ನಿಮ್ಮ ಮುಖದಲ್ಲಿ ಈ 9 ಲಕ್ಷಣಗಳಿದ್ದರೆ ನಿಮಗೆ ಈ ಆರೋಗ್ಯ ಸಮಸ್ಯೆ ಇದೆ ಎಂದರ್ಥ!

0
2782

ನಿಮ್ಮ ಮುಖ ಲಕ್ಷಣಗಳನ್ನು ಗಮನಿಸಿ ನಿಮಗಿರುವ ರೋಗಗಳ ಬಗ್ಗೆ ತಿಳಿಯೋದು ಹೇಗೆ ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತವೆ .

ವೈದ್ಯರ ಬಳಿಗೆ ಯಾವುದೇ ಅನಾರೋಗ್ಯ ಸಂಬಂಧಿ ವಿಚಾರವಾಗಿ ನೀವು ಹೋದಾಗ ಅವರು ನಿಮ್ಮ ಮುಖವನ್ನೇ ನೋಡಿಕೊಂಡು ಮಾತನಾಡುತ್ತಿರುವವರು,ಈ ವೇಳೆ ನೀವು ವೈದ್ಯರು ಸ್ವಲ್ಪ ಹೆಚ್ಚು ಮಾತನಾಡುವವರು ಎಂದು ಭಾವಿಸಬಹುದು ಆದರೆ ವೈದ್ಯರು ಮಾತನಾಡುತ್ತಲೇ ನಿಮ್ಮನ್ನು ಪರೀಕ್ಷೆ ಮಾಡುತ್ತಿರುತ್ತಾರೆ ಎಂದು ಖಂಡಿತವಾಗಿಯೂ ನಿಮಗೆ ತಿಳಿಯದು.ಹಲವು ರೋಗಗಳ ಲಕ್ಷಣಗಳು ಮುಖದ ಮೇಲೆ ಮೂಡುವ ಕಾರಣದಿಂದಾಗಿ ವೈದ್ಯರು ನಿಮ್ಮ ಮುಖ ನೋಡಿಕೊಂಡು ಮಾತನಾಡುತ್ತಾರೆ.ಯಾವುದೇ ಲಕ್ಷಣಗಳು ಇದೆಯಾ ಎಂದು ನೋಡುತ್ತಾರೆ.

ಅವರು ನಿಮ್ಮ ಮುಖದಲ್ಲಿ ಯಾವ ಚಿಹ್ನೆಗಳನ್ನು ಹುಡುಕುತ್ತ ಇರುವರು ಎಂದು ನಾವು ಈಗ ನಿಮಗೆ ತಿಳಿಸುತ್ತೇವೆ.

ಮೊದಲನೆಯದಾಗಿ ಒಣ ಹಾಗೂ ಎದ್ದು ಬಂದಿರುವ ಚರ್ಮ ಮತ್ತು ತುಟಿ ಒಣ ಹಾಗೂ ಚರ್ಮವೂ ಎದ್ದು ಬರುವುದು ನಿರ್ಜಲೀಕರಣದ ಪ್ರಮುಖ ಲಕ್ಷಣವಾಗಿದೆ.ಬೆವರಿನ ಗ್ರಂಥಿಗಳ ಮೇಲೆ ಇದು ತುಂಬಾ ಗಂಭೀರ ಪರಿಣಾಮ ಬೀರಿದೆ ಎಂದು ಇದರಿಂದ ತಿಳಿಯಬಹುದು.ಇದರಲ್ಲಿ ಮುಖ್ಯವಾಗಿ ಹೈಪೋ ಥೈರಾಯಿಡಿಸಮ್ ಅಂದರೆ ಥೈರಾಯ್ಡ್ ಹಾರ್ಮೋನ್ ಮಟ್ಟ ಕಡಿಮೆ ಇರುವುದು ಅಥವಾ ಮಧುಮೇಹ.ಥೈರಾಯಿಡಿಸಮ್ನ ಇನ್ನೂ ಕೆಲವು ಲಕ್ಷಣಗಳೆಂದರೆ ಅದು ಶೀತ , ತೂಕ ಹೆಚ್ಚುವುದು ಮತ್ತು ನಿಶ್ಶಕ್ತಿ. ಮಧುಮೇಹದ ಕೆಲವೊಂದು ಲಕ್ಷಣಗಳು ಅತಿಯಾಗಿ ಬಾಯಾರಿಕೆ , ಪದೇ ಪದೇ ಮೂತ್ರ ವಿಸರ್ಜನೆ ಮತ್ತು ದೃಷ್ಟಿ ಮಂದವಾಗುವುದು.
ಈ ಲಕ್ಷಣಗಳೊಂದಿಗೆ ಇಸಬು ಸೊರಿಯಾಸಿಸ್ , ಔಷಧಿ ಅಲರ್ಜಿ ಲಕ್ಷಣಗಳಾಗಿರಬಹುದು.

ಎರಡನೆಯದಾಗಿ ಮುಖದಲ್ಲಿ ಅತಿಯಾಗಿ ಕೂದಲು ಬೆಳವಣಿಗೆ. ಅನಗತ್ಯ ಕೂದಲಿನ ಬೆಳವಣಿಗೆ ಮುಖದಲ್ಲಿ ಕಂಡುಬರುವುದು ಅದರಲ್ಲಿ ಮುಖ್ಯವಾಗಿ ದವಡೆ ,ಗಲ್ಲ ಮತ್ತು ತುಟಿಯ ಮೇಲ್ಭಾಗದಲ್ಲಿ ಕೂದಲು ಅತಿಯಾಗಿ ಬೆಳೆಯುವುದು,ಇದು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಲಕ್ಷಣವಾಗಿರಬಹುದು.ಹಾರ್ಮೋನ್ ಅಸಮತೋಲನದಿಂದಾಗಿ ಹೀಗೆ ಆಗುವುದು ಮತ್ತು ಮಹಿಳೆಯರಲ್ಲಿ ಪುರುಷ ಹಾರ್ಮೋನ್ ಅಧಿಕವಾಗಿರುವುದೇ ಅಸಾಮಾನ್ಯ ಕೂದಲು ಬೆಳವಣಿಗೆಗೆ ಕಾರಣ ಆದರೆ ನೀವು ಇದನ್ನು ತಕ್ಷಣವೇ ದೊಡ್ಡ ಸಮಸ್ಯೆ ಎಂದು ಭಾವಿಸಬೇಡಿ .ಕೆಲವು ಮಹಿಳೆಯರಲ್ಲಿ ಅನುವಂಶವಾಗಿಯೇ ಮುಖದ ಮೇಲೆ ಕೂದಲು ಬೆಳೆಯಬಹುದು .

ಮೂರನೇಯದಾಗಿ ಕಣ್ಣಿನ ರೆಪ್ಪೆಗಳಲ್ಲಿ ಹಳದಿ ಕಲೆಗಳು. ಇದು ದೇಹದಲ್ಲಿ ಕೊಲೆಸ್ಟ್ರಾಲ್ ತುಂಬಿದ ಚಿಹ್ನೆಗಳು ಮತ್ತು ಇದನ್ನು ಶಾಂತಳಾಸ್ಮ ಎಂದು ಕರೆಯಲಾಗುತ್ತದೆ.ಇಂತಹ ಕಲೆ ಇರುವವರಲ್ಲಿ ಹೃದಯಾಘಾತದ ಅಪಾಯವೂ ಹೆಚ್ಚಾಗಿರುವುದು ಈ ರೋಗ ಇರುವಂಥವವರಲ್ಲಿ ಅಧಿಕ ಮಟ್ಟದ ಬಿಎಂಐ ಮತ್ತು ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಿರುವುದು ಕಂಡು ಬರುವುದು ಎಂದು 2016 ರಲ್ಲಿ ಮೆಡಿಕಲ್ ಪ್ರಿನ್ಸಿಪಾಲ್ ಅಂಡ್ ಪ್ರಾಕ್ಟೀಸ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನದ ವರದಿಯು ಹೇಳಿದೆ.

ನಾಲ್ಕನೆಯದಾಗಿ ಕಣ್ಣಿನ ಕೆಳಭಾಗ ಊದಿಕೊಳ್ಳುವುದು. ಬಳಲಿರುವಂತಹ ಕಣ್ಣುಗಳು ದೀರ್ಘಕಾಲೀನ ಅಲರ್ಜಿಯ ಸೂಚನೆ ಮತ್ತು ಇದು ರಕ್ತನಾಳವನ್ನು ದುರ್ಬಲ ಮಾಡುವ ಬುಧ ಮತ್ತು ಅದು ಮಾಡುವುದು ಮತ್ತು ಅದು ಸೋರುವಂತೆ ಮಾಡುವುದು.ಕಣ್ಣಿನ ಸುತ್ತಲೂ ಇರುವಂತಹ ಸೂಕ್ಷ್ಮಚರ್ಮದಲ್ಲಿ ಇದು ಊದಿಕೊಳ್ಳುವಂತೆ ಮಾಡುವುದು ಮತ್ತು ಕಡು ನೇರಳೆ ಬಣ್ಣ ಉಂಟು ಮಾಡುವುದು.ಇದಕ್ಕೆ ಇತರ ಕೆಲವು ಕಾರಣಗಳಿದ್ದರೆ ಅದು ಹೈಪೋ ಥೈರಾಯಿಡಿಸಂ ಮತ್ತು ನಿದ್ರಾಹೀನತೆ.

ಐದನೆಯದಾಗಿ ಮುಖದ ಅಸಿಮೆಟ್ರಿ. ಇದು ಪಾರ್ಶ್ವವಾಯುವಿನ ಮೊದಲ ಚಿಹ್ನೆಯಾಗಿದೆ ,ಹೆಚ್ಚಾಗಿ ಇಂತಹ ಸಮಸ್ಯೆ ವೇಳೆ ರೋಗಿಗಳು ವೈದ್ಯರ ಬಳಿಯಲ್ಲಿ ಹೇಳುವ ಅಂತಹ ವಿಚಾರವೆಂದರೆ ನಾನು ಕನ್ನಡಿ ನೋಡಿದ ವೇಳೆ ಮುಖವು ತುಂಬಾ ಭಿನ್ನವಾಗಿ ಕಂಡುಬಂದಿದೆ,ಮುಖದ ಒಂದು ಭಾಗವು ಮರಗಟ್ಟಿದಂತೆ ಅಥವಾ ಪೂರ್ಣವಾಗಿ ನಗಲು ಆಗದಂತೆ ನಿಮಗೆ ಭಾವನೆ ಆಗಬಹುದು ಅಥವಾ ನಿಮಗೆ ಮಾತನಾಡಲು ತೊಂದರೆ ಆಗಬಹುದು .ಅಸೀಮೆಟ್ರಿ ಎನ್ನುವುದು ಬೆಲ್ಸ್ ಪಾಲ್ಸಿ ಆಗಿರಬಹುದು ಆದರೆ ಇತರ ಪರೀಕ್ಷೆಗಳನ್ನು ಮಾಡದೆ ಪಾರ್ಶ್ವವಾಯುವಿನ ಬಗ್ಗೆ ಹೇಳುವಂತಿಲ್ಲ.ತುಂಬಾ ವೇಗವಾಗಿ ಇದನ್ನು ಪತ್ತೆ ಮಾಡಿದರೆ ಆಗ ಪಾರ್ಶ್ವವಾಯುವಿಗೆ ಚಿಕಿತ್ಸೆ ಮಾಡಬಹುದು .
ದೃಷ್ಟಿ ಎರಡೆರಡು ಕಾಣುವುದು ಮತ್ತು ಕೈಗಳು ಹಾಗೂ ಕಾಲಿನಲ್ಲಿ ದುರ್ಬಲತೆಯ ಪಾರ್ಶ್ವವಾಯುವಿಗೆ ಕಾರಣವಾಗಿದೆ .

ಆರನೆಯದಾಗಿ ಮೈ ಬಣ್ಣ ಮಾಸುವುದು .ಸಣ್ಣ ಬದಲಾವಣೆಗಳು ಕೆಲವೊಂದು ಸಲ ದೊಡ್ಡ ಅಪಾಯದ ಸೂಚನೆ ನೀಡುವುದು,ಚರ್ಮವು ಜೋತು ಬೀಳುವುದು ರಕ್ತಹೀನತೆಯ ಲಕ್ಷಣವಾಗಿರಬಹುದು.
ಚರ್ಮವು ಹಳದಿಯಾಗುವುದು ಯಕೃತ್ನ ಸಮಸ್ಯೆಯ ಲಕ್ಷಣಗಳು.ತುಟಿ ಅಥವಾ ಉಗುರಿನ ತುದಿಯಲ್ಲಿ ನೀಲಿ ಬಣ್ಣದ ಕಲೆ ಕಾಣಿಸುವುದು ಹೃದಯ ಅಥವಾ ಶ್ವಾಸಕೋಶದ ಕಾಯಿಲೆಯ ಲಕ್ಷಣಗಳು.

ಏಳನೆಯದಾಗಿ ದದ್ದುಗಳು ಮತ್ತು ಮಚ್ಚೆಗಳು. ಜೀರ್ಣಕ್ರಿಯೆಯ ಕೆಲವೊಂದು ಸಮಸ್ಯೆಗಳು ಚರ್ಮದಲ್ಲಿ ಕಾಣಿಸಿಕೊಳ್ಳಬಹುದು ತುರಿಕೆಯೊಂದಿಗೆ ಕೆಂಪು ದದ್ದುಗಳು ಕಾಣಿಸಿಕೊಂಡರೆ ಇದು ಉದರ ಕಾಯಿಲೆಯ ಲಕ್ಷಣವಾಗಿರಬಹುದು.ಇದೊಂದು ರೀತಿಯ ಆಟೋ ಇಮ್ಯೂನ್ ಕಾಯಿಲೆಯಾಗಿದ್ದು ದೇಹವು ಗ್ಲುಟೇನ್ ಗೆ ಪ್ರತಿಕ್ರಿಯಿಸುವ ರೀತಿಯಾಗಿದೆ.ಚಿಟ್ಟೆ ಗಾತ್ರದ ದದ್ದುಗಳು ಕೆನ್ನೆಯ ಮೂಳೆಗಳು ಮತ್ತು ಮೂಗಿನ ಸೇತುವೆ ಮೇಲೆ ಕಾಣಿಸಿಕೊಳ್ಳುವುದು ಲೂಪಸ್ ನ ಚಿಹ್ನೆಯಾಗಿದೆ. ಇದು ಕೂಡ ಒಂದು ಆಟೋ ಇಮ್ಯೂನ್ ಕಾಯಿಲೆಯಾಗಿದೆ. ಅಲರ್ಜಿ ಇಸುಬು ಮತ್ತು ರೊಸಸಿಯಾ ಮುಖದ ಮೇಲೆ ದದ್ದು ಉಂಟು ಮಾಡಬಹುದು.

ಎಂಟನೆಯದಾಗಿ ಕೂದಲು ಉದುರುವಿಕೆ. ಉಬ್ಬು ಅಥವಾ ಕಣ್ಣಿನ ರೆಪ್ಪೆಯ ಕೂದಲು ಉದುರುವಿಕೆಯ ಅಲೋಪೇಸಿಯಾ ಅರೇಟ ದ ಲಕ್ಷಣವಾಗಿದೆ.ಇದು ಒಂದು ರೀತಿಯ ಆಟೋ ಇಮ್ಯೂನ್ ಸಮಸ್ಯೆಯಾಗಿದ್ದು ಕೂದಲಿನ ಕಿರು ಚೀಲುಗಳ ಮೇಲೆ ಪರಿಣಾಮ ಬೀರುವುದು ಈ ಕಾಯಿಲೆಯು ದೇಹದ ಕೆಲವೊಂದು ಭಾಗಗಳಿಗೆ ಸೀಮಿತವಾಗಿರುವುದು ಅಥವಾ ಸಂಪೂರ್ಣ ದೇಹದಲ್ಲಿ ಕೂಡ ಕಾಣಿಸಿಕೊಳ್ಳಬಹುದು.ಕಣ್ಣಿನ ಭಾಗದಲ್ಲಿ ಕಣ್ಣಿನ ರೆಪ್ಪೆಗಳು ಅಥವಾ ಹುಬ್ಬುಗಳ ಕೂದಲು ಉದುರಬಹುದು ಇದಕ್ಕೆ ಚಿಕಿತ್ಸೆ ಲಭ್ಯವಿದೆ ಆದರೆ ಸಂಪೂರ್ಣವಾಗಿ ಪರಿಹಾರವಿಲ್ಲ.

ಇನ್ನೂ ಒಂಬತ್ತನೆಯದಾಗಿ ಹೊಸ ಮಚ್ಚೆಗಳು. ಮಚ್ಚೆಗಳು ಒಂದು ಚಿಂತೆಯ ವಿಚಾರವಲ್ಲವಾದರೂ ಹೊಸದಾಗಿ ಬೆಳವಣಿಗೆ ಆಗುವ ಮಚ್ಚೆಯನ್ನು ವೈದ್ಯರು ಅಥವಾ ಚರ್ಮರೋಗ ತಜ್ಞರಿಂದ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ .ಇದು ಚರ್ಮದ ಕ್ಯಾನ್ಸರ್ ಆಗಿರಬಹುದು ಅಥವಾ ಕೆಲವೊಂದು ಸಂದರ್ಭದಲ್ಲಿ ಇದು ದೇಹದೊಳಗಿನ ರೋಗದ ಲಕ್ಷಣವಾಗಿರಬಹುದು ಅಥವಾ ಅನುವಂಶಿಯ ಕಾಯಿಲೆಯ ಚಿಹ್ನೆ ಯಾಗಿರಬಹುದು.

ಧನ್ಯವಾದಗಳು.

LEAVE A REPLY

Please enter your comment!
Please enter your name here