Aditi Prabhudeva: ಹೊಸ ವರ್ಷಕ್ಕೆ ಗುಡ್ ನ್ಯೂಸ್, ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅದಿತಿ ಪ್ರಭುದೇವ!

0 18

Aditi Prabhudeva: ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು ಅದಿತಿ ಪ್ರಭುದೇವ. ಸೀರಿಯಲ್ ಇಂದ ನಟನೆ ಶುರು ಮಾಡಿದ ಅದಿತಿ ಪ್ರಭುದೇವ ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಬಹಳ ಸಂತೋಷವಾಗುತ್ತದೆ. ಪ್ರಸ್ತುತ ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯುಸಿಯೆಸ್ಟ್ ನಟಿಯರಲ್ಲಿ ಇವರು ಸಹ ಒಬ್ಬರು ಎಂದರೆ ತಪ್ಪಾಗುವುದಿಲ್ಲ. ಅದಿತಿ ಪ್ರಭುದೇವ ಅವರು ನಾಗಕನ್ನಿಕೆ ಸೀರಿಯಲ್ ನಲ್ಲಿ ಮಾಡಿದ ಪಾತ್ರ ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಗಳಿಸಿತ್ತು.

ನಾಗಕನ್ನಿಕೆ ಧಾರಾವಾಹಿಯಲ್ಲಿ ಅದಿತಿ ನಟನೆ, ಅವರು ಧರಿಸುತ್ತಿದ್ದ ಕಾಸ್ಟ್ಯೂಮ್ ಎಲ್ಲವನ್ನು ವೀಕ್ಷಕರು ಬಹಳ ಇಷ್ಟಪಟ್ಟರು. ಸಿಂಗ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಶಾನೆ ಟಾಪ್ ಆಗವಳೇ ಹಾಡಿನಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ನಂತರ ಬ್ರಹ್ಮಚಾರಿ ಸೇರಿದಂತೆ ಇನ್ನು ಕೆಲವು ಸಿನಿಮಾಗಳಲ್ಲಿ ಅದಿತಿ ನಟಿಸಿದರು. ಸ್ವಚ್ಛವಾಗಿ ಕನ್ನಡ ಮಾತನಾಡುವ ಅದಿತಿ ಎಲ್ಲಾ ಕನ್ನಡ ಹುಡುಗರ ಕ್ರಶ್ ಆಗಿದ್ದರು.

ತಮ್ಮ ಕನ್ನಡಾಭಿಮಾನದಿಂದಲೇ ಬಹುದೊಡ್ಡ ಅಭಿಮಾನಿ ಬಳಗ ಗಳಿಸಿಕೊಂಡವರು ಅದಿತಿ ಪ್ರಭುದೇವ. ಚಂದನವನದಲ್ಲಿ ದೊಡ್ಡ ಮಟ್ಟದಲ್ಲಿ ಬೇಡಿಕೆಯನ್ನು ಸಹ ಸೃಷ್ಟಿಸಿಕೊಂಡರು. 2022ರಲ್ಲಿ ವರ್ಷ ಇವರ ಮದುವೆ ಯಶಸ್ ಎನ್ನುವ ಹುಡುಗನ ಜೊತೆಗೆ ನಡೆಯಿತು. ಅದಿತಿ ಹಾಗೂ ಯಶಸ್ ಅವರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದೆ. ಮದುವೆಯ ನಂತರ ಸಂತೋಷವಾದ ದಾಂಪತ್ಯ ಜೀವನ ನಡೆಸುತ್ತಿದ್ದ ಅದಿತಿ ಅವರು ಇದೀಗ ಒಂದು ಗುಡ್ ನ್ಯೂಸ್ ನೀಡಿದ್ದಾರೆ.

ಅದಿತಿ ಅವರು ತಾಯಿ ಆಗುತ್ತಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂದು ಹೊಸ ವರ್ಷದ ವಿಶೇಷವಾಗಿ ಈ ಸಂತೋಷದ ಸುದ್ದಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಅದಿತಿ. ಇದೀಗ ಈ ವಿಚಾರ ವೈರಲ್ ಆಗಿದೆ.

Leave A Reply

Your email address will not be published.