ಸದಾ ನಿಮಗೆ ಕೈ ನಡುಗುವುದು ತಲೆ ನಡುಗುವುದು ಆಗ್ತಾ ಇದೆಯಾ ಹಾಗಾದರೆ ಈ ಮನೆಮದ್ದನ್ನು ಬಳಸಿ ನೋಡಿ!
ಕಂಪವಾತ ಅಥವಾ ಪಾರ್ಕಿನ್ಸನ್
ತಲೆ , ಕೈ ಕಾಲು ನಮಗೆ ಅರಿವಿಲ್ಲದೆ ಅಲುಗಾಡುತ್ತಿದ್ದರೆ ಅದು ಕಂಪವಾತದ ಪ್ರಮುಖ ಲಕ್ಷಣವಾಗಿದೆ. ಇನ್ನು
ಇಂತಹ ತೊಂದರೆಯಿರುವವರು ಅಶ್ವಗಂಧವನ್ನು ಬಳಕೆ ಮಾಡಬಹುದಾಗಿದೆ.
ಕಂಪವಾತವು ವಾತದೋಷದಿಂದ ಆಗಿರುವ ತೊಂದರೆ ಆದ್ದರಿಂದ ಈ ಕಾಯಿಲೆಗೆ ಅಶ್ವಗಂಧದ ಬಳಕೆಯನ್ನು ಮಾಡಬಹುದಾಗಿದೆ.ಅಶ್ವಗಂಧ ಚೂರ್ಣವನ್ನು ಕಂಪವಾತ ಇರುವಂಥವರು ಹೀಗೆ ಬಳಸಿ.ಈ ಮನೆಮದ್ದು ಕಂಪವಾತಕ್ಕೆ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು.
ಬೇಕಾಗುವ ಪದಾರ್ಥಗಳು:1 ಲೋಟ ಹಾಲು ,1 ಸ್ಪೂನ್ ತುಪ್ಪ ಮತ್ತು ಅರ್ಧ ಚಮಚ ಅಶ್ವಗಂಧ ಚೂರ್ಣ.
ಮಾಡುವ ವಿಧಾನ :1 ಲೋಟ ಹಾಲಿಗೆ 1 ಸ್ಪೂನ್ ತುಪ್ಪ , ಅರ್ಧ ಸ್ಪೂನ್ ಅಶ್ವಗಂಧದ ಚೂರ್ಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತಯಾರಿಸಿಕೊಂಡು ಊಟ ತಿಂಡಿಯನ್ನು ತಿನ್ನುವ ಮುನ್ನ ಕುಡಿಯಿರಿ.ಹೀಗೆ ಸತತವಾಗಿ 3 ತಿಂಗಳು ಕುಡಿಯುತ್ತಾ ಬನ್ನಿ ಇದರಿಂದ ಕಂಪವಾತವು ಹಂತಹಂತವಾಗಿ ಕಡಿಮೆಯಾಗುವುದು ನಿಮಗೆ ಕಂಡುಬರುತ್ತದೆ ಹಾಗೂ ಕಂಪನ ಕಡಿಮೆಯಾಗುತ್ತದೆ
ಇದರ ಜೊತೆಗೆ ಇನ್ನೂ ಹಲವಾರು ಆಯುರ್ವೇದ ಔಷಧಿಗಳನ್ನು ಆಯುರ್ವೇದ ಡಾಕ್ಟರ್ ಗಳನ್ನು ಸಂಪರ್ಕಿಸಿ ಪಡೆದುಕೊಳ್ಳಿ ಜೊತೆಗೆ ಪಂಚಕರ್ಮ ಚಿಕಿತ್ಸೆಯನ್ನು ತೆಗೆದುಕೊಳ್ಳಿ.ಇದರಿಂದ ಈ ಕಂಪವಾತ ವನ್ನು ತಕ್ಕಮಟ್ಟಿಗೆ ಹತೋಟಿಗೆ ತರಬಹುದಾಗಿದೆ.
ಧನ್ಯವಾದಗಳು.