ಪಠಾಣ್ (pathan) ಸಿನಿಮಾ ಬಿಡುಗಡೆಗೆ ಮುನ್ನ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎನ್ನುವ ಕೂಗು ಬಹಳ ಜೋರಾಗಿತ್ತು. ಈ ವಿಚಾರಕ್ಕೆ ಸಿನಿಮಾ ಸೆಲೆಬ್ರಿಟಿಗಳು ಪ್ರತಿಕ್ರಿಯೆಯನ್ನು ನೀಡಿದ್ದರು. ಕೆಲವೇ ದಿನಗಳ ಹಿಂದೆಯಷ್ಟೇ ನಟಿ ಕರೀನಾ ಕಪೂರ್(Kareena Kapoor) ಸಹಾ ಬಾಯ್ಕಾಟ್ ಬಗ್ಗೆ ಮಾತನಾಡಿದ್ದರು. ಸಿನಿಮಾ ಇಲ್ಲದೇ ಹೋದರೆ ಮನರಂಜನೆ ಇಲ್ಲ ಎಂದಿದ್ದರು. ಈಗ ಸಿನಿಮಾ ಬಿಡುಗಡೆ ನಂತರ ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟಿ ಆಲಿಯಾ ಭಟ್ (Alia Bhat) ಪ್ರತಿಕೆಯೆಯನ್ನು ನೀಡಿದ್ದು ಬಾಯ್ಕಾಟ್ ಎಂದವರಿಗೆ ನಟಿ ಈ ಮೂಲಕ ತಿರುಗೇಟು ನೀಡಿದ್ದಾರೆ.

ಬಾಲಿವುಡ್(Bollywood) ಕಿಂಗ್ ಖಾನ್ ನಟ ಶಾರುಖ್ ಖಾನ್ (Shah Rukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಜೋಡಿಯಾಗಿ ನಟಿಸಿರುವ ಪಠಾಣ್ ಚಿತ್ರಕ್ಕೆ ನಟಿ ಆಲಿಯಾ ಭಟ್ ಬಹಳ ಆತ್ಮೀಯವಾಗಿ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ನಟಿಯು ತಮ್ಮ ಇನ್ಸ್ಟಾಗ್ರಾಂ (Instagram) ಖಾತೆಯ ಸ್ಟೋರಿಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ನಟಿ ತಮ್ಮ ಪೋಸ್ಟ್ ನಲ್ಲಿ, ಪ್ರೀತಿ ಯಾವಾಗಲೂ ಗೆಲ್ಲುತ್ತದೆ, ವಾಟ್ ಎ ಬ್ಲಾಸ್ಟ್ ಎಂದು ಬರೆದು, ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಆಲಿಯಾ(Alia) ತಮ್ಮ ಈ ಪೋಸ್ಟ್ ಮೂಲಕ ಶಾರೂಖ್ ಖಾನ್ ಮತ್ತು ಪಠಾಣ್(Pathan) ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಮತ್ತು ಹೊರಗೆ ದನಿ ಎತ್ತಿ, ವಿ ವಾ ದಗಳನ್ನು ಹುಟ್ಟು ಹಾಕಿದವರಿಗೆ ಮಾತಿನ ಛಡಿಯೇಟು ಕೊಟ್ಟಿದ್ದಾರೆ. ನಟಿ ಪ್ರೀತಿಯನ್ನು ನೀಡುವವರು ಎಂದಿಗೂ ಪ್ರೀತಿಯನ್ನು ಕಾಪಾಡಿಕೊಳ್ಳುತ್ತಾರೆ ಮತ್ತು ಆ ಪ್ರೀತಿ ಖಂಡಿತ ಗೆಲುವನ್ನು ಸಾಧಿಸುತ್ತದೆ ಎನ್ನುವ ಮಾತನ್ನು ಅವರು ಹೇಳಿದ್ದು ಆಲಿಯಾ ಪೋಸ್ಟ್ ಗೆ ಮೆಚ್ಚುಗೆಗಳು ಹರಿದು ಬಂದಿದೆ.