Actor Kishore ಕನ್ನಡದ ಕಾಂತಾರ(Kantara) ಸಿನಿಮಾ ಈಗಾಗಲೇ ದೊಡ್ಡ ಯಶಸ್ಸು, ಗಳಿಕೆ ಮತ್ತು ಜನಪ್ರಿಯತೆಯನ್ನು ಪಡೆದುಕೊಂಡ ಸಿನಿಮಾ ಆಗಿದೆ. ಕಾಂತಾರ ಇಡೀ ಸಿನಿಮಾದ ಚಿತ್ರ ಕಥೆಯನ್ನು ಗಮನಿಸಿದಾಗ ನಮಗೆ ಗೋಚರಿಸುವುದು ಇಲ್ಲಿ ದೈವಾರಾಧನೆಗೆ ನೀಡಿರುವ ಮಹತ್ವ ಮತ್ತು ಪ್ರಾಮುಖ್ಯತೆ. ಈ ಸಿನಿಮಾದ ಒಂದು ಬಹು ಮುಖ್ಯವಾದ ಪಾತ್ರದಲ್ಲಿ ನಟ ಕಿಶೋರ್(Kishore) ಅವರು ನಟಿಸಿದ್ದಾರೆ. ಅವರ ಪಾತ್ರಕ್ಕೆ ಈಗಾಗಲೇ ಅಪಾರವಾದ ಮೆಚ್ಚುಗೆಗಳು ಕೂಡಾ ಸಿಕ್ಕಿವೆ. ಈಗ ನಟ ಕಿಶೋರ್ ಅವರು ದೈವದಲ್ಲಿ ನಂಬಿಕೆ ಇರಲಿ, ಆದರೆ ಮೂಢನಂಬಿಕೆ ಬೇಡ ಎನ್ನುವ ಮಾತೊಂದನ್ನು ಹೇಳಿದ್ದು, ಇದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಕೊಳೆತ ನಿಂಬೆ ಹಣ್ಣು ಎಸೀತಿದ್ದೀರಾ ಈ ತಪ್ಪು ಮಾಡಬೇಡಿ ಇಂದು ಬಹಳ ಉಪಯೋಗಕ್ಕೆ ಬರುತ್ತೆ!

ಕೆಲವೇ ದಿನಗಳ ಹಿಂದೆಯಷ್ಟೇ ಕಾಂತಾರ ದೈವವನ್ನು ಅವಮಾನಿಸಿದ ಯುವಕನೊಬ್ಬ, ಆತ ಮಾಡಿದ ತಪ್ಪಿಗೆ ರ ಕ್ತ ಕಾ ರಿ ಸತ್ತ ಎನ್ನುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈಗ ನಟ ಕಿಶೋರ್(Actor Kishore ) ಅವರು ಇದರ ಬಗ್ಗೆ ಮಾತನಾಡಿದ್ದು, ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾ, ದೈವದಲ್ಲಿ ನಂಬಿಕೆ ಇರಲಿ, ಆದರೆ ಮೂಢನಂಬಿಕೆ ಬೇಡ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದು, ಅವರ ಪೋಸ್ಟ್(Viral Post) ಈಗ ಎಲ್ಲರ ಗಮನವನ್ನು ಸೆಳೆಯುತ್ತಿದೆ. ವೈರಲ್ ವೀಡಿಯೋ ಕುರಿತಾಗಿ ಅವರು ಹೇಳಿದ್ದೇನು ತಿಳಿಯೋಣ ಬನ್ನಿ.
ಕೊಳೆತ ನಿಂಬೆ ಹಣ್ಣು ಎಸೀತಿದ್ದೀರಾ ಈ ತಪ್ಪು ಮಾಡಬೇಡಿ ಇಂದು ಬಹಳ ಉಪಯೋಗಕ್ಕೆ ಬರುತ್ತೆ!
“ಆ ಸಿನಿಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ. ಕೊ ಲ್ಲು ವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಇರುವುದಿಲ್ಲ? ಏಕೆಂದರೆ ಕಥೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೋ, ದೆವ್ವವೋ ಒಂದು ಸಾಧನವಷ್ಟೆ. ಸಿನಿಮಾವಾಗಲಿ ಪುರಾಣವಾಗಲಿ’ ಎಂದು ಬರೆದುಕೊಂಡಿದ್ದಾರೆ.