ನಿಮ್ಮ ಮೇಲೂ ಮಾಟಮಂತ್ರ ಮಾಡಿಸಿದ್ದಾರಾ?ಮಾಟಮಂತ್ರ ಪ್ರಯೋಗದ ಬಗ್ಗೆ ಕೆಲವು ವಿಷಯಗಳು!
ಬ್ಲಾಕ್ ಮ್ಯಾಜಿಕ್ಅಂದರೆ ಮಾಟ ಮಂತ್ರ ಸತ್ಯನಾ ಅಥವಾ ಹೆದರಿಸಲು ಹೀಗೆ ಮಾಡುತ್ತಾರಾ?
ಹಾಗೂಕೆಲವರು ನಿಂಬೆಹಣ್ಣನ್ನು ಮನೆಮುಂದೆ ಹಾಕುವುದು ಅಥವಾ ಸ್ಮಶಾನದಲ್ಲಿರುವ ತಲೆಬುರುಡೆ ಇನ್ನಿತರ ಮೂಳೆಗಳನ್ನು ಮನೆಮುಂದೆ ಹಾಕುವುದು ಅಥವಾ ಮೊಟ್ಟೆ ಒಡೆಯುವುದು ಅಥವಾ ಕಪ್ಪು ದಾರ ಕಟ್ಟುವುದುಇತ್ಯಾದಿಗಳನ್ನು ಮಾಡುತ್ತಿರುತ್ತಾರೆ ಆದರೆ ಹೀಗೆ ಮಾಡಿದ ತಕ್ಷಣ ಮಾಟ ಮಂತ್ರ ನಮಗೆ ಅಂಟುತ್ತದೆಯೇ ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ..
ಮಾಟ ಮಂತ್ರ
ಇದು ನಮ್ಮ ಭಾರತದಲ್ಲಿ ಕೆಲವು ಕಡೆ ನಡೆಯುತ್ತಾದರೂ ಇದರ ಸತ್ಯ ಅಸತ್ಯದ ಬಗ್ಗೆ ಅನೇಕರಿಗೆ ತಿಳಿದಿಲ್ಲ.
ಕೇವಲ ಮಾಟ ಮಂತ್ರ ಮಾಡಿಸಿದ ತಕ್ಷಣ ಅದು ಅಂಟುವುದಿಲ್ಲ
ಬದಲಾಗಿ ಅದನ್ನು ನಾವು ಸ್ವೀಕರಿಸಿದಾಗ ಮಾತ್ರ ಅದು ನಮಗೆ ಅಂಟುತ್ತದೆ.
ಇನ್ನು
ನಮ್ಮ ದೇಹವನ್ನು 3 ಕೋಶಗಳು ಅಂದರೆ 3 ಕವಚಗಳು ರಕ್ಷಣೆ ಮಾಡುತ್ತವೆ.
ಅವು ಯಾವೆಂದರೆ
1 ) ದೇಹ ಮಯ ಕೋಶ
2 ) ಜ್ಞಾನಮಯ ಕೋಶ
3 ) ಪ್ರಾಣಮಯ ಕೋಶ
ಯಾವಾಗ ನಮ್ಮ ದೇಹ , ಮನಸ್ಸು ಮತ್ತು ಆತ್ಮಸ್ಥೈರ್ಯ ಗಟ್ಟಿಯಾಗಿರುತ್ತದೆಯೋ ಆಗ ನಮ್ಮ ಮೇಲೆ ಯಾವುದೇ ರೀತಿಯ ಮಾಟ ಮಂತ್ರದ ಪ್ರಭಾವ ಬೀರುವುದಿಲ್ಲ .
ದೇಹ ಮಯ ಕೋಶದಲ್ಲಿ ಯಾವುದೇ ರೀತಿಯ ತೊಂದರೆ ಇದ್ದರೂ ಸಹ ಮಾಟಮಂತ್ರ ಪ್ರಯೋಗ ಆಗುತ್ತದೆ.
ಅದೇ ರೀತಿ ಜ್ಞಾನ ಮಯ ಕೋಶದಲ್ಲಿ ಮನಸ್ಸು ದುರ್ಬಲವಾಗಿದ್ದರೆ ಮಾಟಮಂತ್ರದ ಪ್ರಯೋಗ ಪ್ರಭಾವ ಬೀರುತ್ತದೆ.
ಅಂದರೆ ಉದಾಹರಣೆಗೆ ಯಾವುದೇ ಓರ್ವ ವ್ಯಕ್ತಿ ಒಬ್ಬರ ಮೇಲೆ ಮಾಟ ಮಂತ್ರ ಮಾಡಿಸಿದಾಗ ಅದನ್ನು ಮಾಡಿಸಿಕೊಂಡಾತ ತೆಗೆದುಕೊಂಡರೆ ಮಾತ್ರ ಅವನ ಮೇಲೆ ಆ ಪ್ರಯೋಗ ಅಂಟುತ್ತದೆ ಇಲ್ಲವಾದಲ್ಲಿ ಆ ಮಾಟಮಂತ್ರದ ಪ್ರಯೋಗ ಯಾವುದಕ್ಕೂ ಪ್ರಯೋಜನವಿರುವುದಿಲ್ಲ.
ಆದ್ದರಿಂದ ಆತಂಕ ಭಯ ಪಡದೆ ಧೈರ್ಯದಿಂದ ಇರುವುದು ಒಳ್ಳೆಯದು.
ಅಂದರೆ ಏನೋ ಇದೆ ಅಂದುಕೊಂಡರೆ ಇದೆ ,ಏನೂ ಇಲ್ಲ ಎಂದುಕೊಂಡರೆ ಏನೂ ಇಲ್ಲ ಎನ್ನುವಂತೆ ಮಾಟ ಮಂತ್ರ ನಿಮ್ಮ ಮೇಲೆ ಆಗಿದೆ ಎಂದು ನೀವು ಚಿಂತಿಸಿಕೊಂಡು ನಿಮ್ಮ ದೇಹ , ಮನಸ್ಸು ಮಾತೃ ಆತ್ಮಸ್ಥೈರ್ಯವನ್ನು ದುರ್ಬಲಗೊಳಿಸಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ.
ಪ್ರಾಣಮಯ ಕೋಶ ಅಂದರೆ ನಮ್ಮ ಆತ್ಮಸ್ಥೈರ್ಯ ಗಟ್ಟಿಯಾಗಿದ್ದರೆ ಮಾಟ ಮಂತ್ರ ಎಷ್ಟೇ ಶಕ್ತಿಯುತವಾಗಿದ್ದರೂ ಪ್ರಭಾವ ಬೀರುವುದಿಲ್ಲ.
ಆದ್ದರಿಂದ ನಮ್ಮ ದೇಹ , ಮನಸ್ಸು ಮತ್ತು ಆತ್ಮ ಸ್ಥೈರ್ಯವನ್ನು ಗಟ್ಟಿಯಾಗಿಟ್ಟುಕೊಂಡು ಇಂತಹವಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಸಕಾರಾತ್ಮಕವಾಗಿ ಚಿಂತಿಸುತ್ತಾ ಬಾಳೋಣ.
ಧನ್ಯವಾದಗಳು.