Adipurush movie ಪ್ಯಾನ್ ಇಂಡಿಯಾ ಸ್ಟಾರ್, ಟಾಲಿವುಡ್ ನಟ ಪ್ರಭಾಸ್(Prabhas) ಅವರಿಗೆ ಬಾಹುಬಲಿ ಸಿನಿಮಾ ನಂತರ ದೊಡ್ಡ ಯಶಸ್ಸು ನೀಡುವ ಸಿನಿಮಾ ಯಾವುದೂ ಸಿಕ್ಕಿಲ್ಲ. ಬಿಡುಗಡೆ ಆದ ಎರಡೂ ಸಿನಿಮಾಗಳು ಸೋತಿವೆ. ಈಗ ಅವರ ಬಹು ನಿರೀಕ್ಷಿತ ಸಿನಿಮಾ ಆದಿಪುರುಷ್(Adipurush movie) ಟ್ರೈಲರ್ ಬಿಡುಗಡೆ ಆದಾಗಿನಿಂದಲೂ ಸಹಾ ಪ್ರೇಕ್ಷಕರ ಟೀಕೆಗೆ ಅದು ಒಳಗಾಗಿದೆ. ಅಲ್ಲದೇ ವಿ ವಾ ದಗಳಿಗೆ ಸಹಾ ಕಾರಣವಾಗಿದೆ. ಚಿತ್ರ ತಂಡ ಕೆಲವೊಂದು ಬದಲಾವಣೆಗಳನ್ನು ಸಹಾ ಮಾಡುವ ಆಲೋಚನೆಯನ್ನು ಮಾಡಿತ್ತು. ಸಿನಿಮಾ ಬಿಡುಗಡೆ ದಿನಾಂಕ ಸಹಾ ಮುಂದೂಡಲಾಗಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಸಿನಿಮಾಕ್ಕೆ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ.
ಈ ದಿಕ್ಕಿನಲ್ಲಿ ಪೊರಕೆಯನ್ನು ಇಡುವುದರಿಂದ ನೀವು ಬಡವರಾಗಬಹುದು!ಸರಿಯಾದ ದಿಕ್ಕು ಯಾವುದು?

ರಾಮಾಯಣ(Ramayana) ಮಹಾಕಾವ್ಯವನ್ನು ಆಧರಿಸಿ ರೂಪುಗೊಂಡ ಆದಿ ಪುರುಷ್ (adipurush trailer) ಸಿನಿಮಾದಲ್ಲಿ ಪೌರಾಣಿಕ ಪಾತ್ರಗಳನ್ನು ಚಿತ್ರಿಸಿರುವ ರೀತಿ, ಸಿನಿಮಾದಲ್ಲಿನ ಕಳಪೆ ವಿಎಫ್ ಎಕ್ಸ್, ಎಲ್ಲಕ್ಕಿಂತ ಮುಖ್ಯವಾಗಿ ರಾವಣನ ಪಾತ್ರದ ಗೆಟಪ್ ಎಲ್ಲವೂ ಸಹಾ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಈಗ ಅಲಹಾಬಾದ್ ನ್ಯಾಯಾಲಯವು ಸೆನ್ಸಾರ್ ಮಂಡಳಿಗೆ ಆದಿಪುರುಷ್ ಸಿನಿಮಾಕ್ಕೆ ಸಂಭಂಧಿಸಿದ ಹಾಗೆ ಒಂದು ನೋಟೀಸ್ ಅನ್ನು ಜಾರಿ ಮಾಡಿದ್ದು , ಸ್ಪಷ್ಟನೆ ನೀಡುವಂತೆ ತಿಳಿಸಿದೆ.
ಈ ದಿಕ್ಕಿನಲ್ಲಿ ಪೊರಕೆಯನ್ನು ಇಡುವುದರಿಂದ ನೀವು ಬಡವರಾಗಬಹುದು!ಸರಿಯಾದ ದಿಕ್ಕು ಯಾವುದು?
ಕುಲದೀಪ್ ತಿವಾರಿ(Kuldeep Tiwari) ಎನ್ನುವವರು ಆದಿಪುರುಷ್ ಸಿನಿಮಾದಲ್ಲಿ ಪಾತ್ರಗಳನ್ನು ತಿರುಚಲಾಗಿದೆ, ಸಿನಿಮಾದ ಪ್ರೋಮೋದಲ್ಲಿ ಸೀತಾ ಮಾತೆಯ ಪಾತ್ರಧಾರಿಯ ಉಡುಪು ಆಕ್ಷೇಪಾರ್ಹವಾಗಿದೆ. ಸೀತಾ ಮತ್ತು ರಾಮನ ಕುರಿತಾದ ಧಾರ್ಮಿಕ ನಂಬಿಕೆಗೆ ವಿ ರು ದ್ಧ ವಾಗಿರುವಂತೆ ಚಿತ್ರೀಕರಿಸಲಾಗಿದೆ. ಸೆನ್ಸಾರ್ ಬೋರ್ಡ್ ನ ಅನುಮತಿ ಪಡೆದು ಬಿಡುಗಡೆ ಆದ ಪ್ರೋಮೋ ಕುರಿತಾಗಿ ಪ್ರಶ್ನೆ ಮಾಡಿದ್ದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು,ಕೋರ್ಟ್ ಚಿತ್ರದ ನಿರ್ದೇಶಕ, ನಿರ್ಮಾಪಕ ಮತ್ತ ಸೆನ್ಸಾರ್ ಬೋರ್ಡ್ ಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದೆ.