ಮೊಟ್ಟೆಯಲ್ಲ ಧರ್ಮ ಮುಖ್ಯ, 25 ಲಕ್ಷ ಬಹುಮಾನ ಬೇಡವೆಂದು ಶೋನಿಂದ‌ ಹೊರ ನಡೆದ ದಿಟ್ಟ ಮಹಿಳೆ

0
36

ಜೀವನ ಆಧುನಿಕತೆಯ ಕಡೆಗೆ ಹೊರಳಿದ ಮೇಲೆ ಅನೇಕರು ತಾವು ಅದರ ಜೊತೆಗೆ ಬದಲಾಗುತ್ತಲಿದ್ದಾರೆ‌. ಧರ್ಮ, ಧಾರ್ಮಿಕ ಮೌಲ್ಯಗಳು, ಸಂಪ್ರದಾಯಗಳು, ಆಚಾರ ಪದ್ಧತಿಗಳನ್ನು ಸಹಾ ಬದಿಗಿಟ್ಟು ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಇಂತಹವರ ನಡುವೆ ಬೆರಳೆಣಿಕೆಯಷ್ಟು ಜನರು ಮಾತ್ರ ಇಂದಿಗೂ ಮೊದಲ ಆದ್ಯತೆಯನ್ನು ತಮ್ಮ ಧರ್ಮ, ಸಂಪ್ರದಾಯಗಳಿಗೆ ನೀಡುತ್ತಾರೆ. ಅಂತಹರಲ್ಲೇ ಒಬ್ಬರು ಅರುಣಾ ವಿಜಯ್. ಈ ಮಹಿಳೆಯ ದಿಟ್ಟತನದ ಬಗ್ಗೆ ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ. ಅರುಣಾ ವಿಜಯ್ (Aruna Vijay) ಅವರು ಮೂಲತಃ ತಮಿಳುನಾಡಿನವರು. ಪಾಕ ಪ್ರವೀಣೆ ಇವರು.

ಜೈನ ಧರ್ಮ(Jain Religion) ಅನುಯಾಯಿಯಾದ ಇವರ ಜೀವನದಲ್ಲಿ ಮೊದಲ ಆದ್ಯತೆ ತಮ್ಮ ಧಾರ್ಮಿಕ ಮೌಲ್ಯಗಳೇ ಆಗಿದೆ. ಅಡುಗೆ ಮಾಡುವ ವಿಚಾರದಲ್ಲಿ ಅದ್ಭುತ ಕೌಶಲ ಪಡೆದಿರುವ ಕಾರಣ ಅವರ ಸೋನಿ ಟಿವಿಯ(Sony TV) ಜನಪ್ರಿಯತೆ ಬಾಣಸಿಗರ ರಿಯಾಲಿಟಿ ಶೋ ಮಾಸ್ಟರ್ ಶೆಫ್ ಇಂಡಿಯಾ ಗೆ (Master Chef India) ಆಯ್ಕೆ ಆಗಿದ್ದರು. ತೀರ್ಪುಗಾರರು ನೀಡುವ ಅಡುಗೆ ಟಾಸ್ಕ್ ಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡಿ ಟಾಪ್ ಟೆನ್ ನಲ್ಲಿ ಸ್ಥಾನವನ್ನು ಪಡೆದಿದ್ದರು. ಆದರೆ ಈಗ ಅವರು ಶೋ ದಿಂದ ಹೊರ ಬಂದಿದ್ದಾರೆ. ಅರುಣ ಅವರಿಗೆ ಸ್ಪರ್ಧೆ ಗೆಲ್ಲುವ 25 ಲಕ್ಷ ಬಹುಮಾನ ಪಡೆಯುವ ಎಲ್ಲಾ ಸಾಮರ್ಥ್ಯ ಇತ್ತು.

ಈ ವೇಳೆ ಟಾಸ್ಕ್ ಒಂದರ ಭಾಗವಾಗಿ ಅವರಿಗೆ ಮೊಟ್ಟೆ ಬೇಯಿಸಲು ಹೇಳಲಾಯಿತು. ಆಗ ಅರುಣಾ ಅವರು ತನ್ನಿಂದ ಅದು ಸಾಧ್ಯವೇ ಇಲ್ಲ ಎಂದಿದ್ದಾರೆ. ಜೈನ ಧರ್ಮ ಅನುಯಾಯಿಯಾದ ತಾನು ತನ್ನ ಧರ್ಮದಲ್ಲಿ ಅನುಮತಿ ಇಲ್ಲದ ಕೆಲಸ ಮಾಡಲಾರೆ ಎನ್ನುವ ಮಾತನ್ನು ಹೇಳಿದ್ದಾರೆ. ತೀರ್ಪುಗಾರರು ಅರುಣಾ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಿದ್ದಾರೆ. ತೀರ್ಪುಗಾರರು ನೀವು ಮೊಟ್ಟೆ ತಿನ್ನುವುದೇನೂ ಬೇಡ, ಕೇವಲ ಅದನ್ನು ಬೇಯಿಸಿ ಕೊಡಿ, ಮುಂದಿನ ಸುತ್ತಿಗೆ ಅರ್ಹತೆ ಪಡೆಯಬಹುದು ಎನ್ನುವ ಮಾತನ್ನು ಹೇಳಿದ್ದಾರೆ.

ಅರುಣಾ ವಿಜಯ್ ಅವರು ಮೊಟ್ಟೆಗಿಂತಲೂ, ಇಪ್ಪತ್ತೈದು ಲಕ್ಷ ಬಹುಮಾನಕ್ಕಿಂತಲೂ ನಾನು ನಂಬಿರುವ ಧರ್ಮ ಮುಖ್ಯ ಎಂದು ಮಾಸ್ಟರ್ ಶೆಫ್ ನಿಂದ ಹೊರ ನಡೆದಿದ್ದಾರೆ. ಅರುಣಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ “ನಾನು ಮೊಟ್ಟೆಗಾಗಿ ಕಾರ್ಯಕ್ರಮದಿಂದ ಹೊರಕ್ಕೆ ಬಂದೆ.  ನಿಮ್ಮ ತತ್ವಗಳನ್ನು ಬಿಟ್ಟು ಯಶಸ್ಸಿನ ಹಿಂದೆ ಓಡಬೇಡಿ. ನಿಮ್ಮ ಮೌಲ್ಯಗಳನ್ನು ಗೌರವಿಸುವ ಮೂಲಕ ಯಶಸ್ಸು ನಿಮ್ಮನ್ನು ಅನುಸರಿಸಲಿ. ನಿಮ್ಮ ಮೌಲ್ಯಗಳು ನಿಮ್ಮನ್ನು ವಿಜೇತರನ್ನಾಗಿ ಮಾಡುತ್ತವೆ” ಎಂದು ಬರೆದುಕೊಂಡರಿದ್ದಾರೆ.

LEAVE A REPLY

Please enter your comment!
Please enter your name here