ನಟನೆಗೆ ಬ್ರೇಕ್, ಹೊಸ ಉದ್ಯಮಕ್ಕೆ ಚಾಲನೆ: ಶೈನ್ ಶೆಟ್ಟಿ ಅವರ ಕಾರ್ಯಕ್ಕೆ ಹರಿದು ಬಂತು ಮೆಚ್ಚುಗೆ

0
45

ಶೈನ್ ಶೆಟ್ಟಿ(Shine Shetty) ಈ ಹೆಸರಿಗೆ ಪರಿಚಯದ ಅಗತ್ಯ ಖಂಡಿತ ಇಲ್ಲ. ಕನ್ನಡ ಬಿಗ್ ಬಾಸ್ ಸೀಸನ್ ಏಳರಲ್ಲಿ(Big Boss Kannada Season 7) ದೊಡ್ಡ ಜನಪ್ರಿಯತೆಯನ್ನು ಪಡೆಯುವುದರ ಜೊತೆಗೆ ಬಿಗ್ ಬಾಸ್ ವಿನ್ನರ್ ಆದ ಶೈನ್ ಶೆಟ್ಟಿ ಪ್ರಸ್ತುತ ಸಿನಿಮಾಗಳಲ್ಲಿ ಕೂಡಾ ನಟಿಸುತ್ತಿದ್ದಾರೆ. ಆದರೆ ವರ್ಷಗಳ ಹಿಂದೆ ಅವರು ಸೀರಿಯಲ್ ಗಳಲ್ಲಿ ನಟಿಸುತ್ತಿದ್ದರು. ಆಗಲೇ ಸಿನಿಮಾ ಮಾಡಬೇಕು ಎನ್ನುವ ಉತ್ಸಾಹದಿಂದ ಕಿರುತೆರೆಯಿಂದ ಬೆಳ್ಳಿತೆರೆಗೆ ತಮ್ಮ ಪಯಣ ಪ್ರಾರಂಭಿಸಲು ಹೋಗಿ ಸಾಕಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದರು ಶೈನ್. ಆದರೆ ಅವರ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ. ಆರ್ಥಿಕ ಸಮಸ್ಯೆಗಳಿಗೆ ಅವರು ಗುರಿಯಾದರು.

ಆಗಲೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬನಶಂಕರಿ ಬಳಿ ಗಲ್ಲಿ ಕಿಚನ್(Galli Kitchen) ಹೆಸರಿನಲ್ಲಿ ರಸ್ತೆ ಬದಿಯಲ್ಲಿ ವ್ಯಾನ್ ಇಟ್ಟುಕೊಂಡು ಹೋಟೆಲ್ ಒಂದನ್ನು ಮಾಡುತ್ತಿದ್ದ ಶೈನ್ ಶೆಟ್ಟಿ ಅವರ ಈ ಉದ್ಯಮಕ್ಕೆ ಅವರ ತಾಯಿ ನೆರವಾಗಿದ್ದರು. ಗಲ್ಲಿ ಕಿಚನ್ ಮಾಡುವಾಗಲೇ ಶೈನ್ ಶೆಟ್ಟಿ ಅವರಿಗೆ ಬಿಗ್ ಬಾಸ್ ನಲ್ಲಿ ಅವಕಾಶ ಅರಸಿ ಬಂದಿತು. ಬಿಗ್ ಬಾಸ್ ಮನೆಯಲ್ಲಿರುವಾಗ ಅವರು ತಮ್ಮ ಗಲ್ಲಿ ಕಿಚನ್ ಬಗ್ಗೆ ಮಾತನಾಡಿದ ನಂತರ ಅದರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಶೈನ್ ಶೆಟ್ಟಿ ಅವರು ತಮ್ಮ ಗಲ್ಲಿ ಕಿಚೆನ್ ಗೆ ಹೊಸ ರೂಪವನ್ನು ನೀಡಿದರು.

ಅದೇ ವೇಳೆ ಬಿಗ್ ಬಾಸ್ ನ ಜನಪ್ರಿಯತೆ ಅವರನ್ನು ಸಿನಿಮಾ ನಟನನ್ನಾಗಿ, ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ನಿರೂಪಕನನ್ನಾಗಿ ಮಾಡಿ ಇನ್ನಷ್ಟು ಹೆಸರನ್ನು ತಂದು ಕೊಟ್ಟಿತು. ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್ ನಲ್ಲಿ ಶೈನ್ ಶೆಟ್ಟಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ಇಡೀ ದೇಶದಾದ್ಯಂತ ಸದ್ದು ಮಾಡಿದ ಕಾಂತಾರಾ ಸಿನಿಮಾದಲ್ಲಿ ಕೂಡಾ ಶೈನ್ ಒಂದು ಪಾತ್ರ ನಿರ್ವಹಿಸಿ ಜನರ ಗಮನ ಸೆಳೆದಿದ್ದರು.

ಈಗ ಇವೆಲ್ಲವುಗಳ ನಡುವೆಯೇ ಅವರು ತಮ್ಮ ಗಲ್ಲಿ ಕಿಚನ್ ನ ಹೊಸ ಬ್ರಾಂಚ್ ಒಂದನ್ನು ಆರ್ ಆರ್ ನಗರದಲ್ಲಿ ಪ್ರಾರಂಭಿಸಿದ್ದಾರೆ. ಅವರ ಈ ಹೊಸ ಬ್ರಾಂಚನ್ನು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು ಟೇಪ್ ಕಟ್ ಮಾಡಿ ಚಾಲನೆ ನೀಡಿದ್ದರು. ಶೈನ್ ಅವರು ಹೊಸ ಬ್ರಾಂಚ್ ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಅವರ ಸ್ನೇಹಿತರು ಮತ್ತು ಆಪ್ತರು ಸಾಮಾಜಿಕ ಜಾಲತಾಣಗಳ ಮೂಲಕ ಅವರಿಗೆ ಶುಭಾಶಯಗಳು ಕೋರಿದರು.

ಇದೇ ವೇಳೆ ಅವರ ಕೆಲವು ಆಪ್ತರು ಅವರ ಹೊಸ ಹೊಟೇಲ್ ಗೆ ಭೇಟಿ ನೀಡಿ ಸಂಭ್ರಮಿಸಿದರು. ಶೈನ್ ಶೆಟ್ಟಿ ಅವರ ಉದ್ಯಮಕ್ಕೆ ಶುಭ ಹಾರೈಸಿದ್ದರು. ಸಿನಿಮಾಗಳ ಜೊತೆಗೆ ಸಂಕಷ್ಟದ ಕಾಲದಲ್ಲಿ ತನ್ನ ಕೈ ಹಿಡಿದಿದ್ದ ಗಲ್ಲಿ ಕಿಚ್ಚನ ಅನ್ನು ಬಹಳ ಶ್ರದ್ಧೆ ಮತ್ತು ಆಸಕ್ತಿಯಿಂದ ಶೈನ್ ಶೆಟ್ಟಿ ಅವರು ಬೆಳೆಸುತ್ತಿದ್ದು, ಅವರ ಅಭಿಮಾನಿಗಳು ಶೈನ್ ಅವರಿಗೆ ಶುಭಾಶಯ ಕೋರುತ್ತಿದ್ದಾರೆ.

LEAVE A REPLY

Please enter your comment!
Please enter your name here