Aishwarya Abhishek: ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ವಿಚ್ಛೇದನ ಖಚಿತ? ಅಮ್ಮನ ಮನೆಗೆ ಬಂದ ವಿಶ್ವಸುಂದರಿ!

0 12

Aishwarya Abhishek: ನಮ್ಮ ಕರ್ನಾಟಕದ ಬೆಡಗಿ, ಮಂಗಳೂರಿನ ಹುಡುಗಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಕರ್ನಾಟಕದ ಹೆಸರನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋದವರಲ್ಲಿ ಐಶ್ವರ್ಯ ರೈ ಕೂಡ ಒಬ್ಬರು. ಮೊದಲಿಗೆ ದಕ್ಷಿಣ ಭಾರತದಲ್ಲಿ ಹೆಸರು ಮಾಡಿದ್ದ ಐಶ್ವರ್ಯ ರೈ ಅವರು ಬಳಿಕ ಬಾಲಿವುಡ್ ನಲ್ಲಿ ಹೆಸರು ಮಾಡಿದರು. ಈಗಲೂ ಕೂಡ ಇವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ.

ಐಶ್ವರ್ಯ ರೈ ಅವರು ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿದ್ದಾರೆ. ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ಹಾಲಿವುಡ್ ನಲ್ಲಿ ಸಹ ಸಿನಿಮಾಗಳಲ್ಲಿ ನಟಿಸಿ, ವರ್ಲ್ಡ್ ಸಿನಿಮಾದಲ್ಲಿ ತಮ್ಮ ಹೆಸರು ಸ್ಥಾಪಿಸಿದ್ದಾರೆ. ವಿಶ್ವದಲ್ಲೇ ಅತ್ಯಂತ ಸುಂದರವಾದ ಮಹಿಳೆ ಎಂದು ಕೂಡ ಹೆಸರು ಪಡೆದಿದ್ದಾರೆ. ಕೆರಿಯರ್ ನಲ್ಲಿ ಪೀಕ್ ನಲ್ಲಿ ಇದ್ದಾಗಲೇ ಮದುವೆಯಾದರು. ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರೊಡನೆ ಮದುವೆಯಾದರು.

ಐಶ್ವರ್ಯ ರೈ ಅವರ ಅಭಿಷೇಕ್ ಬಚ್ಚನ್ ಅವರೊಡನೆ ಮದುವೆಯಾದ ಬಳಿಕ ಈ ಜೋಡಿಗೆ ಹೆಣ್ಣು ಮಗು ಜನಿಸಿತು, ಮಗಳಿಗೆ ಆರಾಧ್ಯ ಬಚ್ಚನ್ ಎಂದು ಹೆಸರಿಟ್ಟಿದ್ದಾರೆ. ಆರಾಧ್ಯ ಈಗ ಶಾಲೆಯಲ್ಲಿ ಓದುತ್ತಿದ್ದಾರೆ. 16 ವರ್ಷಗಳಿಂದ ಸುಂದರವಾಗಿದ್ದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರಬೇಕು ಎನ್ನುವ ವದಂತಿ ಕೇಳಿಬಂದಿದೆ. ಅಭಿಷೇಕ್ ಬಚ್ಚನ್ ಅವರು ವೆಡ್ಡಿಂಗ್ ರಿಂಗ್ ಇಲ್ಲದೆ ಕಾಣಿಸಿಕೊಂಡಿರುವುದು ಈ ವದಂತಿ ಕಾರಣವಾಗಿತ್ತು.

ಅದರ ಜೊತೆಗೆ ಈಗ ಮತ್ತೊಂದು ವಿಚಾರಕ್ಕೆ ಅನುಮಾನ ಶುರುವಾಗಿದೆ. ಐಶ್ವರ್ಯ ರೈ ಅವರ ಮಾವ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್, ಇದೀಗ ಇವರು ಇನ್ಸ್ಟಾಗ್ರಾಮ್ ನಲ್ಲಿ ಐಶ್ವರ್ಯ ರೈ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಈ ವಿಚಾರಗಳು ಮುನ್ನಲೆಗೆ ಬರುತ್ತಿದ್ದ ಹಾಗೆ ಐಶ್ವರ್ಯ ರೈ ಹಾಗೂ ಬಿಗ್ ಬಿ ಕುಟುಂಬದ ನಡುವೆ ಹಲವು ವರ್ಷಗಳಿಂದ ಎಲ್ಲವೂ ಸರಿಯಿಲ್ಲ ಎಂದು ಹೇಳಲಾಗುತ್ತಿದೆ.

ಆದರೆ ಈ ಫ್ಯಾಮಿಲಿ ಇಷ್ಟು ವರ್ಷಗಳ ಕಾಲ ಯಾವುದನ್ನು ಬಿಟ್ಟುಕೊಟ್ಟಿಲ್ಲ. ಅತ್ತೆ ಜಯಾ ಬಚ್ಚನ್ ಹಾಗೂ ಸೊಸೆ ಐಶ್ವರ್ಯ ರೈ ಅವರ ನಡುವೆ ಸಮಸ್ಯೆ ಇದೆ, ಇತ್ತ ಗಂಡ ಅಭಿಷೇಕ್ ಬಚ್ಚನ್ ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲ ಎನ್ನಲಾಗುತ್ತಿದೆ. ಹಾಗೆಯೇ ಈ ಜೋಡಿಯ ನಡುವೆ ಸಮಸ್ಯೆ ಇದ್ದರೂ ಸಹ ಮಗಳಿಗೋಸ್ಕರ ಇಬ್ಬರು ಜೊತೆಗಿದ್ದಾರೆ ಎನ್ನಲಾಗುತ್ತಿದೆ.

ಆದರೆ ಈಗ ಇವರ ನಡುವೆ ಸಮಸ್ಯೆ ಹೆಚ್ಚಾಗಿದ್ದು, ಯಾವಾಗ ಬೇಕಾದರು ವಿಚ್ಛೇದನ ಪಡೆಯುವ ಬಗ್ಗೆ ಘೋಷಿಸುವ ಪರಿಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ, ಆದರೆ ಈ ಜೋಡಿ ವಿಚ್ಛೇದನ ಪಡೆಯುವುದು ಕೂಡ ದೂರದ ಮಾತು ಎಂದು ಕೂಡ ಹೇಳಲಾಗುತ್ತಿದೆ. ಯಾಕೆಂದರೆ ಇವರದ್ದು ದೊಡ್ಡ ಮನೆತನ, ಅಷ್ಟು ಸುಲಭವಾಗಿ ಕುಟುಂಬದ ಸಮಸ್ಯೆಗಳನ್ನು ಈ ರೀತಿ ಮಾಡಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.