ಥೈರಾಯ್ಡ್ ಸಮಸ್ಯೆಗೆ ಕಾರಣ ಮತ್ತು ಲಕ್ಷಣಗಳು!

Health & Fitness

ಥೈರಾಯ್ಡ್

ಥೈರಾಯ್ಡ್ ಗ್ರಂಥಿಯು ಗಂಟಲಿನ ಭಾಗದಲ್ಲಿ ಒಂದು ಚಿಟ್ಟೆಯ ಆಕಾರದಲ್ಲಿ ಇರುತ್ತದೆ.ಈ ಥೈರಾಯಿಡ್ ಗ್ರಂಥಿಗೆ ಮುಖ್ಯವಾಗಿ 2 ವಿಧವಾಗಿ ತೊಂದರೆಗಳು ಬರುತ್ತವೆ ಅವು ಯಾವುವೆಂದರೆ ಹೈಪೋ ಥೈರಾಯ್ಡ್ ಮತ್ತು ಹೈಪರ್ ಥೈರಾಯ್ಡ್ .ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕೆಲಸ ಮಾಡದಿದ್ದಾಗ ಶರೀರದ ಮುಖ್ಯವಾದ ಭಾಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.ಇದರಲ್ಲಿ ಒಂದು ವಿಚಿತ್ರವೇನೆಂದರೆ ಬಹಳಷ್ಟು ಜನರಿಗೆ ಥೈರಾಯ್ಡ್ ಇರುವುದೇ ಗೊತ್ತಿರುವುದಿಲ್ಲ.

ಹೈಪೋ ಥೈರಾಯಿಡ್

ಆಹಾರ ಸೇವನೆಯಲ್ಲಿ ಹೆಚ್ಚಿನ ವ್ಯತ್ಯಾಸವನ್ನು ಕಾಣದೆ , ಬಹಳಷ್ಟು ವೇಗವಾಗಿ ತೂಕ ಹೆಚ್ಚಾಗುವುದು ಹೈಪೋಥೈರಾಯ್ಡ್ ಲಕ್ಷಣವಾಗಿದೆ.ಈ ಸಮಸ್ಯೆ ಇರುವವರಿಗೆ ಹೃದಯ ರೋಗಗಳು , ಕೂದಲು ಉದುರುವುದು ,ಲೈಂಗಿಕ ಸಮಸ್ಯೆಗಳು , ಬಂಜೆತನದಂತಹ ಸಮಸ್ಯೆಗಳು ಎದುರಾಗಬಹುದು.

*ಹೈಪರ್ ಥೈರಾಯ್ಡಿಸಮ್

ಥೈರಾಯ್ಡ್ ಹಾರ್ಮೋನ್ ಹೆಚ್ಚು ಉತ್ಪತ್ತಿ ಆಗುವುದನ್ನು ಹೈಪರ್ ಥೈರಾಯಿಡಿಸಂ ಎಂದು ಕರೆಯುತ್ತಾರೆ.ಈ ಸಮಸ್ಯೆ ಇರುವವರಿಗೆ ಹಸಿವು ಹೆಚ್ಚಾಗುವುದು ಅಂದರೆ ಹೆಚ್ಚಾಗಿ ಆಹಾರ ಸೇವನೆ ಮಾಡಿದರೂ ತೂಕವು ಇಳಿಮುಖ ಕಾಣುವುದು ,ನಾಡಿ ವೇಗ ಹೆಚ್ಚುವುದು ,ಕೈ ಕಾಲು ನಡುಗುವುದು ,ಅತಿಯಾಗಿ ಬೆವರುವುದು ,ಲೂಸ್ ಮೋಶನ್ ಸಮಸ್ಯೆ ಇವೆಲ್ಲವೂ ಪ್ರಮುಖ ಲಕ್ಷಣವಾಗಿದೆ.

ಥೈರಾಯ್ಡ್ ಸಮಸ್ಯೆ ಇರುವವರು ಯಾವ ಆಹಾರ ಸೇವಿಸಬೇಕು ?

ಥೈರಾಯ್ಡ್ ಸಮಸ್ಯೆ ಇರುವವರು ಅಯೋಡಿನ್ ಯುಕ್ತ ಆಹಾರವನ್ನು ಸೇವಿಸುವುದು ಉತ್ತಮ.ಸ್ಟ್ರಾಬೆರಿಯಲ್ಲಿ ಹೇರಳವಾಗಿ ಅಯೋಡಿನ್ ಅಂಶ ಇರುವುದರಿಂದ ಥೈರಾಯ್ಡ್ ಇರುವವರು ಇದನ್ನು ವಾರಕ್ಕೆ ಒಮ್ಮೆಯಾದರೂ ಸೇವಿಸುವುದು ಸೂಕ್ತ.ನೀವು ನಾನ್ ವೆಜಿಟೇರಿಯನ್ ಆಗಿದ್ದರೆ ಮೊಟ್ಟೆ ಯನ್ನು ಸೇವಿಸಿ.ಮೊಟ್ಟೆಯಲ್ಲಿ ಕ್ಯಾಲ್ಸಿಯಂ ಅಂಶವಲ್ಲದೆ ಅಯೋಡಿನ್ ಅಂಶವು ಸಮೃದ್ಧವಾಗಿದೆ.

ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿ.

ಕೆಂಪಕ್ಕಿ ಅನ್ನ , ಬಾರ್ಲಿ ಅಕ್ಕಿ , ಓಟ್ಸ್ ಇವುಗಳಲ್ಲಿ ವಿಟಮಿನ್ ಬಿ ಹೆಚ್ಚಾಗಿ ಇರುತ್ತದೆ.ಇವುಗಳನ್ನು ಸೇವಿಸುವುದರಿಂದ ಥೈರಾಯ್ಡ್ ಸಮಸ್ಯೆ ಇರುವವರಲ್ಲಿ ಕುತ್ತಿಗೆ ದಪ್ಪವಾಗುವುದು ತಪ್ಪುತ್ತದೆ.ಮಶ್ರೂಮ್ ಸೇವಿಸಿ.ಬೆಳ್ಳುಳ್ಳಿಯನ್ನು ಆಹಾರದಲ್ಲಿ ಬಳಸಿ.ಸೊಪ್ಪು ,ಮೀನು ಬ್ರೊಕೋಲಿಯನ್ನು ಹೆಚ್ಚಾಗಿ ಸೇವಿಸಿ ,ಟೊಮೆಟೊವನ್ನು ಅಡುಗೆಯಲ್ಲಿ ಬಳಸುವುದು.ವಾರಕ್ಕೊಮ್ಮೆಯಾದರೂ ಕೊಬ್ಬರಿ ಎಣ್ಣೆಯನ್ನು ಆಹಾರದಲ್ಲಿ ಬಳಸಿ ಸೇವಿಸುವುದು.ತರಕಾರಿ ಸೊಪ್ಪನ್ನು ಹೆಚ್ಚಾಗಿ ಸೇವಿಸಿ.

ಗ್ಲೂಟಾನ್ ಫ್ರೀ ಇರುವಂತಹ ಆಹಾರವನ್ನು ಸೇವಿಸಬೇಕು.

ಯಾವ ಆಹಾರ ಸೇವಿಸಬಾರದು ? ಗ್ಲೂಟಾನ್ ಇರುವಂತಹ ಪದಾರ್ಥಗಳನ್ನು ಸೇವಿಸಬಾರದು.

ಕೇಕ್ , ಚಾಕೊಲೇಟ್ , ಡೋನಟ್ಸ್ ಗಳನ್ನು ಸೇವಿಸಬಾರದು.ಸಕ್ಕರೆ ಮತ್ತು ಸಕ್ಕರೆಯ ಅಂಶ ಇರುವ ಪದಾರ್ಥಗಳನ್ನು ತಿನ್ನಬಾರದು.

ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

ಧನ್ಯವಾದಗಳು.

Leave a Reply

Your email address will not be published.