99% ಜನರಿಗೆ ಬಾದಾಮಿಯ ಬಗ್ಗೆ ಈ ವಿಷಯ ಗೊತ್ತಿಲ್ಲ!

0
1846

ಬಾದಾಮಿ

ಬಾದಾಮಿಯಲ್ಲಿ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಇವೆ.ಇದರಲ್ಲಿ ಮೋನೋಸ್ಯಾಚುರೇಟೆಡ್ ಗುಡ್ ಫ್ಯಾಟ್ ಇದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ.ವಿಟಮಿನ್ ಇ ,ರೈಬೋಪ್ಲೇವಿನ್ , ಮ್ಯಾಂಗನೀಸ್ , ಮೆಗ್ನಿಷಿಯಂ , ಫಾಸ್ಪರಸ್ , ಕ್ಯಾಲ್ಸಿಯಂ ಮತ್ತು ಇನ್ನಿತರ ಮುಖ್ಯ ಅಂಶಗಳು ಇದರಲ್ಲಿ ಇವೆ.ಒಂದು ಬಾದಾಮಿಯಲ್ಲಿ 6 ಕ್ಯಾಲೋರಿ ಇರುತ್ತದೆ.

ಬಾದಾಮಿಯು ಹೆಚ್ಚು ಪ್ರೋಟೀನ್ ಅಂಶವನ್ನು ಹೊಂದಿದೆ ಹಾಗಾಗಿ ಇದನ್ನು ಪ್ರತಿದಿನ ಸೇವಿಸುವವರಲ್ಲಿ ಪ್ರೋಟೀನ್ ಕೊರತೆ ಇರುವುದಿಲ್ಲ.ಬಾದಾಮಿಯಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಕ್ಯಾನ್ಸರ್ ಬರದಂತೆ ತಡೆಯುತ್ತದೆ.

ಬಾದಾಮಿಯಲ್ಲಿರುವ ವಿಟಮಿನ್ ಇ ಅಂಶ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ
ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕ್ಯಾನ್ಸರ್ ಸಂಬಂಧಿತ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಮೆಗ್ನಿಶಿಯಂ ನಲ್ಲಿರುವ ಅಂಶವು ನಮ್ಮ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.ಪ್ರತಿದಿನ ಬಾದಾಮಿಯನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲನ್ನು ಇದು ಕಡಿಮೆ ಮಾಡುತ್ತದೆ. ಬಾದಾಮಿಯನ್ನು ತಿನ್ನುವುದರಿಂದ ನಮ್ಮ ಶರೀರಕ್ಕೆ ತುಂಬಾ ಲಾಭದಾಯಕವಾಗಿದೆ ಎಂದು ಬಾದಾಮಿ ತಿನ್ನುವವರು ಹೇಳಿದ್ದಾರೆ.

ಇನ್ನು ರಾತ್ರಿಯ ಸಮಯದಲ್ಲಿ 15 ರಿಂದ 20 ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾದಾಮಿಯ ಸಿಪ್ಪೆ ತೆಗೆದು ತಿನ್ನಬೇಕು.ಈ ರೀತಿ ತಿನ್ನುವುದರಿಂದ ನಮಗೆ ಬಾದಾಮಿಯ ಎಲ್ಲ ಪೋಷಕಾಂಶಗಳು 100ಕ್ಕೆ 100ರಷ್ಟು ಸಿಗುತ್ತೆ .ಈ ರೀತಿ ಮಾಡಲು ನಿಮಗೆ ಸಾಧ್ಯವಾಗದಿದ್ದರೆ ಪ್ರತಿ ದಿನ ಕನಿಷ್ಠ 4 ಬಾದಾಮಿಯನ್ನು ತಿನ್ನಲೇಬೇಕು.ಇನ್ನು ಇದರಿಂದ ಸಿಗುವ ಲಾಭಗಳು ಏನು ಎಂದು ತಿಳಿಯೋಣ ಬನ್ನಿ..

ಮೊದಲಿಗೆ ಇದು ನಿಮ್ಮ ಮೆದುಳಿನ ಬುದ್ಧಿಶಕ್ತಿಯನ್ನು ಹೆಚ್ಚು ಮಾಡುತ್ತೆ ,ನೆನಪಿನ ಶಕ್ತಿಯನ್ನು ಚುರುಕು ಮುಕ್ತಗೊಳಿಸುತ್ತದೆ.ನೀವು ಎಲ್ಲರಿಗಿಂತ ಸ್ವಲ್ಪ ಹೆಚ್ಚು ಬುದ್ಧಿಶಾಲಿ ಆಗಬೇಕೆಂದರೆ ದಿನಕ್ಕೆ 4 ಬಾದಾಮಿಯನ್ನು ತಿನ್ನಲೇಬೇಕು.

ಬಾದಾಮಿ ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ.ನೀವು ಕೇಳಬಹುದು ಬಾದಾಮಿಗೂ ತೂಕಕ್ಕೂ ಏನು ಸಂಬಂಧದ ಇದೆ ಅಂತ .

ಬಾದಾಮಿಯಲ್ಲಿ ತುಂಬಾ ಕಡಿಮೆ ಪ್ರಮಾಣದ ಕ್ಯಾಲೊರಿ ಸಿಗುತ್ತೆ ಹಾಗೂ ಹೆಚ್ಚಿನ ಪ್ರಮಾಣದ ಪೋಷಕಾಂಶ ವಿರುತ್ತೆ .ನೀವು ದಿನಕ್ಕೆ 4 ಬಾದಾಮಿಯನ್ನು ತಿನ್ನುವುದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಇದರಿಂದ ನೀವು ಬೇರೆ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುತ್ತೀರಾ.
ಈ ರೀತಿನಿಮಗೆ ಗೊತ್ತಿಲ್ಲದಿರುವ ರೀತಿಯಲ್ಲಿ ನಿಮ್ಮ ತೂಕ ಹೆಚ್ಚಿದ್ದರೆ ಕಡಿಮೆಯಾಗುತ್ತಾ ಹೋಗುತ್ತದೆ.

ಸಂಶೋಧನೆಯ ಪ್ರಕಾರ ಬಾದಾಮಿ ತಿನ್ನುವುದರಿಂದ ಹಾರ್ಟ್ ಅಟ್ಯಾಕ್ ಅಂತಹ ಸಮಸ್ಯೆಯಿಂದ ಪಾರಾಗಬಹುದು .ಬಾದಾಮಿಯ ಪೋಷಕಾಂಶದಲ್ಲಿ ಪಾಸ್ಪರಸ್ ಮತ್ತು ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುತ್ತದೆಇದು ನಿಮ್ಮ ಮೂಳೆಯನ್ನು ಗಟ್ಟಿ ಮಾಡುತ್ತದೆ .

ಇನ್ನು ಮಹಿಳೆಯರು ಗರ್ಭಿಣಿಯಾಗಿದ್ದರೆ ಈ ಬಾದಾಮಿಯನ್ನು ತಿನ್ನುವುದರಿಂದ ಡೆಲಿವರಿ ಸಮಯದಲ್ಲಿ ಅವರಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ.

ಧನ್ಯವಾದಗಳು.

LEAVE A REPLY

Please enter your comment!
Please enter your name here