Akshaya tritiya 2023 :ಅಕ್ಷಯ ತೃತೀಯ ದಿನ ನೀವು ಮಾಡುವ ಈ ಸಣ್ಣ ಕೆಲಸದಿಂದ ನಿಮ್ಮ ಬದುಕೇ ಬದಲಾಗುತ್ತದೆ!
Akshaya tritiya 2023:ಅಕ್ಷಯ ತೃತೀಯಗೆ ಕೇವಲ ಕೆಲವು ದಿನಗಳು ಬಾಕಿ ಇದೆ. ಈ ದಿನ ಕೆಲವು ವಸ್ತುಗಳನ್ನು ಖರೀದಿ ಮಾಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ ಈ ದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ವೈವಾಹಿಕ ಬದುಕಿನಲ್ಲಿ ಇರುವ ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗೂ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುತ್ತದೆ. ಹಾಗಾದ್ರೆ ಈ ದಿನ ಯಾವ ಕೆಲಸ ಮಾಡಬೇಕು ಎಂಬುದು ಇಲ್ಲಿದೆ.
ಅಕ್ಷಯ ತೃತೀಯದಂದು ಸಾಮಾನ್ಯವಾಗಿ ಬಂಗಾರ ಖರೀದಿ ಮಾಡುವುದರಿಂದ ನಮ್ಮ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ ಈ ದಿನ ಅನೇಕ ಉತ್ತಮ ಕೆಲಸಗಳನ್ನು ಸಹ ಮಾಡುವುದರಿಂದ ಜೀವನದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ.
ಈ ಅಕ್ಷಯ ತೃತೀಯದಂದು ಯಾವುದೇ ಶುಭ ಕಾರ್ಯವನ್ನು ಸಹ ಮಾಡಬಹುದು. ಮುಖ್ಯವಾಗಿ ಮದುವೆಯನ್ನು ಕೂಡ ಮುಹೂರ್ತ ನೋಡದೇ ಮಾಡಬಹುದು ಎನ್ನಲಾಗುತ್ತದೆ. ಅದರ ಜೊತೆಗೆ ಈ ದಿನ ಕೆಲ ಕೆಲಸ ಮಾಡುವುದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆ ಇದ್ದರೆ ಅದಕ್ಕೂ ಪರಿಹಾರ ಸಿಗುತ್ತದೆ.
ಇದೆಲ್ಲದರ ಜೊತೆಗೆ ಹಲವಾರು ಜನರಿಗೆ ಅದೆಷ್ಟೇ ಪ್ರಯತ್ನ ಮಾಡಿದರೂ ಸಹ ಮದುವೆ ಭಾಗ್ಯ ಕೂಡಿ ಬರುವುದಿಲ್ಲ. ನೂರಾರು ಸಂಬಂಧಗಳನ್ನು ನೋಡಿದರೂ ಯಾವುದೂ ಮದುವೆಯ ತನಕ ಹೋಗುವುದಿಲ್ಲ. ಆದರೆ ಅಕ್ಷಯ ತೃತೀಯದಂದು ನಾವು ಹೇಳುವ ಈ ಕೆಲಸ ಮಾಡಿದರೆ ಬೇಗ ಮದುವೆ ಆಗುತ್ತದೆ.
ಅಕ್ಷಯ ತೃತೀಯದಂದು ನೀವು ಗುಲಾಬಿ ಮತ್ತು ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸಿದ್ರೆ ನಿಮ್ಮ ವೈವಾಹಿಕ ಬದುಕಿನಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ. ಹಾಗೆಯೇ, ಇದು ನಿಮ್ಮ ಬದುಕಿನಲ್ಲಿ ಇರುವ ಕೆಟ್ಟ ಶಕ್ತಿಗಳನ್ನು ಸಹ ಹೋಗಲಾಡಿಸಿ, ಹೊಸ ದಾರಿ ತೋರಿಸುತ್ತದೆ.
ರುದ್ರಾಭಿಷೇಕ: ಸಾಮಾನ್ಯವಾಗಿ ಶಿವರಾತ್ರಿಯಂದು ರುದ್ರಾಭಿಷೇಕ ಮಾಡಿದರೆ ಬಹಳ ಉತ್ತಮ ಎನ್ನಲಾಗುತ್ತದೆ. ಆದರೆ ಅಕ್ಷಯ ತೃತೀಯದಂದು ಸಹ ರುದ್ರಾಭಿಷೇಕ ಮಾಡಿದರೆ ನಿಮ್ಮ ಮದುವೆಗೆ ಇದ್ದ ಅಡೆತಡೆಗಳು ನಿವಾರಣೆ ಆಗುತ್ತದೆ.
ಇನ್ನು ಈ ದಿನ ಮದುವೆ ಆಗದ ಹೆಣ್ಣು ಮಕ್ಕಳು ತಪ್ಪದೇ ಗೌರಿ ಪೂಜೆ ಮಾಡಬೇಕು. ಹಾಗೆಯೇ, ಗೌರಿ ಪೂಜೆ ಮಾಡುವಾಗ ದೇವಿಗೆ ಕೆಂಪು ಬಣ್ಣದ ಶಾಲ್ ಅರ್ಪಿಸುವುದರಿಂದ ಬೇಗ ಮದುವೆ ಆಗುತ್ತದೆ ಎನ್ನುವ ನಂಬಿಕೆ ಇದೆ.
ಇನ್ನು ಹಳದಿ ಬಣ್ಣದ ಬಟ್ಟೆಯನ್ನು ಧರಿಸಿದರೆ ನಿಮಗೆ ಅದೃಷ್ಟ ಖುಲಹಿಸುತ್ತದೆ. ನೀವು ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ನೀವು ಯಶಸ್ಸನ್ನು ಕಾಣಬಹುದು. ಈ ದಿನ ಹೆಣ್ಣು ಮಕ್ಕಳು ತಲೆಗೆ ಹೂವನ್ನು ಮುಡಿದು ಪೂಜೆ ಮಾಡಿದರು ಸಹ ತುಂಬಾ ಒಳ್ಳೆಯದು.Akshaya tritiya 2023