ಮೆಟ್ಟಿಲುಗಳು ಯಾವ ದಿಕ್ಕಿನಲ್ಲಿರಬೇಕು! ವಾಸ್ತುಪ್ರಕಾರ ಮೆಟ್ಟಿಲು ಇಲ್ಲಾವಾದರೆ ಬದುಕಿನಲ್ಲೂ ಕೆಳಗಿಳಿಯುತ್ತೀರಿ!

0
656

ಮನೆ ಅಂದಮೇಲೆ ಅದಕ್ಕೆ ಮೆಟ್ಟಿಲು ಇರುತ್ತದೆ.ಇನ್ನು ಮನೆಯ ಮಾಳಿಗೆಯನ್ನು ಮೇಲ್ಭಾಗದ ಮಹಡಿಗೆ ಸಂಪರ್ಕಿಸಬಹುದು ಅಥವಾ ಮನೆಗಳಲ್ಲಿ ಇನ್ನೊಂದು ಮನೆಗೆ ಹೋಗಬೇಕಾದಾಗ ಮೆಟ್ಟಿಲುಗಳನ್ನು ಬಳಸಿಕೊಳ್ಳಬಹುದು.

ಈ ದಿನಗಳಲ್ಲಿ ಲಕ್ಷಾಂತರ₹ ರೂಪಾಯಿ ಖರ್ಚು ಮಾಡಿ ಮನೆ ಕಟ್ಟುತ್ತಾರೆ ಆದರೆ ಇಂತಹ ಮನೆಯಲ್ಲಿ ಮೆಟ್ಟಿಲುಗಳನ್ನು ಕಟ್ಟುವಾಗ ಅದು ವಾಸ್ತುಪ್ರಕಾರ ಇಲ್ಲದಿದ್ದರೆ ಅದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ.

ಈ ಮೆಟ್ಟಿಲುಗಳು ಹೇಗೆ ಮೇಲೆ ಹತ್ತುವುದಕ್ಕೆ ಅವಕಾಶ ಮಾಡಿಕೊಡುತ್ತದೆಯೋ ಅದೇ ರೀತಿ ಜೀವನದಲ್ಲಿಯೂ ಮೇಲೆ ಏರಲು ಯಶಸ್ಸು ಗಳಿಸಲು ಈ ಮೆಟ್ಟಿಲುಗಳ ಅವಶ್ಯಕತೆ ಇರುತ್ತದೆ.ಮೆಟ್ಟಿಲುಗಳು ಸರಿಯಾದ ದಿಕ್ಕಿನಲ್ಲಿ ಇರದಿದ್ದರೆ ಜೀವನದಲ್ಲಿಯೂ ಸಹ ಕೆಳಗೆ ಇಳಿಯಬೇಕಾಗುತ್ತದೆ.

ಮನೆಯಲ್ಲಿ ಇರುವಂಥ ಮೆಟ್ಟಿಲುಗಳ ದಿಕ್ಕು ಸರಿಯಿರದಿದ್ದರೆ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತದೆ ,
ಸಂಪತ್ತಿನ ನಷ್ಟವಾಗುತ್ತದೆ,ಸಾಲಗಾರರಾಗುವಿರಿ,ಬಡತನ ಉಂಟಾಗುತ್ತದೆ.ಆರೋಗ್ಯ ಸಂಬಂಧಿಸಿದ ಕಾಯಿಲೆಗಳು ಬರಬಹುದು ,ಅಪಘಾತಗಳ ಆಗಬಹುದು ,ಕುಟುಂಬದ ಮಕ್ಕಳಿಗೆ ಪದೇ ಪದೇ ಅನಾರೋಗ್ಯ ಕಾಡಬಹುದು ಇತ್ಯಾದಿ ತೊಂದರೆಗಳು ಮೆಟ್ಟಿಲುಗಳು ಸರಿಯಿರದಿದ್ದರೆ ಬರಬಹುದು.

ಮನೆಯ ಮೆಟ್ಟಿಲುಗಳನ್ನು ಮನೆಯ ನೈರುತ್ಯ ಮೂಲೆ ಅಥವಾ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಇರಿಸಬೇಕು.

ಮನೆಯ ಹೊರಗಿನ ಮೆಟ್ಟಿಲುಗಳನ್ನು ಆಗ್ನೇಯ ಮೂಲೆಯಿಂದ ಪೂರ್ವಕ್ಕೆ ಮುಖ ಮಾಡಿದಂತೆ, ಈಶಾನ್ಯ ಮೂಲೆಯಿಂದ ಪಶ್ಚಿಮಕ್ಕೆ ಮುಖ ಮಾಡಿದಂತೆ ,ನೈರುತ್ಯ ಮೂಲೆಯಿಂದ ಪಶ್ಚಿಮಕ್ಕೆ ಮುಖ ಮಾಡಿದಂತೆ ,ಈಶಾನ್ಯ ದಿಕ್ಕಿನಿಂದ ಉತ್ತರ ನೈರುತ್ಯಕ್ಕೆ ಮತ್ತು ದಕ್ಷಿಣ ದಿಕ್ಕಿಗೆ ಮುಖ ಮಾಡಿ
ನಿರ್ಮಿಸಬಹುದು.

ಮೆಟ್ಟಿಲುಗಳ ಮೂಲಕ ಹೋಗುವಾಗ ಪಶ್ಚಿಮ ಅಥವಾ ದಕ್ಷಿಣ ಕಡೆಗೆ ಏರಬೇಕು ಎಂದು ವಾಸ್ತುಶಾಸ್ತ್ರ ಹೇಳುತ್ತದೆ ಮತ್ತು ಇಳಿಯುವಾಗ ಉತ್ತರ ಅಥವಾ ಪೂರ್ವ ದಿಕ್ಕಿನ ಕಡೆಗೆ ಇಳಿಯಬೇಕು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.ಮೆಟ್ಟಿಲುಗಳನ್ನು ಆದಷ್ಟು ಪ್ರದಕ್ಷಿಣಾಕಾರವಾಗಿ ಕಟ್ಟುವುದರಿಂದ ಒಳಿತಾಗುತ್ತದೆ.

ಮೆಟ್ಟಿಲುಗಳ ಕೆಳ ಭಾಗವನ್ನು ಸ್ಟೋರ್ ರೂಮ್ ಆಗಿ ಅಥವಾ ವಸ್ತುಗಳ ಸಂಗ್ರಹಕ್ಕಾಗಿ ಬಳಸಬಹುದು.ಮೆಟ್ಟಿಲುಗಳ ಸಂಖ್ಯೆ ಬೆಸ ಸಂಖ್ಯೆಯಾಗಿದ್ದರೆ ಒಳ್ಳೆಯದು.ಮೇಲೆ ಏರುಗತಿಯ ಮೆಟ್ಟಿಲುಗಳ ಸಂಖ್ಯೆ 3 ರಿಂದ ಬಾಗಿಸಿದಾಗ 2 ಬರಬೇಕು ಉದಾಹರಣೆಗೆ 5 , 11 , 17 ಇತ್ಯಾದಿ.

ಮೆಟ್ಟಿಲುಗಳಿಗೆ ಬಳಿಯುವಂತ ಬಣ್ಣ ತಿಳಿಯಾಗಿರಬೇಕು. ಯಾವುದೇ ಕಾರಣಕ್ಕೂ ಕಪ್ಪು ಅಥವಾ ಕೆಂಪು ಬಣ್ಣವನ್ನು ಬಳಸಬಾರದು.ಮೆಟ್ಟಿಲುಗಳು ರಿಪೇರಿಗೆ ಬಂದರೆ ಅದನ್ನು ತಕ್ಷಣವೇ ರಿಪೇರಿ ಮಾಡಿಸಬೇಕು
ಇಲ್ಲವಾದಲ್ಲಿ ಇದರಿಂದ ಅಪಘಾತ ಸಂಭವಿಸುವ ಅಥವಾ ಮನೆಯಲ್ಲಿ ಮಾನಸಿಕವಾಗಿ ಕಲಹಗಳು ಉಂಟಾಗಬಹುದು.

ಮೆಟ್ಟಿಲಿನ ಕೆಳಭಾಗದಲ್ಲಿ ಯಾವುದೇ ಕಾರಣಕ್ಕೂ ಶೌಚಾಲಯ , ದೇವರ ಕೋಣೆ ಅಥವಾ ಹಣವನ್ನು ಇರಿಸುವಂತಹ ಕೊಠಡಿಗಳನ್ನು ಕಟ್ಟಬಾರದು.

ಧನ್ಯವಾದಗಳು.

LEAVE A REPLY

Please enter your comment!
Please enter your name here