Kannada News ,Latest Breaking News

ಮದುವೆ ಬಳಿಕ ನಟನೆ ಬಿಟ್ಟು ಪ್ಯಾರಿಸ್ ನಲ್ಲಿ ಸೆಟ್ಲ್ ಅಗ್ನಿಸಾಕ್ಷಿ ರಾಜೇಶ್ವರಿ ಹೇಗಿದ್ದಾರೆ!

0 248

Get real time updates directly on you device, subscribe now.

Agnisakshi kannada serila fame Rajeshwari :ಅಗ್ನಿ ಸಾಕ್ಷಿ  ಟಿವಿಯಲ್ಲಿ ಈ ಹಾಡು ಬರುತ್ತಿದ್ದಂತೆಯೇ ಮನೆಮಂದಿಯೆಲ್ಲಾ ಟಿವಿ ಮುಂದೆ ಕುಳಿತು ಬಿಡುತ್ತಾರೆ. ಅದರಲ್ಲಿ ಏನು ಕತೆ ಇದೆಯೊ ಗೊತ್ತಿಲ್ಲ. ಆದರೆ ಹುಡುಗರಿಂದ ಹಿಡಿದು ವಯಸ್ಸಾದವರು, ಹೆಣ್ಣು ಮಕ್ಕಳು ಎಲ್ಲರೂ ಈ ಧಾರಾವಾಹಿ ಮೋಹಕ್ಕೆ ಒಳಗಾಗಿದ್ದಾರೆ.

ಅಗ್ನಿಸಾಕ್ಷಿಯ ಚಂದ್ರಿಕಾ ಪಾತ್ರ ಬಹಳ ಫೇಮಸ್ ಆಗಿತ್ತು. ಈ ಧಾರಾವಾಹಿಯ ವಿಲನ್ ಪಾತ್ರ ಅದು. ರಾಜೇಶ್ವರಿ ಕೃಷ್ಣನ್ ಆ ಪಾತ್ರ ಮಾಡಿದ್ದರು. ಆ ಪಾತ್ರ ಎಷ್ಟು ಜನಪ್ರಿಯವಾಗಿತ್ತೆಂದರೆ ಜನರು ರಾಜೇಶ್ವರಿ ಹೆಸರನ್ನು ಮರೆತು ಚಂದ್ರಿಕಾ ಎಂದೇ ಕರೆಯುತ್ತಿದ್ದರು. ಆ ಮಟ್ಟಿಗೆ ಅದು ಹೆಸರುವಾಸಿಯಾಗಿದೆ.

ಚಂದ್ರಿಕಾರಿಗೆ ಏಕೋ ಏನೋ ಟಿವಿ ಧಾರಾವಾಹಿ ನಟನೆ ಬೇಸರವಾಗಿಯೋ ಅಥವಾ ಆಸ್ಟ್ರೇಲಿಯಾಗೆ ಹೋಗುವ ಆಕಾಂಕ್ಷೆಯಿಂದ ಆಸ್ಟ್ರೇಲಿಯಾದಲ್ಲಿ ವಾಸ ಮಾಡುವ ಕ್ರಿಷ್ ರವರನ್ನು ಮದುವೆಯಾದರು‌. ಈ ಮದುವೆಯ ನಂತರ ಚಂದ್ರಿಕಾ ಪಾತ್ರಧಾರಿ ಕೂಡ ಬದಲಾದರು‌. ಅಂದರೆ ರಾಜೇಶ್ವರಿ ನಟನೆಯಿಂದ ದೂರವಾದರು.

ಈಗ ಆಸ್ಟ್ರೇಲಿಯಾ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಒಂದು ಮಗು ಆಗಿದ್ದು ಬಹಳ ಮುದ್ದಾಗಿದೆ. ರಾಜೇಶ್ವರಿ ಕೃಷ್ಣನ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ. ಅವರು ಪತಿಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಾರೆ. ಅವರಿಗೆ ಫಾಲೋವರ್ಸ್ ಕೂಡ ಜಾಸ್ತಿ ಇದ್ದು ಅವರ ಫೋಟೋಗಳನ್ನು ಜನ ಇಷ್ಟಪಡುತ್ತಾರೆ.

ಧಾರಾವಾಹಿ ಮಾಡುತ್ತಿರುವಾಗ ಉದ್ದನೆಯ ಹೇರ್ ಸ್ಟೈಲ್’ನಲ್ಲಿ ಮಿಂಚಿದ್ದರು. ಅವರ ಹೇರ್ ಸ್ಟೈಲ್ ಟ್ರೆಂಡಿಂಗ್ ಆಗಿತ್ತು. ಈಗ ಮಗು ಆದ ಮೇಲೆ ಬಾಬ್ ಹೇರ್ ಸ್ಟೈಲ್ ಮಾಡಿ ಕ್ಯಾಮರಗೆ ಪೋಸ್ ಕೊಟ್ಟಿದ್ದಾರೆ.

ಅವರ ಮನೆಗೆ ಆಗಸ್ಟ್’ನಲ್ಲಿ ಪುಟ್ಟ ಲಕ್ಷ್ಮಿಯ ಆಗಮನವಾಗಿದೆ.ನಾಮಕಾರಣ ಶಾಸ್ತ್ರದ ಫೋಟೋ ಹಾಕಿದ್ದಾರೆ, ಅಂದ ಹಾಗೇ ರಾಜೇಶ್ವರಿ ಕೃಷ್ಣನ್ ಮಾಡುತ್ತಿದ್ದ ಚಂದ್ರಿಕಾ ಪಾತ್ರವನ್ನು ನಟಿ ಪ್ರಿಯಾಂಕ ಮಾಡಿದ್ದರು. ಈಗ ಧಾರಾವಾಹಿಯಲ್ಲಿ ಆ ಪಾತ್ರ ಮುಗಿದಿದೆ. ಚಂದ್ರಿಕ ಪಾತ್ರವನ್ನು ರಾಜೇಶ್ವರಿ ಕೃಷ್ಣನ್ ಮಾಡಿದರಷ್ಟೇ ಚೆಂದ ಇರುತ್ತೆ ಅನ್ನುವಷ್ಟರ ಮಟ್ಟಿಗೆ ಆಕೆ ಜನಪ್ರಿಯರಾಗಿದ್ದಾರೆ.

ಈಗ ಚೆಂದವಾಗಿ, ಗುಂಡುಗುಂಡಾಗಿ, ಮುದ್ದು ಮುದ್ದಾಗಿ ಕಾಣುವ ಚಂದ್ರಿಕಾರ ಮುಂದಿನ ಜೀವನಕ್ಕೆ ಶುಭವನ್ನು ಕೋರೋಣ.ಮತ್ತೆ ಆಕೆ ಕಿರಿತೆರೆ ಲೋಕಕ್ಕೆ ಬರಲಿ ಎಂದು ಅಭಿಮಾನಿಗಳ ಆಸೆಯಾಗಿದೆ.

Get real time updates directly on you device, subscribe now.

Leave a comment