Aishwarya Arjun: ನಟ ಅರ್ಜುನ್ ಸರ್ಜಾ ಅವರ ಮಗಳ ಎಂಗೇಜ್ಮೆಂಟ್! ತಮಿಳು ನಟನ ಜೊತೆಗೆ ಮದುವೆಗೆ ಸಿದ್ಧವಾದ ಪ್ರೇಮ ಬರಹ ಚೆಲುವೆ

Written by Pooja Siddaraj

Published on:

Aishwarya Arjun: ದಕ್ಷಿಣ ಭಾರತ ಚಿತ್ರರಂಗದಲ್ಲಿ ಆಕ್ಷನ್ ಕಿಂಗ್ ಎಂದು ಹೆಸರು ಪಡೆದಿರುವವರು ನಟ ಅರ್ಜುನ್ ಸರ್ಜಾ. ಕನ್ನಡದವರಾದ ಅರ್ಜುನ್ ಸರ್ಜಾ ಅವರು ಹೆಚ್ಚು ಖ್ಯಾತಿ ಗಳಿಸಿದ್ದು ತಮಿಳಿನಲ್ಲಿ. ಇಂದಿಗೂ ಅದೇ ಚಾರ್ಮ್, ಅದೇ ಫೇಮ್ ಉಳಿಸಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಅವರು ಚಿತ್ರರಂಗದಲ್ಲಿ ವಿವಿಧ ರೀತಿಯ ಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಜೊತೆಗೆ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.

ನಟ ಅರ್ಜುನ್ ಸರ್ಜಾ ಅವರು ಇದೀಗ ತಮ್ಮ ಮಗಳಿಗೆ ನಿಶ್ಚಿತಾರ್ಥ ಮಾಡಿರುವ ಸುದ್ದಿ ವೈರಲ್ ಆಗಿದೆ, ನಿಶ್ಚಿತಾರ್ಥದ ಫೋಟೋಗಳು ಕೂಡ ವೈರಲ್ ಆಗಿದೆ. ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಸರ್ಜಾ ಅವರು ತಮಿಳು ಚಿತ್ರರಂಗದ ನಟ ಉಮಾಪತಿ ರಾಮಯ್ಯ ಅವರೊಡನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ನಿನ್ನೆ ಚೆನ್ನೈನಲ್ಲಿ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದಿದೆ.

ಐಶ್ವರ್ಯ ಅರ್ಜುನ್ ಅವರನ್ನು ಅರ್ಜುನ್ ಸರ್ಜಾ ಅವರೇ ಪ್ರೇಮ ಬರಹ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದರು. ಈ ಸಿನಿಮಾದಲ್ಲಿ ಐಶ್ವರ್ಯ ಅವರಿಗೆ ನಾಯಕನಾಗಿ ಕಿರುತೆರೆಯಲ್ಲಿ ಖ್ಯಾತಿ ಪಡೆದಿರುವ ಚಂದನ್ ಕುಮಾರ್ ಅವರು ನಟಿಸಿದ್ದರು. ಈ ಸಿನಿಮಾ ತಕ್ಕ ಮಟ್ಟಿಗೆ ಸದ್ದು ಮಾಡಿದರು ಕೂಡ, ಪ್ರೇಮ ಬರಹ ನಂತರ ಐಶ್ವರ್ಯ ಅವರು ಬೇರೆ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಇತ್ತೀಚೆಗೆ ಇವರ ಹೊಸ ಸಿನಿಮಾ ಸೆಟ್ಟೇರಿತ್ತು..

ತಮಿಳಿನಲ್ಲಿ ಎರಡನೇ ಸಿನಿಮಾ ಒಪ್ಪಿಕೊಂಡಿದ್ದರು ಐಶ್ವರ್ಯ. ಆದರೆ ಈಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ, ದಾಂಪತ್ಯ ಜೀವನಕ್ಕೆ ಕಾಲಿಡುವ ಸಂತೋಷದ ಸುದ್ದಿ ನೀಡಿದ್ದಾರೆ. ಐಶ್ವರ್ಯ ಅರ್ಜುನ್ ಅವರು ಉಮಾಪತಿ ರಾಮಯ್ಯ ಅವರನ್ನು ಪ್ರೀತಿಸುತ್ತಿದ್ದಾರೆ, ಶೀಘ್ರದಲ್ಲೇ ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿಯೊಂದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಇವರ ಪ್ರೀತಿಗೆ ಮನೆಯವರೆಲ್ಲರ ಒಪ್ಪಿಗೆ ಸಿಕ್ಕಿ, ಎಂಗೇಜ್ಮೆಂಟ್ ನಡೆದಿದೆ..

ಇನ್ನು ಐಶ್ವರ್ಯ ಅರ್ಜುನ್ ಅವರು ಮದುವೆ ಆಗಲಿರುವ ಉಮಾಪತಿ ರಾಮಯ್ಯ ಯಾರು ಎಂದರೆ, ತಮಿಳು ಚಿತ್ರರಂಗದಲ್ಲಿ ಹಾಸ್ಯನಟನಾಗಿ ಗುರುತಿಸಿಕೊಂಡಿರುವ ತಂಬಿ ರಾಮಯ್ಯ ಅವರ ಮಗ. ಇವರು ಕೂಡ ನಟನಾಗಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ಈವರೆಗೂ 4 ಸಿನಿಮಾಗಳಲ್ಲಿ ನಟಿಸಿದ್ದಾರೆ, ಹಾಗೆಯೇ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ಈ ನಟನನ್ನು ಪ್ರೀತಿಸಿ ಮದುವೆ ಆಗುತ್ತಿದ್ದಾರೆ ಐಶ್ವರ್ಯ ಅರ್ಜುನ್.

Leave a Comment