ಅಸಿಡಿಟಿ ಗೆ ಹೇಳಿ ಗುಡ್ ಬೈ!
ಸಾಮಾನ್ಯವಾಗಿ ಅಸಿಡಿಟಿ ಉಂಟಾಗಲು ಸರಿಯಾದ ಸಮಯಕ್ಕೆ ಊಟ ಮಾಡದಿರುವುದು 1 ಪ್ರಮುಖ ಕಾರಣವಾಗಿದೆ ಹಾಗೂ ಕೆಲವೊಮ್ಮೆ ಅತಿಹೆಚ್ಚು ಖಾರದ ಪದಾರ್ಥಗಳನ್ನು ಸೇವಿಸಿದಾಗ ಸಹ ಹೊಟ್ಟೆಯೊಳಗಿನ ಅಗ್ನಿಯ ಅಸಮತೋಲನದಿಂದ ಅಸಿಡಿಟಿ ಉಂಟಾಗುತ್ತದೆ.
ಹೀಗೆ ಅಸಿಡಿಟಿ ಹೆಚ್ಚಾದಾಗ ಹೊಟ್ಟೆ ಉರಿ , ಎದೆ ಉರಿ , ಹುಳಿ ತೇಗು ಬರುವುದು ಸರ್ವೇ ಸಾಮಾನ್ಯವಾಗಿದೆ.ಹೀಗೆ ಆದಾಗ ತಕ್ಷಣವೇ ಈ ಅಸಿಡಿಟಿ ಕಡಿಮೆಯಾಗಲು ಹೀಗೆ ಮಾಡಿ ಚಮತ್ಕಾರ ನೋಡಿ..
1 ಲೋಟ ಎಳನೀರಿಗೆ 1 ಚಮಚ ಕಲ್ಲುಸಕ್ಕರೆಯನ್ನು ಬೆರೆಸಿ ಊಟ ಮತ್ತು ತಿಂಡಿಗಿಂತ ಮುಂಚೆ ಕುಡಿಯಿರಿ ಹೀಗೆ ಕಲ್ಲು ಸಕ್ಕರೆ ಮಿಶ್ರಿತ ಎಳನೀರನ್ನು ಕುಡಿದ ನಂತರ ಊಟ ಅಥವಾ ತಿಂಡಿ ಯನ್ನು ಸೇವಿಸಿ
ಇದರಿಂದ ಅಸಿಡಿಟಿಯಿಂದ ತಕ್ಷಣ ಪರಿಹಾರ ಸಿಗುತ್ತದೆ.ಹೊಟ್ಟೆಯಲ್ಲಿರುವ ಆಸಿಡ್ ಅಂಶವನ್ನು ಎಳನೀರು ತಣ್ಣಗೆ ಆಗಿಸುವುದರ ಜೊತೆಗೆ ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ.
ಎಳನೀರು ಸಿಗದೇ ಇದ್ದ ಪಕ್ಷದಲ್ಲಿ ಹಸಿ ಆಕಳಿನ ಹಾಲನ್ನು ಕಾಯಿಸದೆ ತಂದು ಅದಕ್ಕೆ ಕಲ್ಲು ಸಕ್ಕರೆಯನ್ನು ಬೆರೆಸಿಕೊಂಡು ಊಟ ತಿಂಡಿ ಗಿಂತ ಮುಂಚೆ ಕುಡಿಯಬೇಕು.ಹೀಗೆ ಮಾಡುವುದರಿಂದ ಸಹ ಅಸಿಡಿಟಿಗೆ ತಕ್ಷಣ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಹೀಗೆ ಮಾಡಿದಾಗಲೂ ಕಡಿಮೆ ಆಗದಿದ್ದ ಪಕ್ಷದಲ್ಲಿ ಆಯುರ್ವೇದ ಡಾಕ್ಟರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ.
ಧನ್ಯವಾದಗಳು.