ಕೊರೊನ ಎರಡನೆಯ ಅಲೆಯು ಬಹಳ ಭೀಕರವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಮಾಸ್ಕ್ ಅನ್ನು ಧರಿಸಬೇಕು ಹ್ಯಾಂಡ್ ಸ್ಯಾನಿಟೈಸ್ ಮಾಡುತ್ತಿರಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮೆಂಟೇನ್ ಎಂದು ನಮಗೆ ತಿಳಿದಿದೆ.
ಆದರೆ ಹ್ಯಾಂಡ್ ಸ್ಯಾನಿಟೈಜರ್ ಮಾಡುವುದರಿಂದ ಕೈಯಲ್ಲಿರುವ ಕೀಟಾಣುಗಳು ಸಾಯುತ್ತವೆ ,
ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವುದರಿಂದ ಇನ್ನೊಬ್ಬರಿಂದ ವೈರಸ್ ನಮಗೆ ತಗಲುವುದಿಲ್ಲ
ಆದರೆ ಮಾಸ್ಕ್ ಅನ್ನು ಬಳಸುವುದರಿಂದ ಕೊರೋನಾವೈರಸ್ ಅನ್ನು ತಡೆಯಲು ಸಾಧ್ಯವೆ ಎಂದು ನಾವು ನೋಡುವುದಾದರೆ ಕೊರೋನಾವೈರಸ್ ಮೊದಲನೇ ಅಲೆ ಬಂದಾಗ ಎಲ್ಲರೂ ತುಂಬಾ ಅಚ್ಚುಕಟ್ಟಾಗಿ ಸುರಕ್ಷತೆಯನ್ನು ಕಾಪಡಿಕೊಳ್ಳುತ್ತಿದ್ದರು ಆದರೆ ಕೊರೊನಾ ಎರಡನೇ ಅಲೆಗೆ ಜನರು ಅಷ್ಟಾಗಿ ಹೆದರುತ್ತಿಲ್ಲ ಯಾಕೆಂದರೆ ಜನರಿಗೆ ಈಗಾಗಲೇ ಅಭ್ಯಾಸ ವಾಗಿದೆ , ಭಯ ಕಡಿಮೆಯಾಗಿ ನಿರ್ಲಕ್ಷ್ಯತೆ ಹೆಚ್ಚಾಗಿದೆ
ಅದೇ ಕಾರಣದಿಂದಲೇ ಕೊರೊನಾ ವೈರಸ್ ಹೆಚ್ಚಾಗುತ್ತಿರುವುದು ಆದ್ದರಿಂದ ಮುಂಚೆ ತೆಗೆದುಕೊಂಡ ರೀತಿ ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದ ಹಾಗೆ ಈಗಲೂ ಸಹ ತೆಗೆದುಕೊಳ್ಳಬೇಕು ಹಾಗೂ ಆದಷ್ಟೂ ಮನೆಯಲ್ಲೇ ಇದ್ದು ಸುರಕ್ಷತೆಯನ್ನು ಕಾಪಾಡಿಕೊಂಡರೆ ಬಹಳ ಒಳ್ಳೆಯದು ಆದ್ದರಿಂದ ಮಾಸ್ಕ್ ಅನ್ನು ಕಡ್ಡಾಯವಾಗಿ ಬಳಸಬೇಕು.
ಹಾಗೂ ಮುಂಚೆ ವಿದೇಶದಿಂದ ಅನೇಕ ಜನರು ಬರುತ್ತಿದ್ದರು ಆದ್ದರಿಂದ ಕೊರೋನಾವೈರಸ್ ಹೆಚ್ಚಾಗುತ್ತಿತ್ತು ಆದರೆ ಈಗ ವಿದೇಶದಿಂದ ಬರುವ ಜನರ ಪ್ರಮಾಣ ಕಡಿಮೆಯಾಗಿದೆ
ಮತ್ತು ವಿದೇಶದಿಂದ ಬರುವ ಜನರನ್ನು ಸೆಲ್ಫ್ ಕ್ವಾರಂಟೈನ್ ಮಾಡಲಾಗುತ್ತಿದೆ.
ಧನ್ಯವಾದಗಳು