ಆಮೆ ಮೂರ್ತಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಆಮೆ ಉಂಗುರವನ್ನು ಹಾಕಿಕೊಳ್ಳಬಹುದಾ?

Featured-Article

ಆಮೆ ಮೂರ್ತಿ

ಈಗಿನ ಕಾಲದಲ್ಲಿ ಆಮೆ ಮೂರ್ತಿ ಯನ್ನು ಪ್ರತಿಯೊಬ್ಬರೂ ತಮ್ಮ ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡುತ್ತಾರೆ.ಇಂತಹ ಆಮೆ ಮೂರ್ತಿಯನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ ಲಾಭ ದೊರೆಯುತ್ತದೆ , ಧನ ಪ್ರಾಪ್ತಿಯಾಗುತ್ತದೆ ಹಾಗೂ ಆಮೆ ಮೂರ್ತಿಯನ್ನು ಪೂಜೆ ಕೋಣೆಯಲ್ಲಿ ಇಟ್ಟು ಹೇಗೆ ಪೂಜಿಸಬೇಕು ಎಂದು ತಿಳಿಯೋಣ ಬನ್ನಿ.

ಆಮೆಯು ವಿಷ್ಣು ಸ್ವರೂಪವಾಗಿರುವುದರಿಂದ ಆಮೆಯನ್ನು ಪೂಜೆ ಮಾಡುವುದರಿಂದ ಲಕ್ಷ್ಮಿ ಅನುಗ್ರಹ ಬಹುಬೇಗನೆ ದೊರೆಯುತ್ತದೆ.ಆಮೆಯು ದೀರ್ಘಾಯುಷ್ಯವಾಗಿರುವುದರಿಂದ ಆಮೆಯನ್ನು ಪೂಜಿಸುವುದರಿಂದ ದೀರ್ಘಾಯುಷಿಗಳಾಗಿ ಇರುತ್ತೀರಿ ಜೊತೆಗೆ ಆರೋಗ್ಯ ವೃದ್ಧಿಸುತ್ತದೆ.

ಆಮೆ ಮೂರ್ತಿಯನ್ನು ಪೂಜೆಯನ್ನು ಮಾಡುವ ವಿಧಾನ ಮೊದಲಿಗೆ ಆಮೆ ಮೂರ್ತಿಯನ್ನು ಇಡುವಂತಹ 1 ಚಿಕ್ಕ ಬೌಲಿಗೆ 5 ಕಡೆ ಶ್ರೀಗಂಧವನ್ನು ಹಚ್ಚಿ ನಂತರ ಅರಿಶಿಣ ಕುಂಕುಮವನ್ನು ಹಚ್ಚಬೇಕು.

ನಂತರ ಆಮೆಯ ಮುಖ ಬೆನ್ನು ಬಾಲಕ್ಕೂ ಸಹ ಶ್ರೀಗಂಧ ಮತ್ತು ಅರಿಶಿಣ ಕುಂಕುಮವನ್ನು ಹಚ್ಚಬೇಕು,ನಂತರ ಆ ಬೌಲ್ ಗೆ ಅರ್ಧ ತುಂಬುವಷ್ಟು ನೀರು , 1 ರೂಪಾಯಿಯ ನಾಣ್ಯ ,ಮತ್ತು ಒಂದು ಪಚ್ಚ ಕರ್ಪೂರವನ್ನು ಹಾಕಿ ಅದರೊಳಗೆ ಆಮೆಯ ಮೂರ್ತಿಯನ್ನು ಇಡಬೇಕು.ಆ ಬೌಲ್ ಸುತ್ತ ಕೆಂಪು ಮತ್ತು ಹಳದಿ ಹೂವುಗಳಿಂದ ಅಲಂಕಾರ ಮಾಡಿ ಪ್ರತಿದಿನ ನಿಮ್ಮ ಇಷ್ಟಾರ್ಥಗಳನ್ನು ಕೋರಿಕೊಂಡು ಪೂಜೆ ಸಲ್ಲಿಸಬೇಕು.

ಪ್ರತಿದಿನ ದೇವರಿಗೆ ಪೂಜೆ ಸಲ್ಲಿಸುವ ರೀತಿಯಲ್ಲೇ ಈ ಆಮೆ ಮೂರ್ತಿಗೂ ಪೂಜೆ ಸಲ್ಲಿಸಬೇಕು.ಇನ್ನು ಪ್ರತಿದಿನ ಬೌಲಿನ ನೀರನ್ನು ಬದಲಿಸಿ ಸಾಧ್ಯವಾಗದಿದ್ದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ನೀರನ್ನು ಬದಲಿಸಿ.

  • ಆರೋಗ್ಯ ವೃದ್ಧಿಗೆ ಮಣ್ಣಿನ ಆಮೆಯನ್ನು ಮನೆಯಲ್ಲಿ ಇರಿಸಿಕೊಳ್ಳಿ.
  • ವಿದ್ಯಾರ್ಥಿ ಗಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಹೊಂದಲು ತಾಮ್ರ ಅಥವಾ ಹಿತ್ತಾಳೆಯ ಆಮೆಯನ್ನು ಓದುವ ಜಾಗದಲ್ಲಿ ಇರಿಸಿ.
  • ವ್ಯಾಪಾರ ವ್ಯವಹಾರಸ್ಥರು ಪ್ರಗತಿ ಹೊಂದಲು ಬೆಳ್ಳಿ ಅಥವಾ ಸ್ಪಟಿಕದ ಆಮೆಯನ್ನು ಮನೆಯಲ್ಲಿ ಇರಿಸಿಕೊಳ್ಳಿ.
  • ಗಂಡ ಹೆಂಡತಿ ಅನ್ಯೋನ್ಯತೆ ಹೆಚ್ಚಲು ಮಲಗುವ ಕೋಣೆಯಲ್ಲಿ ಆಮೆ ಮೂರ್ತಿಯನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು.
  • ಮಕ್ಕಳಾಗದವರು ಆಮೆಯ ಮೇಲೆ ಒಂದು ಚಿಕ್ಕ ಆಮೆ ಕೂತಿರುವಂತಹ ಆಮೆಯ ಮೂರ್ತಿಯನ್ನು ತಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಫಲ ದೊರೆಯುತ್ತದೆ.

ಆಮೆ ಉಂಗುರವನ್ನು ಧರಿಸುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ.

ಧನ್ಯವಾದಗಳು.

Leave a Reply

Your email address will not be published.