ಬೆಟ್ಟದ ನೆಲ್ಲಿಕಾಯಿ ಹಿಂದಿನಿಂದ ಬಳಸಿಕೊಂಡು ಬಂದ ಅತ್ಯಂತ ಪ್ರಬಲವಾದ ನೈಸರ್ಗಿಕ ಔಷಧಿ. ಅಷ್ಟೇ ಅಲ್ಲದೆ ಇದು ಶಕ್ತಿವರ್ಧಕ ಔಷಧಿಯಾಗಿ ಪ್ರಸಿದ್ದಯಾಗಿದೆ. ರಸಾಯನ ಮತ್ತು ಆಯುರ್ವೇದದಲ್ಲಿ ತುಂಬಾ ಬಳಕೆ ಮಾಡುತ್ತಾರೆ.
ನೆಲ್ಲಿಕಾಯಿ ರುಚಿಯಾಗಿರುತ್ತದೆ ಮತ್ತು ಆರೋಗ್ಯವೂ ಕೂಡ ತುಂಬಾ ಒಳ್ಳೆಯದು. ನಿಯಮಿತವಾಗಿ ನೆಲ್ಲಿಕಾಯಿ ರಸವನ್ನು ಸೇವನೆಮಾಡುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶವಿದೆ.
ನೆಲ್ಲಿಕಾಯಿ ಕೂದಲಿಗೂ ಕೂಡ ಉತ್ತಮವಾದದ್ದು. ಕೂದಲು ಕಾಂತಿಯುತವಾಗಿ ಬೆಳೆಯಲು ನೆಲ್ಲಿಕಾಯಿ ತುಂಬಾ ಒಳ್ಳೆಯದು.ನಿಯಮಿತವಾಗಿ ನೆಲ್ಲಿಕಾಯಿ ಸೇವನೆ ಮಾಡುವುದರಿಂದ ಕೂದಲು ಸದೃಢವಾಗಿ ಬೆಳೆಯುತ್ತವೆ ಹಾಗೂ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಸಕ್ಕರೆ ಕಾಯಿಲೆಯಿರುವವರು ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಇದನ್ನು ಕುಡಿಯುವುದರಿಂದ ಸ್ನಾಯುಗಳಿಗೆ ಶಕ್ತಿಯನ್ನು ತುಂಬುತ್ತದೆ ಮತ್ತು ಹೃದಯದ ನರಗಳ ಆರೋಗ್ಯವನ್ನು ಹೆಚ್ಚಿಸಿ ಹೃದಯಕ್ಕೆಸಂಬಂಧಿಸಿದ ಸಮಸ್ಯೆಯನ್ನು ತಡೆಯುತ್ತದೆ.
ನೆಲ್ಲಿಕಾಯಿ ಜೊತೆ ಜೇನು ತುಪ್ಪ ಬೆರೆಸಿ ಕುಡಿಯುವುದರಿಂದ ದೇಹದ ರಕ್ತ ಶುದ್ಧಿಯಾಗುತ್ತದೆ. ಇದನ್ನ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.