ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತೀನ್ನಿ ಕಾಬೂಲ್ ಕಡಲೆಕಾಳು!ತಪ್ಪದೇ ಓದಿ

0
1275

ಕಾಬೂಲ್ ಕಡಲೆ ಕಾಳುಗಳನ್ನು ಯಾವ ಸಮಯದಲ್ಲಾದರೂ ಎಲ್ಲರು ಸೇವಿಸಬಹುದು. ಏಕೆಂದರೆ ಇವುಗಳಲ್ಲಿ ಅತ್ಯಂತ ಅವಶ್ಯಕವಾಗಿರುವ ಪೋಷ್ಟಿಕ ಸತ್ವಗಳು ಇದರಲ್ಲಿವೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕಾಬೂಲ್ ಕಡಲೆ ಕಾಳಿನಲ್ಲಿ ಪ್ರೋಟೀನ್ ಅಂಶವು ಹೆಚ್ಚಾಗಿದ್ದು ಅದರಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6,ಕ್ಯಾಲ್ಸಿಯಂ, ಐರನ್, ಪೊಟ್ಯಾಶಿಯಂ, ಮೆಗ್ನೀಷಿಯಂ ಅಂಶಗಳು ಕೂಡ ಹೇರಳವಾಗಿದೆ. ಆದ್ದರಿಂದ ಅಪಾರವಾದ ಆರೋಗ್ಯಕರ ಪ್ರಯೋಜನಗಳು ಇದರ ಸೇವನೆಯಿಂದ ಪಡೆಯಬಹುದು.

ಕಾಬೂಲ್ ಕಡಲೆ ಕಾಳಿನಿಂದ ಉಂಟಾಗುವ ಅರೋಗ್ಯ ಪ್ರಯೋಜನಗಳು ಯಾವುವು ಎಂದರೆ,ಇದರ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ಇದರಲ್ಲಿ ಪ್ರೋಟೀನ್ ಮತ್ತು ಫೈಬರ್ ಅಂಶ ಹೆಚ್ಚಾಗಿದೆ.

ಇವುಗಳನ್ನು ಸೇವಿಸಿದರೆ ಬಹಳ ಬೇಗ ಹೊಟ್ಟೆ ತುಂಬುತ್ತದೆ. ಇದರಿಂದ ರಕ್ತದಲ್ಲಿ ಗ್ಲುಕೋಸ್ ಮಟ್ಟ ನಿಯಂತ್ರಣದಲ್ಲಿರುತ್ತದೆ.ಇನ್ನು ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಹಾಗೂ ಹೃದಯದ ಆರೋಗ್ಯಕ್ಕೆ ತುಂಬಾ ಸಹಾಯಕಾರಿ.

ನೈಸರ್ಗಿಕವಾಗಿ ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತನಾಳಗಳಲ್ಲಿ ಶೇಖರಣೆ ಆಗುವ ಕೊಬ್ಬಿನ ಪದರಗಳನ್ನು ಕಡಿಮೆ ಮಾಡಿ ಅಟ್ರಿಸ್ ಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ಮಾಡುವ ಮೂಲಕ ದೇಹದಲ್ಲಿ ರಕ್ತ ಸಂಚಾರವನ್ನು ಸರಾಗವಾಗಿ ನಿರ್ವಹಿಸಿ ಹೃದಯಕ್ಕೆ ಯಾವುದೇ ತೊಂದರೆಯನ್ನು ಉಂಟಾಗದಂತೆ ನೋಡಿಕೊಳ್ಳುತ್ತದೆ.

ಅಷ್ಟೇ ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಒಂದು ಕಪ್ಪು ಕಾಬೂಲ್ ಕಡಲೆ ಕಾಳಿನಲ್ಲಿ 30% ಕಾಪರ್ ಅಂಶ ಮತ್ತು 17% ಝೀಕ್ ಅಂಶ ಲಭ್ಯವಾಗಿದೆ.

LEAVE A REPLY

Please enter your comment!
Please enter your name here