಭಾಗವನ್ನು ಭೂತಗಳಿಗೆ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲವಂತೆ.ಆದ್ದರಿಂದ ಈ ದೇವಾಲಯದ ಶಿಖರ ಭಾಗವನ್ನು ಮನುಷ್ಯರೇ ಪೂರ್ಣಗೊಳಿಸಿದ್ದಾರೆ.

ಗ್ರಾಮಸ್ಥರ ನಂಬಿಕೆಯ ಪ್ರಕಾರ ರಾತ್ರೋರಾತ್ರಿ ಈ ದೇವಾಲಯವನ್ನು ನಿರ್ಮಿಸುತ್ತಿದ್ದ ಭೂತಗಳು ಶಿಖರವನ್ನು ಪೂರ್ಣಗೊಳಿಸುವ ವೇಳೆಗೆ ಬೆಳಕಾಗಿತ್ತಂತೆ.ಇನ್ನು ಆ ಜಾಗದಿಂದ ತೆರಳಬೇಕಾಗಿದ್ದರಿಂದ ಶಿಖರದ ಭಾಗ ಪೂರ್ಣಗೊಂಡಿರಲಿಲ್ಲ.ಇತ್ತೀಚೆಗೆ ಅದನ್ನು ಗ್ರಾಮಸ್ಥರೇ ಪುನರ್ ನಿರ್ಮಾಣ ಮಾಡಿದ್ದಾರೆ.

ಈ ದೇವಾಲಯದ ಒಳಭಾಗದಲ್ಲಿ ನವೀಕರಣ ಮಾಡಲಾಗಿದೆ. ಭೂತಗಳುನಿರ್ಮಿಸಿರುವ ದೇವಾಲಯದಿಂದ ಯಾವುದೇ ಸಮಸ್ಯೆಗಳು ಇಲ್ಲ ಅದರಿಂದ ನಮಗೆ ಒಳ್ಳೆಯದೇ ಆಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅತಿವೃಷ್ಟಿ ಅನಾವೃಷ್ಟಿಯ ಸಮಯದಲ್ಲಿ ಬೇರೆ ಊರಿನ ರೈತರೆಲ್ಲ ಸಮಸ್ಯೆ ತೀವ್ರ ಸಂಕಷ್ಟ ಎದುರಿಸಿದರೆ ಈ ದೇವಾಲಯದ ಪ್ರಭಾವದಿಂದ ನಮಗೆ ಅಂತಹ ಸಮಸ್ಯೆ ಎದುರಾಗಿಲ್ಲ , ಈ ದೇವಾಲಯ ರೈತರನ್ನು ಗ್ರಾಮಸ್ಥರನ್ನು ಸಂಕಷ್ಟದ ಪರಿಸ್ಥಿತಿಯಿಂದ ಕಾಪಾಡುತ್ತದೆ ಎಂದು ಆ ಗ್ರಾಮಸ್ಥರು ನಂಬಿಕೆ ಇಟ್ಟು ಅತ್ಯಂತ ಭಕ್ತಿ ಪೂರ್ವಕವಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ.ಇನ್ನು ನಿಮಗೆ ಸಾಧ್ಯವಾದಲ್ಲಿ ಈ ಕ್ಷೇತ್ರವನ್ನೂ ತಪ್ಪದೆ ಭೇಟಿ ನೀಡಿ ಶ್ರೀ ಮಹಾ ಶಿವನನ್ನು ಪ್ರಾರ್ಥಿಸಿ ದರ್ಶನ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಿ.

ಧನ್ಯವಾದಗಳು.

LEAVE A REPLY

Please enter your comment!
Please enter your name here