ಮೂಗಿಗೆ ನಿಂಬೆರಸ ಹಾಕುವುದರ ಬಗ್ಗೆ ಆಯುರ್ವೇದ ತಜ್ಞರು ಹೇಳುವುದೇನು!

Featured-Article

ಈಗೀಗ ಸೋಷಿಯಲ್ ಮೀಡಿಯಾಗಳಲ್ಲಿ ಕೊರೋನಾ ಎರಡನೆಯ ಅಲೆಯ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿವೆ ಅದರ ಸತ್ಯಾಸತ್ಯತೆ ಮತ್ತು ಮುಖ್ಯವಾಗಿ ಮೂಗಿಗೆ ನಿಂಬೆರಸ ಹಾಕುವುದರ ಸತ್ಯಾಂಶ ಏನು ಎಂಬುದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.

ಡಾಕ್ಟರ್ ಮೃತ್ಯುಂಜಯ ಸ್ವಾಮಿ ಅವರು ಹೇಳುವ ಪ್ರಕಾರ ಮೂಗಿಗೆ ನಿಂಬೆಹಣ್ಣಿನ ರಸ ಹಾಕುವುದರಿಂದ ವೈರಾಣು ಕೊಲ್ಲಲ್ಪಡುತ್ತದೆ ಎಂಬುದು ಯಾವುದೇ ರೆಕಾರ್ಡ್ ಗಳಲ್ಲೂ ಉಲ್ಲೇಖವಿಲ್ಲ ಆದರೆ ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶ ಹಾಗೂ ಕೆಲವು ಆ್ಯಂಟಿ ಆಕ್ಸಿಡೆಂಟ್ ಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಹಾಗೂ ಇದರಿಂದ ಯಾವುದೇ ರೀತಿಯ ಸೂಕ್ಷ್ಮ ರೋಗಗಳು ನಿಮಗೆ ಬರುವುದಿಲ್ಲವಷ್ಟೇ.

2006 ರಲ್ಲಿ ಅರೋಮಾ ಥೆರಪಿಯ ಒಂದು ರಿಸರ್ಚ್ ಪ್ರಕಾರ ಲೆಮನ್ ಆಯಿಲ್ , ನಿಂಬೆಹಣ್ಣಿನ ಎಣ್ಣೆಯನ್ನು ಬಿಸಿ ನೀರಿನಲ್ಲಿ ಹಾಕಿಕೊಂಡು ಅದರ ಆವಿಯನ್ನು ತೆಗೆದುಕೊಳ್ಳುವುದರಿಂದ ಸೂಕ್ಷ್ಮ ಬ್ಯಾಕ್ಟೀರಿಯಾಗಳು ಸಾಯುತ್ತವೆ ಎಂದು ವರದಿ ಮಾಡಿದೆ.ಇನ್ನು ಮುಖ್ಯವಾಗಿ ಯಾವುದೇ ಕಾರಣಕ್ಕೂ ನಿಂಬೆಹಣ್ಣಿನ ರಸವನ್ನು ಮೂಗಿನಲ್ಲಿ ಹಾಕಿಕೊಳ್ಳಬಹುದು ಎಂದು ಯಾವುದೇ ರಿಸರ್ಚ್ ನಲ್ಲಿ ತಿಳಿಸಿರುವುದಿಲ್ಲ ಹಾಗೂ ಸಾಬೀತಾಗಿರುವುದಿಲ್ಲ.ಹಾಗಾಗಿ ಯಾವುದೇ ಕಾರಣಕ್ಕೂ ನಿಂಬೆ ರಸವನ್ನು ಮೂಗಿಗೆ ಹಾಕಿಕೊಳ್ಳಬೇಡಿ.

ಇನ್ನೂ ಈ ಕೊರೋನಾ ಎರಡನೇ ಅಲೆಯೂ ಭಾರಿ ಭಯಾನಕವಾಗಿದೆ ಆದರೆ ಹೆದರುವ ಅಗತ್ಯವಿಲ್ಲ
ಏಕೆಂದರೆ ಶೇಕಡಾ 94 ರಷ್ಟು ಜನಕ್ಕೆ ಕೊರೊನಾ ಪಾಸಿಟಿವ್ ಬಂದಿದ್ದರೂ ಸಹ ಹಾಸ್ಪಿಟಲ್ ಗೆ ಹೋಗುವ ಅಗತ್ಯವಿಲ್ಲ ಏಕೆಂದರೆ ಮನೆಯಲ್ಲಿದ್ದುಕೊಂಡೇ ಕೆಲವು ಔಷಧಗಳನ್ನು ಸೇವಿಸಿ ಗುಣಪಡಿಸಿಕೊಳ್ಳಬಹುದು.

ಇನ್ನೂ ಉಳಿದ 6 ರಷ್ಟು ಜನ ಶ್ವಾಸಕೋಶ ಸಂಬಂಧಿತ ಕಾಯಿಲೆಗಳನ್ನು ಹೊಂದಿದವರು ಇನ್ನೂ ಇತ್ಯಾದಿ ತೊಂದರೆಗಳನ್ನು ಹೊಂದಿದವರು , ಉಸಿರಾಟದ ತೊಂದರೆ ಇರುವಂತವರು ಹಾಸ್ಪಿಟಲ್ ಗೆ ಹೋಗಬೇಕು.

ಇನ್ನೂ ಈ ಕೊರೊನಾ ಎರಡನೇ ಅಲೆಯನ್ನು ತಡೆಬೇಕಾದರೆ ಈ 3 ಸೂತ್ರಗಳನ್ನು ಬಳಸಿ
ಅದೇ ಮುಖಕ್ಕೆ ಮಾಸ್ಕ್ ಅನ್ನು ಧರಿಸುವುದು , ಆಗಾಗ ಕೈಗೆ ಹ್ಯಾಂಡ್ ಸ್ಯಾನಿಟೈಸರ್ ಮಾಡುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಡಿಕೊಳ್ಳುವುದು.

ಇನ್ನೂ ಮುಖ್ಯವಾಗಿ ಕೊರೋನಾ ಎರಡನೇ ಅಲೆಯ ಬಗ್ಗೆ ಅನೇಕ ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಡುತ್ತಿದೆ ಅಂತಹ ಸುದ್ದಿಗಳನ್ನು ನೀವು ಎಲ್ಲಾದರೂ ಓದಿದರೆ ಅದರ ಸತ್ಯಾಂಶ ತಿಳಿಕ ಬಳಿಕವಷ್ಟೇ ಶೇರ್ ಮಾಡಿ ಅದರ ಬದಲಾಗಿ ಅನವಶ್ಯಕವಾಗಿ ಶೇರ್ ಮಾಡಿ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ.

ಧನ್ಯವಾದಗಳು.

Leave a Reply

Your email address will not be published.