ಪ್ರಭಾಸ್ ಸ್ಟಾರ್ ಡಂ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಆದಿಪುರುಷ್ ನಿರ್ದೇಶಕ ಓಂ ರಾವತ್! ಸಿನಿಮಾ ಬಿಡುಗಡೆ ಯಾವಾಗ?

0
97

Adipurush :ಟಾಲಿವುಡ್ ನಟ ಪ್ರಭಾಸ್(Prabhas) ಅಭಿನಯದ ಆದಿಪುರುಷ್ (Adipurush) ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಆದರೆ ಸಿನಿಮಾದ ಟ್ರೈಲರ್(Adipurush Trailer) ಬಿಡುಗಡೆ ಆದ ನಂತರ ಎಲ್ಲರ ನಿರೀಕ್ಷೆಗಳು ಸುಳ್ಳಾದ ಅನುಭವವೊಂದು ಆಗಿದೆ. ನಟ ಪ್ರಭಾಸ್ ಅವರ ಅಭಿಮಾನಿಗಳೇ ಟ್ರೈಲರ್ ನೋಡಿದ ನಂತರ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಅಲ್ಲದೇ ಒಂದಷ್ಟು ಸಂಘಟನೆಗಳಿಂದ ಸಿನಿಮಾ ರಾಮಾಯಣವನ್ನು ಹಾಗೂ ಅದರಲ್ಲಿನ ಪಾತ್ರಗಳಿಗೆ ಅವಮಾನವಾಗುವಂತೆ ಬಿ‌ಂಬಿಸಲಾಗಿದೆ ಎನ್ನುವ ಸಿಟ್ಟು, ಅಸಮಾಧಾನಗಳು ದೇಶ ವ್ಯಾಪಿಯಾಗಿ ಹರಿದಾಡಿತ್ತು.

ಟ್ರೈಲರ್ ಬಿಡುಗಡೆ ನಂತರ ಎದ್ದ ಅಸಮಾಧಾನ ಕಂಡು ಚಿತ್ರ ತಂಡ ಕೂಡಾ ಸಿನಿಮಾದ ಕೆಲವು ಭಾಗಗಳನ್ನು ಮರು ಚಿತ್ರೀಕರಣ ಮಾಡಲಾಗುವುದು ಎನ್ನುವ ಮಾತನ್ನು ಹೇಳಿತ್ತು. ಅಲ್ಲದೇ ಕೆಲವೊಂದು ಪಾತ್ರಗಳ ಲುಕ್ ಅನ್ನು ಕೂಡಾ‌ ಬದಲಿಸುವ ಸಾಧ್ಯತೆಗಳಿವೆ ಎಂದು ಸುದ್ದಿಯಾಗಿತ್ತು. ಅಲ್ಲದೇ ಸಿನಿಮಾ ಬಿಡುಗಡೆಗೆ ಮೊದಲು ಘೋಷಣೆ ಮಾಡಿದ್ದ ದಿನಾಂಕವನ್ನು ಕೂಡಾ ಮುಂದೂಡಲಾಗಿದೆ. ಚಿತ್ರ ತಂಡ ಇನ್ನೂ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎನ್ನುವುದನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಇದೀಗ ಬಹಳ ದಿನಗಳ ಆದಿಪುರುಷ್ ಸಿನಿಮಾ ನಿರ್ದೇಶಕ ಓಂ ರಾವತ್(Om Rawat) ಅವರು ತಮ್ಮ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಹೌದು, ಓಂ ರಾವತ್ ಅವರು ಮಾತನಾಡುತ್ತಾ, ಪ್ರಭಾಸ್ ಅವರ ಸಲಾರ್(Prabhas Salar) ಸಿನಿಮಾದ ಕೆಲಸಗಳು ಪೂರ್ತಿ ಮುಗಿದ ನಂತರ ಆದಿಪುರುಷ್ ಬಿಡುಗಡೆಯ ಬಗ್ಗೆ ಮಾಹಿತಿಯನ್ನು ನೀಡುವುದಾಗಿ ಹೇಳಿರುವ ಅವರು, ತಮಗೆ ಪ್ರಭಾಸ್ ಸ್ಟಾರ್ ಡಂ ಮೇಲೆ ನಂಬಿಕೆಯಿದ್ದು, ಆದಿಪುರುಷ್ ಸಿನಿಮಾ ಯಶಸ್ಸನ್ನು ಸಾಧಿಸುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆ.

LEAVE A REPLY

Please enter your comment!
Please enter your name here