ನಮ್ಮ ಕರ್ನಾಟಕದ ಬೆಡಗಿ, ಮಂಗಳೂರಿನ ಹುಡುಗಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಕರ್ನಾಟಕದ ಹೆಸರನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋದವರಲ್ಲಿ ಐಶ್ವರ್ಯ ರೈ ಕೂಡ ಒಬ್ಬರು. ಮೊದಲಿಗೆ ದಕ್ಷಿಣ ಭಾರತದಲ್ಲಿ ಹೆಸರು ಮಾಡಿದ್ದ ಐಶ್ವರ್ಯ ರೈ ಅವರು ಬಳಿಕ ಬಾಲಿವುಡ್ ನಲ್ಲಿ ಹೆಸರು ಮಾಡಿದರು. ಈಗಲೂ ಕೂಡ ಇವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ.
ಐಶ್ವರ್ಯ ರೈ ಅವರು ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿದ್ದಾರೆ. ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ಹಾಲಿವುಡ್ ನಲ್ಲಿ ಸಹ ಸಿನಿಮಾಗಳಲ್ಲಿ ನಟಿಸಿ, ವರ್ಲ್ಡ್ ಸಿನಿಮಾದಲ್ಲಿ ತಮ್ಮ ಹೆಸರು ಸ್ಥಾಪಿಸಿದ್ದಾರೆ. ವಿಶ್ವದಲ್ಲೇ ಅತ್ಯಂತ ಸುಂದರವಾದ ಮಹಿಳೆ ಎಂದು ಕೂಡ ಹೆಸರು ಪಡೆದಿದ್ದಾರೆ. ಕೆರಿಯರ್ ನಲ್ಲಿ ಪೀಕ್ ನಲ್ಲಿ ಇದ್ದಾಗಲೇ ಮದುವೆಯಾದರು. ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರೊಡನೆ ಮದುವೆಯಾದರು.
ಐಶ್ವರ್ಯ ರೈ ಅವರ ಅಭಿಷೇಕ್ ಬಚ್ಚನ್ ಅವರೊಡನೆ ಮದುವೆಯಾದ ಬಳಿಕ ಈ ಜೋಡಿಗೆ ಹೆಣ್ಣು ಮಗು ಜನಿಸಿತು, ಮಗಳಿಗೆ ಆರಾಧ್ಯ ಬಚ್ಚನ್ ಎಂದು ಹೆಸರಿಟ್ಟಿದ್ದಾರೆ. ಆರಾಧ್ಯ ಬಚ್ಚನ್ ಈಗ 8ನೇ ತರಗತಿ ಓದುತ್ತಿದ್ದು, ಇವರ ಮಗಳು ಓದುತ್ತಿರುವ ಶಾಲೆಯಲ್ಲಿ ವರ್ಷಕ್ಕೆ ಕಟ್ಟುವ ಫೀಸ್ ಎಷ್ಟು ಎಂದು ನೋಡಿದರೆ, ನಿಮಗೆ ಶಾಕ್ ಆಗೋದು ಗ್ಯಾರಂಟಿ. ಒಂದು ವರ್ಷದ ಫೀಸ್ ನಲ್ಲಿ ಒಂದು ಕಾರನ್ನೇ ಖರೀದಿ ಮಾಡಬಹುದು.
ನಮ್ಮ ದೇಶದ ಅತ್ಯಂತ ದುಬಾರಿ ಶಾಲೆಯಲ್ಲಿ ಐಶ್ವರ್ಯ ರೈ ಅವರ ಮಗಳು ಓದುತ್ತಿದ್ದಾರೆ, ಅಂಬಾನಿ ಸಂಸ್ಥೆಯ ಶಾಲೆ ಅದಾಗಿದ್ದು, ಅಂಬಾನಿ ಅವರ ಸಂಸ್ಥೆಯ ಶಾಲೆ ಎಂದರೆ ಐಷಾರಾಮಿ ಹಾಗೂ ಅಷ್ಟೇ ದುಬಾರಿ ಎಂದು ಗೊತ್ತಾಗುತ್ತದೆ. ಧೀರೂ ಬಾಯಿ ಅಂಬಾನಿ ಶಾಲೆಯಲ್ಲಿ ಆರಾಧ್ಯ ಬಚ್ಚನ್ 8ನೇ ತರಗತಿ ಓದುತ್ತಿದ್ದಾರೆ. ಇದೇ ಶಾಲೆಯಲ್ಲಿ ಬಾಲಿವುಡ್ ನ ಹಲವು ಸೆಲೆಬ್ರಿಟಿಗಳು ಮಕ್ಕಳು ಓದುತ್ತಿದ್ದಾರೆ.
ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಮಕ್ಕಳು, ಚಂಕಿ ಪಾಂಡೆ ಅವರ ಮಗಳು, ಶಾರುಖ್ ಖಾನ್ ಅವರ ಮಗ ಅಬ್ರಹಾಂ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳ ಮಕ್ಕಳು ಇದೇ ಶಾಲೆಯಲ್ಲಿ ಓದುತ್ತಾರೆ. ಇನ್ನು ಆರಾಧ್ಯ ಬಚ್ಚನ್ ಅವರ 1 ರಿಂದ 7ನೇ ತರಗತಿ ವರೆಗಿನ ಶಾಲೆಯ ಫೀಸ್ 1.70 ಲಕ್ಷ ರೂಪಾಯಿ ಆಗಿದ್ದು, 8 ರಿಂದ 10ನೇ ತರಗತಿ ವರೆಗಿನ ಶಾಲೆಯ ಫೀಸ್ 4.48 ಲಕ್ಷ ರೂಪಾಯಿ ಆಗಿದೆ. 11 ರಿಂದ 12ನೇ ತರಗತಿವರೆಗಿನ ಸ್ಕೂಲ್ ಫೀಸ್ 9.65 ಲಕ್ಷ ರೂಪಾಯಿ ಆಗಿದೆ.
ಇಷ್ಟು ಫೀಸ್ ನೋಡಿದರೆ, ಒಂದು ಕಾರನ್ನೇ ಖರೀದಿ ಮಾಡಬಹುದು. ನಿಜಕ್ಕೂ ಇಷ್ಟು ದುಬಾರಿ ಫೀಸ್ ನಲ್ಲಿ ಒಂದು ಕಾರನ್ನೇ ಖರೀದಿ ಮಾಡಬಹುದು. ಶಾಲೆಯ ವಿಚಾರ ಹೀಗಿದ್ದರೆ, ಆಗಾಗ ಅಮ್ಮ ಮಗಳು ಇಬ್ಬರು ಕೂಡ ಮಾಧ್ಯಮಗಳ ಎದುರು ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರ ಫೋಟೋಸ್ ಮತ್ತು ವಿಡಿಯೋಗಳು ವೈರಲ್ ಆಗುತ್ತದೆ.