Abhishek Bachchan: “ನಾನು ವಿಚ್ಚೇದನ ಪಡೆಯುತ್ತಿದ್ದೇನೆ”: ಅಭಿಷೇಕ್ ಟ್ವೀಟ್, ವದಂತಿಗೆ ಹೊಸ ಟ್ವಿಸ್ಟ್!

0 1

Abhishek Bachchan: ನಮ್ಮ ಕರ್ನಾಟಕದ ಬೆಡಗಿ, ಮಂಗಳೂರಿನ ಹುಡುಗಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ.
ಐಶ್ವರ್ಯ ರೈ ಅವರು ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿದ್ದಾರೆ. ಕೆರಿಯರ್ ನಲ್ಲಿ ಪೀಕ್ ನಲ್ಲಿ ಇದ್ದಾಗಲೇ ಮದುವೆಯಾದರು. ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರೊಡನೆ ಮದುವೆಯಾದರು.

ಐಶ್ವರ್ಯ ರೈ ಅವರ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ.. 16 ವರ್ಷಗಳಿಂದ ಸುಂದರವಾಗಿದ್ದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರಬೇಕು ಎನ್ನುವ ವದಂತಿ ಕೇಳಿಬಂದಿದೆ. ಅಭಿಷೇಕ್ ಬಚ್ಚನ್ ಅವರು ವೆಡ್ಡಿಂಗ್ ರಿಂಗ್ ಇಲ್ಲದೆ ಕಾಣಿಸಿಕೊಂಡಿರುವುದು ಈ ವದಂತಿ ಕಾರಣವಾಗಿತ್ತು. ಅದರ ಜೊತೆಗೆ ಈಗ ಮತ್ತೊಂದು ವಿಚಾರಕ್ಕೆ ಅನುಮಾನ ಶುರುವಾಗಿದೆ. ಐಶ್ವರ್ಯ ರೈ ಅವರ ಮಾವ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್..

ಇತ್ತೀಚೆಗೆಇವರು ಇನ್ಸ್ಟಾಗ್ರಾಮ್ ನಲ್ಲಿ ಐಶ್ವರ್ಯ ರೈ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಈ ವಿಚಾರಗಳು ಮುನ್ನಲೆಗೆ ಬರುತ್ತಿದ್ದ ಹಾಗೆ ಐಶ್ವರ್ಯ ರೈ ಹಾಗೂ ಬಿಗ್ ಬಿ ಕುಟುಂಬದ ನಡುವೆ ಹಲವು ವರ್ಷಗಳಿಂದ ಎಲ್ಲವೂ ಸರಿಯಿಲ್ಲ ಎಂದು ಹೇಳಲಾಗಿತ್ತು. ಹಾಗೆಯೇ ಅಭಿಷೇಕ್ ಅವರು ಮೊದಲ ಬಾರಿಗೆ ವೆಡ್ಡಿಂಗ್ ರಿಂಗ್ ಇಲ್ಲದೆ ಕಾಣಿಸಿಕೊಂಡಿದ್ದು ವೈರಲ್ ಆಗಿತ್ತು. ಇದೀಗ ಅಭಿಷೇಕ್ ಅವರ ಹಳೆಯ ಟ್ವೀಟ್ ವೈರಲ್ ಆಗುತ್ತಿದೆ. 2014ರಲ್ಲೂ ಈ ನೋಡಿ ವಿಚ್ಛೇದನ ಪಡೆಯುತ್ತದೆ ಎನ್ನುವ ಸುದ್ದಿ ವೈರಲ್ ಆಗಿತ್ತು.

ಆಗ ಅಭಿಷೇಕ್ ಅವರು ಒಂದು ಟ್ವೀಟ್ ಮಾಡಿದ್ದರು, “ನಾನು ವಿಚ್ಚೇದನ ಪಡೆಯುತ್ತಿದ್ದೇನೆ, ನನಗೆ ಈ ವಿಷಯ ತಿಳಿಸಿದ್ದಕ್ಕೆ ಧನ್ಯವಾದ. ನನ್ನ ಮರುಮದುವೆ ಯಾವಾಗ ಅಂತ ಕೂಡ ತಿಳಿಸುತ್ತೀರಾ? ಧನ್ಯವಾದಗಳು..” ಎಂದು ತಮಾಷೆಯಾಗಿ ಟ್ವೀಟ್ ಮಾಡಿ ವಿಚ್ಛೇದನ ವದಂತಿಯನ್ನು ತಳ್ಳಿ ಹಾಕಿದ್ದರು ಅಭಿಷೇಕ್ ಬಚ್ಚನ್. “ಜೀವನ ಹೇಗೆ ನಡೆಸಬೇಕು ಎಂದು ನನಗೆ ಐಶ್ವರ್ಯ ಗೆ ಗೊತ್ತಿದೆ. ಮೂರನೇ ಜನರು ಅದರ ಬಗ್ಗೆ ತಲೆಕೆಡಿಸಿಕೊಳ್ಳೋಕೆ ಅನುಮತಿ ಇಲ್ಲ. ನನಗೆ ಅವರ ಮೇಲೆ ಎಷ್ಟು ಪ್ರೀತಿ ಇದೆ, ಅವರಿಗೆ ನನ್ನಮೇಲೆ ಎಷ್ಟು ಪ್ರೀತಿ ಇದೆ ಎಂದು ನಮಗೆ ಗೊತ್ತಿದೆ..

ನಿಮಗೆ ಬೇಕಾದ ಹಾಗೆ ತಪ್ಪು ಭಾವಿಸಿದರೆ, ಅದನ್ನೇ ಮುಂದುವರೆಸಿ.. ನಾನೊಬ್ಬ ಸಾರ್ವಜನಿಕ ವ್ಯಕ್ತಿ, ಮಾಧ್ಯಮದವರಿಗೆ ಸಂತೋಷ ಆಗುವ ಹಾಗೆ ಯಾವಾಗಲೂ ಮಾಡಬೇಕು ಅಂದ್ರೆ ನನ್ನಿಂದ ಸಾಧ್ಯವಿಲ್ಲ. ನನ್ನ ವೈವಾಹಿಕ ಜೀವನ ಮಾಧ್ಯಮ ಹೇಳುವ ಹಾಗೆ ಅನುಸರಿಸಲು ಅಥವಾ ಅರಿತುಕೊಳ್ಳಲು ಹೋಗುವುದಿಲ್ಲ..” ಎಂದು ಹೇಳಿದ್ದರು ನಟ ಅಭಿಷೇಕ್ ಬಚ್ಚನ್.

Leave A Reply

Your email address will not be published.