ಆಯುರ್ವೇದದ ಪ್ರಕಾರ ಒಂದು ಹೊತ್ತಿಗೆ ಎಷ್ಟು ಪ್ರಮಾಣದ ಊಟ ಮಾಡಬೇಕು!

Health & Fitness

ಆಹಾರ ಎಂದರೆ ಎಲ್ಲರಿಗೂ ಇಷ್ಟnಆದ್ದರಿಂದ ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡುತ್ತೇವೆ.ಇನ್ನೂ ಯಾವುದಾದರೂ ಸಮಾರಂಭಗಳಿಗೆ ಹೋದರಂತೂ ಕೇಳಲೇಬೇಡಿ ಹೊಟ್ಟೆ ಹಿಡಿಸುವುದಕ್ಕಿಂತ ಹೆಚ್ಚಾಗಿಯೇ ತಿನ್ನುತ್ತೇವೆಆದರೆ ಅನೇಕರಿಗೆ ತಿಳಿದಿಲ್ಲ ಹೀಗೆ ಹೊಟ್ಟೆ ಬಿರಿಯುವ ಹಾಗೆ ತಿನ್ನುವುದರಿಂದ ಅನಾರೋಗ್ಯ ಕಾಡಗಬಹುದು.

ಇನ್ನು ಹೊಟ್ಟೆ ತುಂಬಾ ತಿನ್ನಬೇಕು ನಿಜ ಆದರೆ ಹಾಗಂತ ಹೊಟ್ಟೆ ಹಿಡಿಸಲಾರದಷ್ಟು ತಿನ್ನುವುದು ನಮ್ಮ ದೇಹಕ್ಕೆ ಒಳ್ಳೆಯದಲ್ಲ.ಹಾಗಾಗಿ ನಾವು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದಷ್ಟು ಸೇವಿಸಬೇಕು.ಇನ್ನೂ ಪ್ರತಿದಿನ ನಾವು ಎಷ್ಟು ಆಹಾರದ ಪ್ರಮಾಣವನ್ನು ಸೇವಿಸಬೇಕು ಎಂದು ತಿಳಿಯೋಣ ಬನ್ನಿ.

ಆಯುರ್ವೇದದ ಪ್ರಕಾರ ಸರಕಾ ಸಂಹಿತೆ ಯಲ್ಲಿ ನಮ್ಮ ಹೊಟ್ಟೆಯನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದೆ.ಮೊದಲನೆಯ ಭಾಗವು ತುಂಬಲು ನಾವು ಘನ ಆಹಾರವನ್ನು ತಿನ್ನಬೇಕು
ಅಂದರೆರೊಟ್ಟಿ , ಚಪಾತಿ , ಅನ್ನ ಇತ್ಯಾದಿ ಆಹಾರಗಳನ್ನು ಸೇವಿಸಬೇಕು.

ಎರಡನೇ ಭಾಗದಲ್ಲಿ ದ್ರವ ಆಹಾರವನ್ನು ಸೇವಿಸಬೇಕು ಆಯುರ್ವೇದದ ಪ್ರಕಾರ ಒಂದು ಹೊತ್ತಿಗೆ ಎಷ್ಟು ಪ್ರಮಾಣದ ಊಟ ಮಾಡಬೇಕು!ಮೂರನೇ ಭಾಗವನ್ನು ಖಾಲಿ ಬಿಡತಕ್ಕದ್ದು .ಹೀಗೆ ಮೂರನೇ ಭಾಗವನ್ನು ಖಾಲಿ ಬಿಡುವುದರಿಂದ ವಾತ ಪಿತ್ತ ಕಫ ಮುಂತಾದ ದೋಷಗಳು ಸಮಸ್ಥಿತಿಯಲ್ಲಿ ಆ ಖಾಲಿ ಜಾಗವನ್ನು ತುಂಬಿಕೊಳ್ಳುತ್ತದೆ ಮತ್ತು ಜೀರ್ಣಕ್ರಿಯೆಗೂ ಇದು ಸಹಕಾರಿಯಾಗಿದೆ.

ಒಟ್ಟಿನಲ್ಲಿ ಹೇಳಬೇಕೆಂದರೆ ಕಡಿಮೆ ತಿನ್ನುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ
ಹೀಗೆಂದು ಬಹಳ ರಿಸರ್ಚ್ ಗಳು ತಿಳಿಸಿವೆ.ಹೊಟ್ಟೆಯ ತುಂಬಾ ತಿನ್ನುವುದರಿಂದ ಬೊಜ್ಜಿನ ಸಮಸ್ಯೆ, ಅಜೀರ್ಣದಂತಹ ಸಮಸ್ಯೆ ಉಲ್ಬಣವಾಗುತ್ತದೆ ಆದ್ದರಿಂದ ಅರ್ಧ ಹೊಟ್ಟೆಯನ್ನು ತಿನ್ನುವುದನ್ನು ರೂಢಿಸಿಕೊಳ್ಳಿ.

ಇನ್ನು ಊಟ ಮಾಡುವಾಗ ಆದಷ್ಟು ಇನ್ನು ತಿನ್ನಬೇಕು ಎಂದು ಎನಿಸಿದಾಗಲೇ ಅಂದರೆ ಹಸಿವು ಇರುವಾಗಲೇ ಊಟವನ್ನು ಬಿಡಬೇಕು ಹಾಗೂ ಕಡಿಮೆ ಕ್ಯಾಲೋರಿ ಇರುವ ಆಹಾರವನ್ನು ಸೇವಿಸಬೇಕುಇದರಿಂದ ದೇಹದಲ್ಲಿರುವ ಕೊಬ್ಬು ಕರಗಿ ಬೊಜ್ಜು ಕಡಿಮೆಯಾಗುತ್ತದೆ.

ಧನ್ಯವಾದಗಳು.

Leave a Reply

Your email address will not be published.