Abhishek Bachchan: ‘ಹೌದು ನಾವು ಆ ಮನೆಯಲ್ಲಿ ವಾಸ ಮಾಡುತ್ತಿಲ್ಲ!’: ಶಾಕಿಂಗ್ ಹೇಳಿಕೆ ನೀಡಿದ ಅಭಿಷೇಕ್ ಬಚ್ಚನ್

Written by Pooja Siddaraj

Published on:

Abhishek Bachchan: Abhishek Bachchan: ನಮ್ಮ ಕರ್ನಾಟಕದ ಬೆಡಗಿ, ಮಂಗಳೂರಿನ ಹುಡುಗಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಐಶ್ವರ್ಯ ರೈ ಅವರು ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿದ್ದಾರೆ. ಕೆರಿಯರ್ ನಲ್ಲಿ ಪೀಕ್ ನಲ್ಲಿ ಇದ್ದಾಗಲೇ ಮದುವೆಯಾದರು. ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರೊಡನೆ ಮದುವೆಯಾದರು.

ಐಶ್ವರ್ಯ ರೈ ಅವರ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ.. 16 ವರ್ಷಗಳಿಂದ ಸುಂದರವಾಗಿದ್ದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರಬೇಕು ಎನ್ನುವ ವದಂತಿ ಕೇಳಿಬಂದಿದೆ. ಅಭಿಷೇಕ್ ಬಚ್ಚನ್ ಅವರು ವೆಡ್ಡಿಂಗ್ ರಿಂಗ್ ಇಲ್ಲದೆ ಕಾಣಿಸಿಕೊಂಡಿರುವುದು ಈ ವದಂತಿ ಕಾರಣವಾಗಿತ್ತು. ಅದರ ಜೊತೆಗೆ ಈಗ ಮತ್ತೊಂದು ವಿಚಾರಕ್ಕೆ ಅನುಮಾನ ಶುರುವಾಗಿದೆ. ಐಶ್ವರ್ಯ ರೈ ಅವರ ಮಾವ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್..

ಇತ್ತೀಚೆಗೆಇವರು ಇನ್ಸ್ಟಾಗ್ರಾಮ್ ನಲ್ಲಿ ಐಶ್ವರ್ಯ ರೈ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಈ ವಿಚಾರಗಳು ಮುನ್ನಲೆಗೆ ಬರುತ್ತಿದ್ದ ಹಾಗೆ ಐಶ್ವರ್ಯ ರೈ ಹಾಗೂ ಬಿಗ್ ಬಿ ಕುಟುಂಬದ ನಡುವೆ ಹಲವು ವರ್ಷಗಳಿಂದ ಎಲ್ಲವೂ ಸರಿಯಿಲ್ಲ ಎಂದು ಹೇಳಲಾಗಿತ್ತು. ಹಾಗೆಯೇ ಅಭಿಷೇಕ್ ಅವರು ಮೊದಲ ಬಾರಿಗೆ ವೆಡ್ಡಿಂಗ್ ರಿಂಗ್ ಇಲ್ಲದೆ ಕಾಣಿಸಿಕೊಂಡಿದ್ದು ವೈರಲ್ ಆಗಿತ್ತು. ಇದೀಗ ಅಭಿಷೇಕ್ ಅವರು ನೀಡಿದ ಹಳೆಯ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

2018 ರಲ್ಲಿ ಒಂದು ಸಿನಿಮಾ ಪ್ರೊಮೋಷನ್ ನಲ್ಲಿ ಪ್ರಶ್ನೆಯೊಂದನ್ನು ಕೇಳಲಾಗಿತ್ತು, ಅಭಿಷೇಕ್ ಬಚ್ಚನ್ ಅವರು ವಾಸ ಮಾಡುತ್ತಿರುವ ಮನೆಯ ಹೆಸರೇನು ಎಂದು ಪ್ರಶ್ನೆ ಕೇಳಲಾಗಿತ್ತು, ಅದಕ್ಕೆ ಒಬ್ಬರು ಜಲ್ಸ ಎಂದು ಹೇಳಿದಾಗ, ಆ ಉತ್ತರ ತಪ್ಪು ಎಂದು ಹೇಳಿದ್ದರು ಅಭಿಷೇಕ್. ಈ ಉತ್ತರದ ಅನುಸಾರ ಸಿಕ್ಕಿರುವ ಮಾಹಿತಿಯ ಪ್ರಕಾರ 2018 ಅಂದರೆ 5 ವರ್ಷಗಳ ಹಿಂದಿನಿಂದಲೇ ಅಭಿಷೇಕ್ ಹಾಗೂ ಐಶ್ವರ್ಯ ಬೇರೆಯಾಗಿ ವಾಸ ಮಾಡುತ್ತಿದ್ದಾರೆ.

ಆ ಬಂಗಲೆ ಕೂಡ ಜಲ್ಸ ಗೆ ಒಳಗಿನಿಂದಲೇ ಕನೆಕ್ಟ್ ಆಗಿದೆಯಂತೆ. ಆದರೆ ಈ ವಿಷಯವನ್ನು ಅವರಿಬ್ಬರು ಎಲ್ಲಿಯೂ ಬಹಿರಂಹಪಡಿಸಿರಲಿಲ್ಲ. ಇದಷ್ಟೇ ಅಲ್ಲದೆ, ಜಲ್ಸ ಬಿಟ್ಟು 21 ಕೋಟಿ ಬೆಲೆ ಬಾಳುವ ಅಪಾರ್ಟ್ಮೆಂಟ್ ಒಂದನ್ನು ಕೂಡ ಈ ಜೋಡಿ ಖರೀದಿ ಮಾಡಿತ್ತು, ಆಗ ಕೂಡ ಇವರಿಬ್ಬರು ಜಲ್ಸ ಬಿಟ್ಟು ಆ ಅಪಾರ್ಟ್ಮೆಂಟ್ ಗೆ ಹೋಗುತ್ತಾರೆ ಎನ್ನಲಾಗಿತ್ತು. ಆದರೆ ವಿಚಾರಗಳು ಬೇರೆಯೇ ಆಗಿದೆ.

Leave a Comment