Amala Shaji: 30 ಸೆಕೆಂಡ್ಸ್ ರೀಲ್ ಗೆ 2 ಲಕ್ಷ ಬೇಡಿಕೆ ಇಟ್ಟ ಸೋಷಿಯಲ್ ಮೀಡಿಯಾ ಸ್ಟಾರ್!

0 16

Amala Shaji: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಸೋಷಿಯಲ್ ಮೀಡಿಯಾ ಇಂದಲೇ ಹಣ ಗಳಿಸುತ್ತಿದ್ದಾರೆ. ರೀಲ್ಸ್ ಮೂಲಕ ಫೇಮಸ್ ಆಗಿ, ಅದರಿಂದಲೇ ಹೆಚ್ಚು ಫಾಲೋವರ್ಸ್ ಗಳಿಸಿ, ಲಕ್ಷಗಟ್ಟಲೇ ಹಣ ಸಂಪಾದನೆ ಮಾಡುತ್ತಿದ್ದಾರೆ. ಈಗ ಇದೇ ರೀತಿ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ಅಮಲಾ ಶಾಜಿ ಅವರ ಕೇಸ್ ಕೂಡ ಆಗಿದೆ.

ಅಮಲಾ ಶಾಜಿ ಅವರು ಇನ್ಸ್ಟಾಗ್ರಾಮ್ ಮೂಲಕ ಫೇಮಸ್ ಆಗಿರುವ ಹುಡುಗಿ. ರೀಲ್ಸ್ ಮಾಡಿ ಫೇಮಸ್ ಆಗಿ ಬರೋಬ್ಬರಿ 4 ಮಿಲಿಯನ್ ಫಾಲೋವರ್ಸ್ ಗಳಿಸಿಕೊಂಡಿದ್ದಾರೆ. ಈಕೆ ಒಂದು 30 ಸೆಕೆಂಡ್ಸ್ ರೀಲ್ ಮಾಡೋದಕ್ಕೆ 2 ಲಕ್ಷ ಬೇಡಿಕೆ ಇಟ್ಟಿದ್ದಾರಂತೆ. ಈ ವಿಚಾರವನ್ನು ತಮಿಳು ನಿರ್ದೇಶಕ ಪಿರಿಯನ್ ಅವರು ರಿವೀಲ್ ಮಾಡಿದ್ದಾರೆ.

30 ಸೆಕೆಂಡ್ಸ್ ರೀಲ್ಸ್ ಮಾಡೋದಕ್ಕೆ, 2 ಲಕ್ಷದ ಜೊತೆಗೆ ಫ್ಲೈಟ್ ಟಿಕೆಟ್ಸ್ ಗೆ ಕೂಡ ಬೇಡಿಕೆ ಇಟ್ಟಿದ್ದರಂತೆ ಅಮಲಾ. ಇದೀಗ ಈ ವಿಚಾರ ವೈರಲ್ ಆಗುತ್ತಿದೆ. ಅಮಲಾ ಅವರಿಗೆ ಕೇರಳ ಮಾತ್ರವಲ್ಲ, ತಮಿಳು ನಾಡಿನಲ್ಲಿ ಕೂಡ ಫ್ಯಾನ್ ಫಾಲೋಯಿಂಗ್ ಇದೆ. ಆದರೂ ಇಷ್ಟೊಂದು ಬೇಡಿಕೆ ಇಟ್ಟಿದ್ದಾರಾ ಎಂದು ಜನರು ಕೂಡ ಶಾಕ್ ಆಗಿದ್ದಾರೆ.

Leave A Reply

Your email address will not be published.