ಈ ದೇವಿಗೆ ಅಮಾವಾಸ್ಯೆಯ ದಿನ ಹೀಗೆ ಪೂಜೆ ಮಾಡಿದರೆ ಸಾಕು!ನಿಮ್ಮ ಎಲ್ಲಾ ಸಮಸ್ಯೆಗಳು ಮಂಗ ಮಾಯವಾಗುತ್ತವೆ!

Featured-Article

ಸಾಮಾನ್ಯವಾಗಿ ಏಳಿಗೆಯನ್ನು ಕಾಣುವ ಜನರನ್ನು ಕಂಡರೆ ಅಸೂಯೆ ಪಡುವ ಜನರೇ ಹೆಚ್ಚು
ಅದರಲ್ಲೂ ಆಪ್ತರೇ ಕೇಡು ಬಯಸುವುದು ಸರ್ವೇಸಾಮಾನ್ಯವಾಗಿದೆ.

ಇನ್ನೂ ಬೇರೆಯವರಿಗಿಂತ ನಮ್ಮ ಸಂಬಂಧಿಕರೇ ನಮ್ಮ ಏಳಿಗೆಯನ್ನು ಸಹಿಸುವುದಿಲ್ಲ
ಅದಕ್ಕಾಗಿ ಒಂದಲ್ಲ ಒಂದಾದರೂ ಮನಸ್ಸಲ್ಲಾದರೂ ಕೇಡನ್ನು ಬಯಸುತ್ತಿರುತ್ತಾರೆ.

ಇನ್ನೂ ಇಂತಹ ಕೇಡನ್ನು ಬಯಸುವವರಿಗಾಗಿಯೇ ಇಂದಿನ ನಮ್ಮ ಲೇಖನದಲ್ಲಿ ಪವಾಡ ದೇವಿಯ ಬಗ್ಗೆ ತಿಳಿಸಲಿದ್ದೇವೆ.

ದೇವಿ ಆದಿಪರಾಶಕ್ತಿ

ಈ ಗುಡಿಗೆ ಒಮ್ಮೆ ಹೋಗಿ ಪ್ರಾರ್ಥಿಸಿಕೊಂಡು ಬಂದರೆ ಸಾಕು ನಮ್ಮ ವಿರುದ್ಧ ಯಾರೇ ಕೇಡು ಬಯಸಿದರೂ , ಮಾಟ ಮಂತ್ರ ಮಾಡಿದ್ದರು , ತಂತ್ರಗಳನ್ನು ನಡೆಸಿದ್ದರು ಅವೆಲ್ಲವನ್ನು ಕೂಡ ಕ್ಷಣಮಾತ್ರದಲ್ಲಿ ತೆಗೆದುಹಾಕುತ್ತಾಳೆ ಈ ತಾಯಿ ಆದಿಪರಾಶಕ್ತಿ ಜಗನ್ಮಾತೆ .ಈ ತಾಯಿಯನ್ನು ಪವಾಡ ದೇವತೆ ಎಂದು ಸಹ ಕರೆಯಲಾಗುತ್ತದೆ.

ಅಮವಾಸ್ಯೆ ದಿನಗಳಂದು ಈ ದೇವಿಯ ಸನ್ನಿಧಾನಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ
ಹಾಗೂ ತಮ್ಮ ಕೆಲಸ ಕಾರ್ಯಗಳಿಗೆ ಅಡೆತಡೆ ಬರುವ ಅಸೂಯೆ ಮಾಟ ಮಂತ್ರ ತಂತ್ರಾದಿ ಗಳನ್ನು ಹೋಗಲಾಡಿಸುವಂತೆ ಬೇಡಿಕೊಳ್ಳುತ್ತಾರೆ.

ಈ ಕ್ಷೇತ್ರದ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಈ ಕ್ಷೇತ್ರದಲ್ಲಿರುವ ಕಲ್ಯಾಣಿ.ಈ ಕಲ್ಯಾಣಿ ಯಲ್ಲಿ ಸಣ್ಣ ಸಣ್ಣ ಕಲ್ಲಿನ ಕಟ್ಟೆಯನ್ನು ಅರ್ಚಕರು ಕಟ್ಟಲಾಗಿರುತ್ತದೆ ಅದನ್ನು ಭಕ್ತರು ತಮ್ಮ ಕಾಲಿನಿಂದ ಒದ್ದು ಮುಂದೆ ಸಾಗುತ್ತಾರೆ ಮತ್ತು ಅದನ್ನು ಹಿಂತಿರುಗಿ ನೋಡುವುದಿಲ್ಲ.

ಅದೇ ರೀತಿ ಆ ಕಲ್ಲಿನ ತಡೆಯನ್ನು ಹೊಡೆದ ಹಾಗೆ ಕೆಲಸ ಕಾರ್ಯಕ್ಕೆ ಅಡೆತಡೆ , ಅಡ್ಡಿ ಆತಂಕಗಳನ್ನು ಹೊಡೆದು ಹಾಕುತ್ತಾಳೆ ಈ ದೇವಿ ಜಗನ್ಮಾತೆ ಎಂದು ನಂಬಲಾಗಿದೆ.ಇನ್ನೂ ಈ ಪವಾಡ ಕ್ಷೇತ್ರ ಇರುವ ಸ್ಥಳ ಯಾವುದು ಎಂದರೆ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿರುವ ಶ್ರೀಕ್ಷೇತ್ರ ಆರತಿ ಉಕ್ಕಡ.ಇಲ್ಲಿ ನೆಲೆಸಿರುವ ದೇವಿ ಜಗನ್ಮಾತೆ ಉಕ್ಕಡ ಅಹಲ್ಯಾದೇವಿ.ಈ ದೇವಿಯನ್ನು ಉಕ್ಕಡ ದಮ್ಮ ಉಕ್ಕಡದ ಮಾರಮ್ಮ ಎಂದು ಕರೆಯಲಾಗುತ್ತದೆ.ಈ ದೇವಿಯ ಸನ್ನಿಧಾನಕ್ಕೆ ಹೋಗಲು ಸಾಧ್ಯವಾಗದವರು ಇರುವಲ್ಲಿಯೇ ಭಕ್ತಿಯಿಂದ ನೆನೆದು ಬೇಡಿಕೊಂಡರೆ ಸಾಕು ಆ ಭಕ್ತರ ಶತ್ರುಗಳನ್ನು ನಾಶ ಮಾಡುವ ಜವಾಬ್ದಾರಿ ತಾಯಿ ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ.ಇನ್ನು ಈ ತಾಯಿಗೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯದಿಂದ ಸಹ ಭಕ್ತರು ಆಗಮಿಸುತ್ತಿದ್ದಾರೆ.

ಇನ್ನು ವಿಶೇಷವಾಗಿ ಅಮವಾಸ್ಯೆ ದಿನಗಳಂದು ವಿಶೇಷವಾದ ವಿಶಿಷ್ಟ ರೀತಿಯ ಪೂಜೆಯನ್ನು ಇಲ್ಲಿ ಕೈಗೊಳ್ಳಲಾಗುತ್ತದೆ.

ಧನ್ಯವಾದಗಳು

Leave a Reply

Your email address will not be published.