ವೈರಸ್, ಬ್ಯಾಕ್ಟೀರಿಯಾಯಿಂದಾಗಿ ಶ್ವಾಸಕೋಷಕ್ಕೆ, ಗಂಟಲಿಗೆ ಸೋಂಕು ತಗಲುತ್ತದೆ.ಇದರಿಂದ ಶೀತ, ಕೆಮ್ಮು,ಕಫ,ಗಂಟಲು ನೋವು, ಲಂಗ್ಸ್ ಇನ್ಫೆಕ್ಷನ್ ಮತ್ತು ಚೆಸ್ಟ್ ಇನ್ಫೆಕ್ಷನ್ ಸಮಸ್ಯೆ ಎದುರಾಗುತ್ತದೆ.ಈ ಕೆಲವು ಟಿಪ್ಸ್ ಬಳಸುವುದರಿಂದ ಈ ಎಲ್ಲಾ ಸಮಸ್ಸೆ ಬರದಂತೆ ತಡೆಗಟ್ಟಬಹುದು.
1,ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ವಾರ್ಮ್ ವಾಟರ್ ಗೆ ಅರ್ಧ ನಿಂಬೆ ಹಣ್ಣಿನ ರಸ ಹಾಗೂ 1 ಚಮಚ ಜೇನು ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯುವುದರಿಂದ ಕಫ, ಶೀತ ಸಮಸ್ಸೆ ಕಡಿಮೆ ಆಗುತ್ತದೆ.
2, ಅರ್ಧ ಗಂಟೆಗೆ ಒಂದು ಗ್ಲಾಸ್ ಬಿಸಿ ನೀರು ಕುಡಿಯುವುದರಿಂದ ಕಫದ ಸಮಸ್ಸೆ ಕಡಿಮೆ ಆಗುತ್ತದೆ.
3,ನೀರನ್ನು ಚೆನ್ನಾಗಿ ಕುದಿಸಿ, ತುಳಸಿ ಎಲೆ ಅಥವಾ ವಿಕ್ಸ್ ಹಾಕಿ ಸ್ಟೀಮ್ ತೆಗೆದುಕೊಳ್ಳಬೇಕು.ಪ್ರತಿದಿನ ಮಾಡಿದರೆ ಕಫ ಕಡಿಮೆ ಆಗುತ್ತದೆ.
4,ಒಂದು ಬೌಲ್ ಗೆ 4 ಚಮಚ ತೆಂಗಿನ ಎಣ್ಣೆ ತೆಗೆದುಕೊಂಡು ಬಾಯಿಯಲ್ಲಿ ಹಾಕಿ ಮುಕ್ಕಳಿಸಬೇಕು ಮತ್ತು ಗಂಟಲಿನಲ್ಲಿ ಗಾಗಲ್ ಮಾಡಬೇಕು.5,ತವನ ಬಿಸಿ ಮಾಡಿ ಕಾಟನ್ ಬಟ್ಟೆಯನ್ನು ಬಿಸಿ ಮಾಡಿ ಎದೆ, ಗಂಟಲಿಗೆ ಈ ಬಟ್ಟೆಯನ್ನು ಇಟ್ಟರೆ ಬಿಸಿಗೆ ಕಫ ಆದಷ್ಟು ಬೇಗ ಕಡಿಮೆ ಆಗುತ್ತದೆ.ದಿನಕ್ಕೆ 3 ಬಾರಿ ಮಾಡಬೇಕು.
6, ಒಂದು ಗ್ಲಾಸ್ ವಾರ್ಮ್ ವಾಟರ್ ಗೆ ಅರ್ಧ ಚಮಚ ಕಲ್ಲು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗಾಗಲ್ ಮಾಡಬೇಕು.
7, ಒಂದು ಚಿಕ್ಕ ಲೋಟ ನೀರಿಗೆ ಅರ್ಧ ಜಜ್ಜಿದ ಹಸಿ ಶುಂಠಿಯನ್ನು ಹಾಕಿ ಕುದಿಸಿ ಕುಡಿಯಬೇಕು.ಈ ರೀತಿ ಮಾಡಿದರೆ ಶ್ವಾಸಕೋಶದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಈ ವೀಡಿಯೊ ನೋಡಿ